ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸುಗಳ ದರ ಪಟ್ಟಿ

|
Google Oneindia Kannada News

ಬೆಂಗಳೂರು, ಜೂ. 04 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2015-16ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆ ಪ್ರಕ್ರಿಯೆಯನ್ನು ಜೂನ್‌ 6ರಿಂದ ಆರಂಭಿಸಲಿದೆ. ನಗರದ 40 ಕೇಂದ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5ಗಂಟೆಯ ತನಕ ಬಸ್ ಪಾಸ್ ಪಡೆಯಬಹುದಾಗಿದೆ.

ಬಿಎಂಟಿಸಿ ಜೂನ್ 6ರ ಶನಿವಾರದಿಂದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದು. [ಅವೆನ್ಯೂ ರಸ್ತೆಗಿಳಿದ ಬಿಎಂಟಿಸಿ ಬಸ್ಸುಗಳು!]

ಬೇಕಾದ ದಾಖಲೆಗಳು : ಪಾಸು ವಿತರಣಾ ಕೇಂದ್ರದಲ್ಲಿ ಅರ್ಜಿಗಳು ಲಭ್ಯವಿದ್ದು, ಅರ್ಜಿಯ ಜೊತೆ ಶಾಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಶುಲ್ಕ ಪಾವತಿಸಿರುವ ಅಸಲಿ ರಶೀದಿ, ಕಾಲೇಜು ಅಥವಾ ಶಾಲೆಯಲ್ಲಿ ವಿತರಿಸಿರುವ ಗುರುತಿನ ಚೀಟಿ, ಇತ್ತೀಚಿನ 2 ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ, ಆಧಾರ್‌ ಕಾರ್ಡ್‌ ನಕಲು ಪ್ರತಿಯನ್ನು (ಲಭ್ಯವಿದ್ದಲ್ಲಿ), ನಿಗದಿತ ಪಾಸಿನ ಮೊತ್ತದೊಂದಿಗೆ ಸಲ್ಲಿಸಬೇಕಾಗಿದೆ. [ಬಿಎಂಟಿಸಿ ದಿನದ ಪಾಸು ಪಡೆಯಲು ಐಡಿ ಕಾರ್ಡ್ ಕಡ್ಡಾಯ]

bmtc

ಬಸ್ ಪಾಸ್ ದರಗಳು : ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಯಾಣ ಶುಲ್ಕ ಉಚಿತ, ಸೇವಾ ಶುಲ್ಕ 100, ಪಾಸು ದರ 100 ರೂ. (ಅವಧಿ 10 ತಿಂಗಳು). ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಾಸು ದರ 700 (ಅವಧಿ 10 ತಿಂಗಳು, ವಿದ್ಯಾರ್ಥಿಗಳಿಗೆ). ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಪಾಸುದರ 500 ರೂ. (ಅವಧಿ 10 ತಿಂಗಳು). [ನೈಸ್ ರಸ್ತೆಯ ಬಿಎಂಟಿಸಿ ಬಸ್ ಪಾಸ್ ದರಗಳು]

ಪಿಯುಸಿ ವಿದ್ಯಾರ್ಥಿಗಳಿಗೆ ಪಾಸು ದರ 1000 (ಅವಧಿ 10 ತಿಂಗಳು). ಕಾಲೇಜು ವಿದ್ಯಾರ್ಥಿಗಳಿಗೆ ಪಾಸು ದರ 550 (ಅವಧಿ 5 ತಿಂಗಳು), ಪಾಸುದರ 1000 (10 ತಿಂಗಳ ಅವಧಿ), ಪಾಸು ದರ 1,200 (12 ತಿಂಗಳ ಅವಧಿ).

ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ ಪಾಸುದರ 675 ( ಅವಧಿ 6 ತಿಂಗಳು), 1,250 (ಅವಧಿ 12 ತಿಂಗಳು). ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಸುದರ 800 (ಅವಧಿ 5 ತಿಂಗಳು), 1,500 (ಅವಧಿ 10 ತಿಂಗಳು), 1,780 (ಅವಧಿ 12 ತಿಂಗಳು). ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಸುದರ 700 (ಅವಧಿ 5 ತಿಂಗಳು), 1,300 (ಅವಧಿ 10 ತಿಂಗಳು), 1,580 (ಅವಧಿ 12 ತಿಂಗಳು).

40 ವಿತರಣಾ ಕೇಂದ್ರಗಳು : ವಿದ್ಯಾರ್ಥಿಗಳ ಅನುಕೂಲಕ್ಕಾಗಿ 40 ಬಸ್ ಪಾಸು ವಿತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೆಜೆಸ್ಟಿಕ್ (ಬಿಎಂಟಿಸಿ ನಿಲ್ದಾಣ), ಶಿವಾಜಿನಗರ, ಶಾಂತಿನಗರ, ಇಂದಿರಾನಗರ (ಘಟಕ-6), ದೊಮ್ಮಲೂರು, ಜೀವನ್‌ ಭೀಮಾನಗರ, ಕೆ.ಆರ್.ಪುರಂ, ಕಲ್ಯಾಣನಗರ, ಆರ್.ಟಿ.ನಗರ ಡಿಪೋ, ಬಸವೇಶ್ವರ ನಗರ, ಮತ್ತು ವಿಜಯನಗರ ಟಿಟಿಎಂಸಿ ಬಸ್ ನಿಲ್ದಾಣ.

ಚಂದ್ರಾ ಲೇಔಟ್, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಟಿಟಿಎಂಸಿ, ನೀಲಸಂದ್ರ ಬಸ್‌ ನಿಲ್ದಾಣ, ಹಂಪಿನಗರ ಬಸ್‌ ನಿಲ್ದಾಣ, ನಂದಿನಿ ಲೇಔಟ್ ಬಸ್‌ ನಿಲ್ದಾಣ, ನೆಲಮಂಗಲ ಬಸ್‌ ನಿಲ್ದಾಣ, ಚೌಡೇಶ್ವರಿ ಬಸ್‌ ನಿಲ್ದಾಣ, ವಿದ್ಯಾರಣ್ಯಪುರ ಬಸ್‌ ನಿಲ್ದಾಣ, ಯಲಹಂಕ 5ನೇ ಹಂತ ಬಸ್‌ ನಿಲ್ದಾಣಗಳಲ್ಲಿಯೂ ಪಾಸುಗಳು ದೊರೆಯಲಿವೆ.

ರಾಜಾಜಿನಗರ 1ನೇ 'ಎನ್' ಬ್ಲಾಕ್, ಮಲ್ಲೇಶ್ವರಂ ಬಸ್ ನಿಲ್ದಾಣ (18ನೇ ಕ್ರಾಸ್), ಜಯನಗರ ಟಿಟಿಎಂಸಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಬಿಟಿಎಂ ಲೇಔಟ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ (ಘಟಕ-19), ಕೋರಮಂಗಲ ಟಿಟಿಎಂಸಿ, ಕೆ.ಆರ್‌.ಮಾರುಕಟ್ಟೆ ನಿಲ್ದಾಣ, ಯಶವಂತಪುರ ಟಿಟಿಎಂಸಿ, ಕಾಡುಗೋಡಿ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಬನ್ನೇರುಘಟ್ಟ ಟಿಟಿಎಂಸಿ, ಉತ್ತರಹಳ್ಳಿ ನಿಲ್ದಾಣ, ಚಂದಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಿಲ್ದಾಣದಲ್ಲಿಯೂ ಪಾಸು ದೊರೆಯಲಿದೆ.

English summary
Bangalore Metropolitan Transport Corporation (BMTC) will distribute student bus pass from June 6th Saturday, 2015. Here is student pass fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X