• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇತಿಹಾಸ ಸೇರಿದ ಬಿಎಂಟಿಸಿಯ ಅತೀ ಉದ್ದದ ಮಾರ್ಗ 600

|

ಬೆಂಗಳೂರು, ಡಿಸೆಂಬರ್ 05 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 600ನೇ ನಂಬರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಬಿಎಂಟಿಸಿಯಲ್ಲಿಯೇ ಅತೀ ಉದ್ದದ ಮಾರ್ಗ ಎಂಬ ಹೆಗ್ಗಳಿಕೆಯನ್ನು 600ನೇ ಮಾರ್ಗ ಪಡೆದಿತ್ತು.

600ನೇ ನಂಬರ್ ಬಸ್ ಭೂಮಿಯನ್ನು ಒಂದು ಸುತ್ತು ಹಾಕಿ ಬರುತ್ತದೆ ಎಂದು ಸಿಬ್ಬಂದಿಗಳು ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಒಟ್ಟು 117 ಕಿ.ಮೀ. ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದ 600ನೇ ನಂಬರ್ ಬಸ್ ಬನಶಂಕರಿಯಿಂದ ಹೊರಟು ಪುನಃ ಅಲ್ಲಿಗೆ ಬಂದು ಸೇರುತ್ತಿತ್ತು.

800 ಹಳೆಯ ಬಸ್‌ಗಳನ್ನು ಗುಜರಿಗೆ ಸೇರಿಸಲಿದೆ ಬಿಎಂಟಿಸಿ

ಬೆಂಗಳೂರು ನಗರದ ವಾಹನ ದಟ್ಟಣೆ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ಟಿನ್ ಫ್ಯಾಕ್ಟರಿ ಪ್ರದೇಶಗಳನ್ನು ದಾಟಲು ಬಸ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ದಿನಕ್ಕೆ ನಿಗದಿತ ಟ್ರಿಪ್‌ ಪೂರ್ಣಗೊಳಿಸಲು ಈ ಬಸ್‌ಗೆ ಸಾಧ್ಯವಾಗುತ್ತಿರಲಿಲ್ಲ.

ಎಲೆಕ್ಟ್ರಿಕ್ ಬಸ್ ಯೋಜನೆಯ ಚೆಂಡು ಈಗ ಸಿಎಂ ಅಂಗಳದಲ್ಲಿ

ಈ ಮಾರ್ಗದ ಬಸ್ ಓಡಿಸಲು ಚಾಲಕರು ಸಹ ಹಿಂದೇಟು ಹಾಕುತ್ತಿದ್ದರು. ಆದ್ದರಿಂದ, ಬಿಎಂಟಿಸಿ ಅಧಿಕೃತವಾಗಿ 600 ನಂಬರ್‌ ಮಾರ್ಗಕ್ಕೆ ವಿದಾಯ ಹೇಳಿದ್ದು, ಈ ಮಾರ್ಗವನ್ನು ವಿಭಾಗಿಸಿ ಎರಡು ಹೆಚ್ಚುವರಿ ಬಸ್ ಸೇವೆ ಆರಂಭಿಸಿದೆ.

ಬಿಎಂಟಿಸಿ ಬಸ್‌ಪಾಸ್ ಇನ್ನು ಇವಿಎಂ ಯಂತ್ರದಲ್ಲಿ ಮಾತ್ರ ಲಭ್ಯ

600ನೇ ನಂಬರ್ ಮಾರ್ಗ

600ನೇ ನಂಬರ್ ಮಾರ್ಗ

ಬಿಎಂಟಿಸಿ 600ನೇ ನಂಬರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಈ ಮಾರ್ಗದಲ್ಲಿ ಬಸ್ 117 ಕಿ.ಮೀ. ಪ್ರಯಾಣ ಮಾಡುತ್ತಿತ್ತು. 5 ಗಂಟೆ 30 ನಿಮಿಷದಲ್ಲಿ ಈ ಮಾರ್ಗವನ್ನು ಬಸ್ ಕ್ರಮಿಸುತ್ತಿತ್ತು. 10 ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದವು. ಬಿಎಂಟಿಸಿಯ ಅತೀ ಉದ್ದದ ಮಾರ್ಗ ಎಂಬ ಹೆಗ್ಗಳಿಕೆ ಇದಕ್ಕೆ ಇತ್ತು.

