Namma Metro Feeder Bus; 10 ಹೊಸ ಮಾರ್ಗದಲ್ಲಿ ಬಿಎಂಟಿಸಿ ಸಂಚಾರ

ಬೆಂಗಳೂರು, ಆಗಸ್ಟ್ 28; ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ ರೈಲುಗಳು. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್‌ಗಳನ್ನು ಓಡಿಸುತ್ತದೆ. ಈ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಸಂಸ್ಥೆಗೆ ಸಹ ಆದಾಯವನ್ನು ಮಾಡಿಕೊಳ್ಳುತ್ತಿದೆ.

ಬಿಎಂಟಿಸಿ ನಗರದಲ್ಲಿ 103 ಬಸ್‌ಗಳನ್ನು ಮೆಟ್ರೋ ಫೀಡರ್‌ ಬಸ್‌ಗಳನ್ನು ಓಡಿಸುತ್ತಿದೆ. ಎರಡು ಡಜನ್ ಮೆಟ್ರೋ ಸ್ಟೇಷನ್‌ಗಳನ್ನು ಸಂಪರ್ಕಿಸಲು ಈ ಬಸ್‌ಗಳು ಪ್ರತಿದಿನ ಸುಮಾರು 2000 ಟ್ರಿಪ್ ಸಂಚಾರ ನಡೆಸುತ್ತಿವೆ. ಮೆಟ್ರೋ ಪ್ರಯಾಣಿಕರಿಗಾಗಿ ಇನ್ನಷ್ಟು ಬಸ್‌ಗಳನ್ನು ಓಡಿಸಲು ಬಿಎಂಟಿಸಿ ಮುಂದಾಗಿದೆ, ಇದಕ್ಕಾಗಿ ಯೋಜನೆ ಸಿದ್ಧಪಡಿಸುತ್ತಿದೆ.

BMTC To Launch Namma Metro Feeder Bus Services On 10 More Routes

ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ಮೆಟ್ರೋ ಓಡುತ್ತಿದೆ. ಆದರೆ ಈ ವರ್ಷದ ಅಂತ್ಯಕ್ಕೆ ಹಳದಿ ಸೇರಿದಂತೆ ವಿವಿಧ ಮಾರ್ಗ ಮೆಟ್ರೋ ರೈಲು ಸಂಚಾರಕ್ಕೆ ಮುಕ್ತವಾಗಲಿದೆ. ಆಗ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಲಿದೆ.

10 ಹೊಸ ಮಾರ್ಗದಲ್ಲಿ ಬಸ್; ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು 10 ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್‌ ಬಸ್‌ಗಳನ್ನು ಓಡಿಸಲು ಮುಂದಾಗಿದೆ. ಅಲ್ಲದೇ ಈಗ ಇರುವ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ಪರಿಚಯಿಸಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ.

ಬೆಂಗಳೂರು ನಗರದಲ್ಲಿ ಮೆಟ್ರೋ ಸೇವೆ ಆರಂಭವಾಗಿ 12 ವರ್ಷ ಕಳೆಯುತ್ತಾ ಬಂದಿದೆ. ಆದರೆ ಮೆಟ್ರೋ ನಿಲ್ದಾಣಗಳಿಂದ ಬೇರೆ ಪ್ರದೇಶಕ್ಕೆ ಹೋಗುವುದು ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಆಟೋಗಳು ದುಬಾರಿ ದರವನ್ನು ಕೇಳುವುದರಿಂದ ಜನರು ಮೆಟ್ರೋ ಫೀಡರ್‌ ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದ್ದರಿಂದ ಈ ಸೇವೆಯೂ ಜನಪ್ರಿಯವಾಗಿದೆ.

ಜನರು ಬಿಎಂಟಿಸಿಯ ಮೆಟ್ರೋ ಫೀಡರ್‌ ಬಸ್‌ಗಳ ಬಗ್ಗೆ ಕೆಲವು ದೂರುಗಳನ್ನು ಹೇಳುತ್ತಾರೆ. ಅವುಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಇಲ್ಲ. ಜಾಲಹಳ್ಳಿ, ಕೆಂಗೇರಿ, ಯೆಲಚೇನಹಳ್ಳಿ ಮುಂತಾದ ನಿಲ್ದಾಣಗಳಿಗೆ ಕಡಿಮೆ ಬಸ್‌ಗಳಿವೆ ಎಂಬುದು ಸೇರಿದೆ. ಸರಿಯಾದ ಬೋರ್ಡ್‌ಗಳಿಲ್ಲದೇ ಸಂಚಾರ ನಡೆಸುವ ಬಸ್‌ಗಳಿಂದ ಮೆಟ್ರೋ ಫೀಡರ್‌ ಬಸ್‌ಗಳು ಇವೆ ಎಂಬುದು ಜನರಿಗೆ ತಿಳಿಯುತ್ತಿಲ್ಲ.

ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಫೀಡರ್‌ ಬಸ್‌ಗಳ ಕುರಿತು ಘೋಷಣೆ ಮಾಡುವುದು ಸೇರಿದಂತೆ ಹಲವಾರು ಹೊಸ ಕ್ರಮಗಳ ಮೂಲಕ ಮತ್ತಷ್ಟು ಜನರನ್ನು ಮೆಟ್ರೋ ಫೀಡರ್‌ ಬಸ್‌ಗಳತ್ತ ಆಕರ್ಷಿಸಲು ಬಿಎಂಟಿಸಿ ಮುಂದಾಗಿದೆ. ಮೆಟ್ರೋ ರಾತ್ರಿ 11.30ರ ತನಕ ಸೇವೆ ನೀಡುತ್ತದೆ. ಆದರೆ ಅಷ್ಟು ಹೊತ್ತಿನ ತನಕ ಬಸ್ ಲಭ್ಯವಿರುವುದಿಲ್ಲ ಎಂಬ ಆರೋಪವೂ ಇದೆ.

ಜನರು ಮೆಟ್ರೋ ಇಳಿದ ತಕ್ಷಣ ನಿಲ್ದಾಣದ ಹೊರಗೆ ಅವರಿಗೆ ಮೆಟ್ರೋ ಫೀಡರ್‌ ಬಸ್‌ಗಳು ಲಭ್ಯವಿರಬೇಕು ಈ ಮಾದರಿಯಲ್ಲಿ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ. ಬಿಎಂಟಿಸಿ, ಬಿಎಂಆರ್‌ಸಿಎಲ್ ಮತ್ತು ಡಲ್ಟ್‌ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿ ಯಾವ ಯಾವ ನಿಲ್ದಾಣದಿಂದ ಮೆಟ್ರೋ ಫೀಡರ್‌ ಬಸ್‌ಗಳನ್ನು ಓಡಿಸಬಹುದು ಎಂದು ವರದಿಯೊಂದನ್ನು ತಯಾರಿಸಲಿವೆ.

ಬಿಎಂಟಿಸಿ ಶೀಘ್ರವೇ 100 ಮಿನಿ ಬಸ್‌ಗಳನ್ನು ಖರೀದಿ ಮಾಡಲಿದೆ. ಮೆಟ್ರೋ ನಿಲ್ದಾಣದಿಂದ ಪ್ರತಿ 20 ನಿಮಿಷಕ್ಕೆ ಒಂದು ಬಸ್ ಓಡಿಸುವಂತೆ ಯೋಜನೆ ರೂಪಿಸಲಾಗುತ್ತಿದೆ. ಬಿಎಂಟಿಸಿಗೆ ಎಲೆಕ್ಟ್ರಿಕ್, ಡಿಸೇಲ್ ಸೇರಿ ಹೊಸ ಬಸ್ ಸೇರ್ಪಡೆಯಾದ ಬಳಿಕ ಮೆಟ್ರೋ ಫೀಡರ್‌ ಬಸ್‌ಗಳನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.

10 ಹೊಸ ಮಾರ್ಗಗಳು

* ನ್ಯಾಷನಲ್ ಕಾಲೇಜು ಬಸ್‌ ನಿಲ್ದಾಣ ದಿಂದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣ. ವಯಾ ಬಸವನಗುಡಿ, ಸಜ್ಜನ್‌ರಾವ್ ಸರ್ಕಲ್‌.

* ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಶಾಂತಿನಗರ ಬಸ್ ನಿಲ್ದಾಣ. ವಯಾ ಆರ್‌. ವಿ. ರಸ್ತೆ, ಎಂ. ಎನ್. ಕೃಷ್ಣರಾವ್ ಪಾರ್ಕ್

* ಶಾಂತಿನಗರ ದಿಂದ ಲಾಲ್ ಬಾಗ್ ಮೆಟ್ರೋ ನಿಲ್ದಾಣ. ವಯಾ ವಿಲ್ಸನ್ ಗಾರ್ಡನ್, ಕೆಎಚ್‌ ರೋಡ್.

* ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣ. ವಯಾ ಹೊಸಹಳ್ಳಿ, ಮಾಗಡಿ ರೋಡ್, ಕಾರ್ಡ್‌ ರೋಡ್

* ವಿಜಯನಗರ ಮೆಟ್ರೋ ಸ್ಟೇಷನ್‌ನಿಂದ ಪಂಚಶೀಲ ನಗರ ಅಥವ ಸುಮನಹಳ್ಳಿ. ವಯಾ ಬಿಡಿಎ ಕಾಂಪ್ಲೆಕ್ಸ್

* ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ಶ್ರೀನಿವಾಸ ನಗರ. ವಯಾ ಅವಲಹಳ್ಳಿ, ಗಿರಿನಗರ

* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣ. ವಯಾ ಲ್ಯಾವೆಲ್ಲೇ ರಸ್ತೆ, ಸೆಂಟ್‌ ಮಾರ್ಕ್‌ ರೋಡ್, ಸೆಂಟ್ ಜೋಸೆಫ್ ಕಾಲೇಜು

* ಹಲಸೂರು ಮೆಟ್ರೋ ನಿಲ್ದಾಣದಿಂದ ಜಯಮಹಲ್. ವಯಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೋಲ್ಸ್ ಪಾರ್ಕ್, ಆರ್‌ಎಂಝೆಡ್ ಮಿಲೇನಿಯಾ.

* ಕೋಣನಕುಂಟೆ ಮೆಟ್ರೋ ನಿಲ್ದಾಣದಿಂದ ಜಂಬೂ ಸವಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+