BMTC Bus: ಬಿಎಂಟಿಸಿ ಬಸ್‌ನಲ್ಲಿ ಕಾಣಿಸಿಕೊಂಡ ನಾಗರಾಜ-ಹೌಹಾರಿದ ಪ್ರಯಾಣಿಕರು
BMTC Bus: ರಾಜ್ಯ ರಾಜಧಾನಿ ಬೆಂಗಳೂರಿನ ಜನರ ಜೀವನಾಡಿ ಸಾರಿಗೆಗಳಲ್ಲೊಂದಾದ ಬಿಎಂಟಿಸಿ ಬಸ್ ಆಗಾಗ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಬಿಎಂಟಿಸಿ ಬಸ್ ಹಿಂಬದಿಯ ಗ್ಲಾಸ್‌ನಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದರು, ಇದನ್ನು ಕಂಡ ಪ್ರಯಾಣಿಕರು ಹೌಹಾರಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿಎಂಟಿಸಿ ಹಿಂಬದಿ ಗ್ಲಾಸ್‌ನಲ್ಲಿ ಸಿಲುಕಿಕೊಂಡಿದ್ದ ನಾಗರ ಹಾವನ್ನು ಬಸ್‌ನ ಹಿಂಬದಿ ಬರುತ್ತಿದ್ದ ಕ್ಯಾಂಟರ್ ಚಾಲಕ ನೋಡಿಕೊಂಡಿದ್ದಾನೆ. ಬಳಿಕ ಪ್ರಯಾಣಿಕರು ನೋಡಿ ಭಯಗೊಂಡಿದ್ದಾರೆ. ಡಿಪೋ 29 ಕೆ.ಆರ್ ಪುರಂ ಮಾರ್ಗದ ಎಲೆಕ್ಟ್ರಿಕಲ್ ಬಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇನ್ನು ಚಾಲಕ ಈ ವಿಷಯ ತಿಳಿಯುತ್ತುದ್ದಂತೆ ಬಸ್ ನಿಲ್ಲಿಸಿದ್ದು, ಬಳಿಕ ಗಾಬರಿಗೊಂಡ ಪ್ರಯಾಣಿಕರು ಬಸ್‌ನಿಂದ ಕೆಲಗಡೆ ಇಳಿದಿದ್ದಾರೆ. ನಂತರ ಸಿಲುಕಿದ್ದ ನಾಗರಾಜನನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕೆ.ಆರ್ ಮಾರ್ಕೆಟ್‌ನಿಂದ ಕೆ.ಆರ್ ಪುರಂಗೆ ಸುಮಾರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ಬಂದಿದ್ದು, ಆಗ ಮತ್ತೆ ಡಿಪೋದಲ್ಲಿ ಬಸ್ ಪರಿಶೀಲಿಸಲಾಗಿದೆ ಎನ್ನಲಾಗುತ್ತಿದೆ.
ವಿಶೇಷ ರೈಲು ಸೇವೆ ವಿಸ್ತರಣೆ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಇನ್ನೂ ಇದೀಗ ಗಣೇಶ ಹಬ್ಬ ಹಿನ್ನೆಲೆ ಊರಿಗೆ ಹೊರಡುವ ಹಾಗೂ ಹಬ್ಬ ಮುಗಿದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ ಆಗುವವರ ಸಂಖ್ಯೆ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿರುತ್ತದೆ. ಆದ್ದರಿಂದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಎರ್ನಾಕುಲಂ-ಯಲಹಂಕ ನಡುವೆ ವಾರಕ್ಕೆ 3 ದಿನ ಸಂಚರಿಸುತ್ತಿದ್ದ ವಿಶೇಷ ರೈಲ ಸೇವೆಯನ್ನು ಸೆಪ್ಟೆಂಬರ್ 19ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಸೆಪ್ಟೆಂಬರ್ 7ರ ವರೆಗೆ ರೈಲು ಸಂಚರಿಸಲಿದೆ ಎಂದು ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಿದಲು ಈ ಸೇವೆಯನ್ನು ವಿಸ್ತರಣೆ ಮಾಡಿದೆ.
ರೈಲು ಸಂಖ್ಯೆ 06101/06102 ಎರ್ನಾಕುಲಂ ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಎರ್ನಾಕುಲಂ ಯಲಹಂಕ ಗರೀಬ್ ರಥ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 8, 11, 13, 15 ಹಾಗೂ 18ರಂದು ಸಂಚರಿಸಲಿದೆ. ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್ ಪಾಸ್ಟ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 9, 12, 14, 16, 19ರಂದು ಓಡಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.












Click it and Unblock the Notifications