• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

70ರ ಹೊಸಿಲಿನಲ್ಲಿ ಗಿರಿಜಾ ಲೋಕೇಶ್; "ಗಿರಿಜಾ ಪರಸಂಗ" ಪುಸ್ತಕ ಬಿಡುಗಡೆ

|

ಬೆಂಗಳೂರು, ಜನವರಿ 08: ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಗಿರಿಜಾ ಲೋಕೇಶ್ ಅವರೀಗ 70ರ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಲೋಕೇಶ್ ಅವರು ಸಾವಿರಾರು ನಾಟಕಗಳ ಮೂಲಕ ಮನೆ ಮಾತಾದವರು. 1963ರಲ್ಲಿ ರಂಗಭೂಮಿ ಪ್ರವೇಶಿಸಿದ ನಂತರ ಅವರು ಹೊರಳಿದ್ದು ಸಿನಿಮಾ ಲೋಕಕ್ಕೆ. ಕಾಕನಕೋಟೆ, ಭುಜಂಗಯ್ಯನ ದಶಾವತಾರ, ದಾಹ ಹೀಗೆ ನೂರಾರು ಸಿನಿಮಾಗಳಲ್ಲಿನ ಗಿರಿಜಾ ಲೋಕೇಶ್ ಅವರ ಉತ್ಸಾಹದ ನಟನೆಯನ್ನು ಮರೆಯಲು ಸಾಧ್ಯವಾದೀತೇ?

ಗಿರಿಜಾ ಲೋಕೇಶ್ ಅವರಿಗೆ ಪ್ರತಿಷ್ಠಿತ 'ಧ್ವನಿ' ಪ್ರಶಸ್ತಿ

ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ, ಮುನ್ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ನಟನೆಯಿಂದ ಜನಮನ್ನಣೆ ಗಳಿಸಿದ ಗಿರಿಜಾ ಲೋಕೇಶ್ ಅವರನ್ನು ಸಾಕಷ್ಟು ಪ್ರಶಸ್ತಿಗಳೂ ಅರಸಿಕೊಂಡು ಬಂದಿವೆ.

ಮೇರು ನಟ ಲೋಕೇಶ್ ಅವರ ಪತ್ನಿಯಾಗಿರುವ ಗಿರಿಜಾ ಲೋಕೇಶ್ ಅವರು ಇದೇ ಜನವರಿ 10ರಂದು 70ರ ವಸಂತಕ್ಕೆ ಕಾಲಿರಿಸಲಿದ್ದಾರೆ. ಈ ಸವಿಗಳಿಗೆಯಲ್ಲಿ ಅವರ ಬದುಕಿನ ನೆನಪುಗಳನ್ನು ಸ್ಮರಿಸಲು ಜನವರಿ 10ರಂದು "ಗಿರಿಜಾ ಲೋಕೇಶ್ 70 ಸಂವಾದ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ನಿರ್ದೇಶಕ, ನಟ ನಾಗಾಭರಣ ಉದ್ಘಾಟಿಸಲಿದ್ದು, ನಿರ್ದೇಶಕ ಟಿಎನ್ ಸೀತಾರಾಮ್, ದೊಡ್ಡಣ್ಣ, ಶೈಲಶ್ರೀ, ಆಶಾಲತಾ, ಫಣಿರಾಮಚಂದ್ರ, ವಿಜಯಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಗೆ ಅಂಕಿತ ಪುಸ್ತಕ ಪ್ರಕಟಿಸಿರುವ "ಗಿರಿಜಾ ಪರಸಂಗ" ಪುಸ್ತಕವನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಗಿರಿಜಾ ಲೋಕೇಶ್ ಅವರ ಈ ಆತ್ಮಕಥನವನ್ನು ಜೋಗಿ ನಿರೂಪಿಸಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ವಿಜಯಮ್ಮ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಗಿರೀಶ ಕಾಸರವಳ್ಳಿ, ಸಂದೇಶ್ ನಾಗರಾಜ್, ಜಯಮಾಲಾ, ಎಚ್ ಎಸ್ ವೆಂಕಟೇಶಮೂರ್ತಿ, ಮುಖ್ಯಮಂತ್ರಿ ಚಂದ್ರು ಹಾಗೂ ಜೋಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

English summary
Kannada famous actress Girija Lokesh 70th birthday on jan 10. "Girija Parasanga" book will be released on jan 10 at suchitra film society near bangashankari, bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X