ನಗರಕ್ಕೆ ಒಂದು ಸುತ್ತು

ನಗರಕ್ಕೆ ಒಂದು ಸುತ್ತು

ಬಿಎಂಟಿಸಿಯ 600 ನೇ ನಂಬರ್ ಮಾರ್ಗ ನಗರಕ್ಕೆ ಒಂದು ಸುತ್ತು ಹಾಕುತ್ತಿತ್ತು. ಬನಶಂಕರಿಯಿಂದ ಹೊರಟ ಬಸ್ ಪುನಃ. ಬನಶಂಕರಿಗೆ ಬಂದು ಸೇರಲು ಸುಮಾರು 5 ಗಂಟೆ 30 ನಿಮಿಷ ಬೇಕಾಗಿತ್ತು.

ಬನಶಂಕರಿ, ಬಿಟಿಎಂ, ಎಲೆಕ್ಟ್ರಾನಿಕ್ ಸಿಟಿ, ಜಿಗಳಾ ಕ್ರಾಸ್, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ, ವರ್ತೂರು, ವೈಟ್‌ಫೀಲ್ಡ್, ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಹೆಬ್ಬಾಳ, ಯಶವಂತಪುರ, ನಾಗರಭಾವಿ, ಕೆಂಗೇರಿ, ಆರ್.ಆರ್.ನಗರ ಮೂಲಕ ಬಸ್ ಬನಶಂಕರಿಗೆ ವಾಪಸ್ ಆಗುತ್ತಿತ್ತು.

ಮಾರ್ಗಕ್ಕೆ ಹೆಚ್ಚುವರಿ ಬಸ್

ಮಾರ್ಗಕ್ಕೆ ಹೆಚ್ಚುವರಿ ಬಸ್

ಸಂಚಾರ ದಟ್ಟಣೆಯ ಮಾರ್ಗವನ್ನು ಬದಲಾವಣೆ ಮಾಡಿರುವ ಬಿಎಂಟಿಸಿ ಮಾರ್ಗವನ್ನು ವಿಭಜನೆ ಮಾಡಿ 500 ಹಾಗೂ 501 ನಂಬರ್‌ನ ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳು ಸಹ ಬನಶಂಕರಿಯಿಂದ ಆರಂಭವಾಗಿ ಅಲ್ಲಿಗೆ ವಾಪಸ್ ಆಗಲಿವೆ. ಮಾರ್ಗದ ಕಿ.ಮೀ.ಯನ್ನು ಕತ್ತರಿಸಿ 76 ಕಿ.ಮೀ. ಮಾರ್ಗವನ್ನು ಮಾಡಲಾಗಿದೆ. ಇದನ್ನು ಕ್ರಮಿಸಲು 3.30 ಗಂಟೆ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳು ಹೇಳುವುದೇನು?

ಅಧಿಕಾರಿಗಳು ಹೇಳುವುದೇನು?

'ಈ ಬಸ್ ಸಂಚಾರ ತಡವಾಗುತ್ತಿತ್ತು, ತಾಳ್ಮೆ ಇಲ್ಲದ ಜನರು ಜಗಳವಾಡುತ್ತಿದ್ದರು. ಇಂಧನ ಸಹ ಹೆಚ್ಚು ವ್ಯಯವಾಗುತ್ತಿತ್ತು. ಅದಕ್ಕಾಗಿ ಬಸ್ ನಿಲ್ಲಿಸಲಾಗಿದೆ. ಉದ್ದ ಮಾರ್ಗದ ಬಸ್ ಅಗತ್ಯ ಜನರಿಗೆ ಇಲ್ಲ. ಜನರು ತಾವು ಪ್ರಯಾಣಿಸುವ ನಿರ್ಧಿಷ್ಟ ಮಾರ್ಗದ ಬಸ್ ಬಯಸುತ್ತಾರೆ' ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Bangalore Metropolitan Transport Corporation (BMTC) stopped bus service in 600 number route. This route famous as longest route of BMTC 117 Km. 10 buses running in the route which start in Banashankari and ends in same place.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more