BMTC: ಆಗಸ್ಟ್ 15ರಿಂದ ಎರಡು ಹೊಸ ಮಾರ್ಗ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 13: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಹೊಸ ಮಾರ್ಗಗಳನ್ನು ಘೋಷಣೆ ಮಾಡಿದೆ. ಆಗಸ್ಟ್ 15ರಿಂದ ಈ ಮಾರ್ಗದಲ್ಲಿ ಬಸ್‌ಗಳ ಸಂಚಾರ ಆರಂಭವಾಗಲಿದ್ದು, ನಾನ್ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು ಬಿಎಂಟಿಸಿ ಹೇಳಿದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂಬ ಮನವಿ ಮಾಡಲಾಗಿದೆ.
ಹೊಸ ಮಾರ್ಗದಲ್ಲಿ ಬಸ್ ಸಂಚಾರದ ಕುರಿತು ಬಿಎಂಟಿಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಅಲ್ಲದೇ ಬಸ್ ನಂಬರ್, ನಿಲ್ದಾಣಗಳು, ಮಾರ್ಗ ಸಂಖ್ಯೆ ಮುಂತಾದ ಮಾಹಿತಿಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನೀಡಿದೆ.

ಬಿಎಂಟಿಸಿ ಆಗಸ್ಟ್ 15 ರಿಂದ ಜನರ ಅನುಕೂಲಕ್ಕಾಗಿ ಹವಾ ನಿಯಂತ್ರಣ ರಹಿತ ಸೇವೆಯನ್ನು ಹೊಸ ಮಾರ್ಗದಲ್ಲಿ ಆರಂಭಿಸಲಿದೆ. 344-ಜೆ ಬೊಮ್ಮನಹಳ್ಳಿ- ಜಿಗಣಿ ಎಪಿಸಿ ಸರ್ಕಲ್, 378-ಸಿ ಜಂಬೂ ಸವಾರಿ ದಿಣ್ಣೆ-ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ನಾನ್ ಎಸಿ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆ ಹೇಳಿದೆ.
ಹೊಸ ಮಾರ್ಗದ ಬಸ್ ವೇಳಾಪಟ್ಟಿ: 344-ಜೆ ಬೊಮ್ಮನಹಳ್ಳಿ-ಜಿಗಣಿ ಎಪಿಸಿ ಸರ್ಕಲ್, ಹೊಂಗಸಂದ್ರ, ಬೇಗೂರು, ವಡ್ಡರಹಳ್ಳಿಪಾಳ್ಯ, ಜೆಲ್ಲಿ ಮಷಿನ್, ಹುಲಿಮಂಗಲ ಕ್ರಾಸ್, ಕೊಪ್ಪ, ಕೊಪ್ಪ ಗೇಟ್. ಬಸ್‌ಗಳ ಸುತ್ತುವಳಿ ಸಂಖ್ಯೆ 4 ಬಸ್, 40 ಸುತ್ತುವಳಿಗಳು.
378-ಸಿ ಜಂಬೂ ಸವಾರಿ ದಿಣ್ಣೆ-ಎಲೆಕ್ಟ್ರಾನಿಕ್ ಸಿಟಿ. ಗೊಟ್ಟಿಗೆರೆ, ಬಸವನಪುರಸ ಗೇಟ್, ಬಸವನಪುರ, ಸೇಂಟ್ ಮೇರಿ ಸ್ಕೂಲ್, ಜೆಲ್ಲಿ ಮಷಿನ್, ಬೆಟ್ಟದಾಸನಪುರ, ತೊಗುರು ಕ್ರಾಸ್, ಶಿಕಾರಿಪಾಳ್ಯ ಕ್ರಾಸ್/ ವಿಪ್ರೋಗೇಟ್. 6 ಬಸ್‌ಗಳು, 78 ಸುತ್ತುವಳಿಗಳು.
344-ಜೆ ಬೊಮ್ಮನಹಳ್ಳಿ-ಜಿಗಣಿ ಎಪಿಸಿ ಸರ್ಕಲ್ ಮಾರ್ಗ. ಬೊಮ್ಮನಹಳ್ಳಿಯಿಂದ ಬಸ್ 05:00, 5:55, 6:50, 7:55, 8:35, 9:00, 9:40, 10:30, 11:10, 12:05, 13:00, 14:20, 15:15, 15:45, 16:20, 16:50, 18:00, 19:05, 20:10, 21:30ಕ್ಕೆ ಬಿಡಲಿದೆ.
ಬಸ್ ಜಿಗಣಿ ಎ.ಪಿ.ಸಿ ಸರ್ಕಲ್‌ನಿಂದ ಬಸ್ 5:00, 5:55, 6:50, 7:55, 8:35, 9:00, 9:40, 10:30, 11;10, 12:05, 13:00, 13:55, 15:15, 15:30, 16:15, 16:50, 18:00, 19:05, 20:10, 21:30ಕ್ಕೆ ಬಿಡಲಿವೆ.
ಮಾರ್ಗ ಸಂಖ್ಯೆ 378-ಸಿ ಬಸ್ ಜಂಬೂ ಸವಾರಿ ದಿಣ್ಣೆ ಬಿಡುವ ವೇಳೆ 5:10, 5:20, 5:35, 6:10, 6:25, 7:00, 7:10, 7:25, 8:15, 8:35, 9:20, 9:35, 10:35, 10:55, 11:05, 11:20, 11:35, 12:05, 13:05, 14:15, 14:25, 14:35, 14:55, 15:20, 16:15, 16:30, 16:45, 17:15, 17:20, 18:05, 18:20, 18:35, 19:20, 19:40, 20:15, 20:30, 20:45, 21:20, 21:40.
ಎಲೆಕ್ಟ್ರಾನಿಕ್ ಸಿಟಿ ಬಿಡುವ ವೇಳೆ 5:10, 5:25, 6:00, 6:20, 6:30, 7:05, 7:20, 7:35, 8:00, 8:05, 8:20, 9:10, 10:00, 10:20, 10:35, 11:30, 11:50, 12:00, 12:15, 12:30, 14:25, 15:00, 15:20, 15:35, 16:15, 16:25, 17:10, 17:25, 17:40, 18:15, 18:35, 19:10, 19:25, 19:40, 20:25, 20:45, 21:10, 21:25, 21:40 ಎಂದು ಬಿಎಂಟಿಸಿ ಮಾಹಿತಿ ನೀಡಿದೆ.












Click it and Unblock the Notifications