BMTC: ಸಿಲ್ಲಿ ಮ್ಯಾಟರ್‌ಗೆ ಬಿಎಂಟಿಸಿ ಬಸ್‌ನಲ್ಲಿ ಚಪ್ಪಲಿ, ಶೂಗಳಿಂದ ಬಡಿದಾಡಿಕೊಂಡ ಯುವತಿಯರು
ಬೆಂಗಳೂರು, ಫೆಬ್ರವರಿ, 08: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಿಟಕಿ ಪಕ್ಕದ ಸೀಟ್‌ಗಾಗಿ ಹೊಡೆದಾಡಿಕೊಂಡ ಘಟನೆಗಳು ಹಲವೆಡೆ ನಡೆದಿವೆ. ಹಾಗೆಯೇ ಇದೀಗ ಯುವತಿಯರಿಬ್ಬರು ಬಿಎಂಟಿಸಿ ಬಸ್‌ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಚಪ್ಪಳಿ, ಶೂನಲ್ಲಿ ಬಡಿದಾಡಿಕೊಂಡ ವಿಚಿತ್ರ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಜೆಸ್ಟಿಕ್ ಟು ಪೀಣ್ಯಾ ಬಸ್‌ನಲ್ಲಿ ಯುವತಿಯರಿಬ್ಬರು ಚಪ್ಪಲಿಯಲ್ಲಿ ಬಡಿದಾಡಿಕೊಂಡ ಘಟನೆ ನಡೆದಿದೆ.
Women slipper each other on a moving bus in Bengaluru!
— TOI Bengaluru (@TOIBengaluru) February 8, 2024
A verbal argument between two women passengers on BMTC bus, over sliding the window glass, took a serious turn when they started hitting each other with shoes.
(Source: Fwd) pic.twitter.com/keaSm6Y4WD
ಮೆಜೆಸ್ಟಿಕ್ನಿಂದ ಪೀಣ್ಯ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಯುವತಿಯರು ಮಧ್ಯೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಚಪ್ಪಲಿ, ಶೂ ನಿಂದ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೀವನ್ನು ಅಲ್ಲಿದ್ದ ಇನ್ನಿತರ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲಾತಣಗಳಲ್ಲಿ ಹರಿದಾಡುತ್ತಿದೆ.
ವಿದ್ಯಾರ್ಥಿ ಮೇಲೆ ಹಲ್ಲೆ: ಇನ್ನು ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡವರ ಮಾರ್ಗದಿಂದ ಹಿರಿಯೂರು ಮಾರ್ಗವಾಗಿ ಬರುವ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಸಣ್ಣ ವಿಚಾರಕ್ಕೆ ವಿದ್ಯಾರ್ಥಿ ಹಾಗೂ ಪ್ರಯಾಣಿಕರ ಮಧ್ಯೆ ಜಗಳವಾಗಿದ್ದು, ಈ ಸಂಬಂಧ ವಿದ್ಯಾರ್ಥಿ ಶಿವರಾಜ್ (17) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.
ಹಲ್ಲೆ ನಡೆಸಿದ್ದು ಯಾರು?: ಆದಿವಾಲ ಭೋವಿ ಕಾಲೋನಿಯ ತಿರುಮಲ ನಗರದ ಯೋಗಿ ಮತ್ತು ಸುಧಾಕರ್ ಹಾಗೂ ಇವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಡು ರಸ್ತೆಯಲ್ಲೆ ಖಾಸಗಿ ಬಸ್ ನಿಲ್ಲಿಸಿ ವಿದ್ಯಾರ್ಥಿ ಶಿವರಾಜ್ ಮೇಲೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದರು. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಪೊಲೀಸರು ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದರು.












Click it and Unblock the Notifications