ದಿನದ ಪಾಸ್ ದರ ತಗ್ಗಿಸಲು ಬಿಎಂಟಿಸಿ ಚಿಂತನೆ: ಟಿಕೆಟ್ ಆರಂಭ ಯಾವಾಗ?
ಬೆಂಗಳೂರು, ಮೇ 25: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನದ ಪಾಸ್ ದರವನ್ನು ತಗ್ಗಿಸಲು ಚಿಂತನೆ ನಡೆಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬಿಎಂಟಿಸಿ ಬಸ್ ಸಂಚಾರ ನಿಂತು ಹೋಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಪುನರಾರಂಭಗೊಂಡಿದೆ.
Recommended Video
ಆದರೆ ಕೆಲ ದಿನಗಳ ಕಾಲ ಟಿಕೆಟ್ ನೀಡದಿರಲು ಬಿಎಂಟಿಸಿ ನಿರ್ಧರಿಸಿ, ಕೇವಲ ದಿನದ ಪಾಸು ಹಾಗೂ ವಾರದ ಪಾಸನ್ನು ನೀಡುತ್ತಿದೆ. ಹೀಗಾಗಿ ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಹತ್ತು ವರ್ಷದೊಳಗಿನ ಮಕ್ಕಳು ಹಾಗೂ ವೃದ್ಧರು ಬಸ್‌ನಲ್ಲಿ ಸಂಚರಿಸಬೇಡಿ ಎಂದು ಹೇಳಲಾಗಿತ್ತು.
ಈಗ ಬಸ್ ಹತ್ತಿ ಮುಂದಿನ ಸ್ಟಾಪ್‌ನಲ್ಲಿ ಇಳಿಯಬೇಕಾದರೂ 70 ರೂ. ಬಸ್ ಪಾಸ್ ಪಡೆಯುವುದು ಕಡ್ಡಾಯವಾಗಿರುವುದರಿಂದ ಪ್ರಯಾಣಿಕರು ಬಸ್ ಪ್ರಯಾಣಕ್ಕೆ ಅಷ್ಟು ಮನಸ್ಸು ಮಾಡುತ್ತಿಲ್ಲ.

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ನೀಡಲು ಪ್ರಸ್ತಾವನೆ ಸಲ್ಲಿಕೆ
ಮೇ 26ರಿಂದ BMTC ಬಸ್ ಗಳಲ್ಲಿ ಟಿಕೆಟ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಂಟಿಸಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಮಂಗಳವಾರದಿಂದ ಟಿಕೆಟ್ ನೀಡಲಿದೆ. ಪಾಸ್ ಬದಲು ಟಿಕೆಟ್ ನೀಡಲು ನಿರ್ಧಾರ ಮಾಡಿದೆ
ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ
ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ ಫಿಕ್ಸ್. 5 ರೂ, 10 ರೂ, 15, 20, 25 ರೂ ಮಾದರಿಯಲ್ಲಿ ಟಿಕೆಟ್ ನೀಡಲಿರುವ ಬಿಎಂಟಿಸಿ. ಚಿಲ್ಲರೆ ಸಮಸ್ಯೆ, ಪದೇ ಪದೇ ಕೈ ಬದಲಾವಣೆ ಮಾಡುವುದು ತಪ್ಪಿಸಲು ಸ್ಲಾಬ್ ಮಾದರಿ ಟಿಕೆಟ್ ನೀಡಲಿರುವ ಬಿಎಂಟಿಸಿ.

ಅವಕಾಶವಿದ್ದರೂ ತಂತ್ರಜ್ಞಾನ ಬಳಕೆ ಇಲ್ಲ
BMTC ನಿರ್ಲಕ್ಷ್ಯದಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಅವಕಾಶವಿದ್ದರೂ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ, ಡಿಜಿಟಲ್ ಟಿಕೇಟಿಂಗ್ ಸಿಸ್ಟಮ್ ಜಾರಿಗೆ ತರುತ್ತಿಲ್ಲ.
ಡಿಜಿಟಲ್ ಟಿಕೇಟಿಂಗ್, ಸ್ಮಾರ್ಟ್ ಕಾರ್ಡ್ ಮೂಲಕ ಶಾಶ್ವತ ಪರಿಹಾರ ದೊರೆಯಲಿದೆ. ಆದರೆ ಗೊತ್ತಿದ್ದೂ ಗೊತ್ತಿದ್ದೂ ಡಿಜಿಟಲ್ ಟಿಕೇಟಿಂಗ್, ಸ್ಮಾರ್ಟ್ ಕಾರ್ಡ್ ಬಳಕೆಗೆ ಪ್ರಯತ್ನಿಸುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ದಿನದ ಬಸ್‌ಪಾಸ್‌ಗೆ ಆಕ್ರೋಶ
70 ರೂಪಾಯಿ ದಿನದ ಪಾಸ್ ಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ., 1-2 ಸ್ಟಾಪ್ ಗೆ 10 ರೂಪಾಯಿ ಕೊಡುತ್ತಿದ್ದೆವು. ಈಗ ಟಿಕೆಟ್ ಕೊಡ್ತಿಲ್ಲ, ಪಾಸ್ ತಗೊಳ್ಳಿ ಅಂತಾರೆ. ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದಿರುವವರು ಸಾಕಷ್ಟು ಮಂದಿ ಇದ್ದಾರೆ ದಿನಕ್ಕೆ 70 ರೂ. ನೀಡುವುದು ಕಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications