ಜನವರಿ 26ರಂದು BMTCಯ "ನಿಮ್ ಬಸ್" ಆ್ಯಪ್ ಆರಂಭ, ಉದ್ದೇಶವೇನು?, ಇಲ್ಲಿದೆ ವಿವರ
ಬೆಂಗಳೂರು, ಜನವರಿ, 23: ಬಿಎಂಟಿಸಿ ಬಸ್ ಎಲ್ಲಿದೆ ಎಂದು ತಿಳಿಸುವ "Nim bus" ಅಪ್ಲಿಕೇಶನ್ ಜನವರಿ 26 ಗಣರಾಜ್ಯೋತ್ಸವದ ದಿನದಂದು ಪ್ರಾರಂಭವಾಗಲಿದೆ. ಸೋಮವಾರ (ಡಿಸೆಂಬರ್ 23) ರಂದು ಈ ಆ್ಯಪ್ ಅನ್ನು ಬಿಡುಗಡೆ ಮಾಡಲು ಬಿಎಂಟಿಸಿ ನಿರ್ಧರಿಸಿತ್ತು. ಆದರೆ ರಸ್ತೆ ಸಾರಿಗೆ ನಿಗಮವು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಮತ್ತು ಅದರ ನಿಖರತೆಯನ್ನು ಸುಧಾರಿಸಲು ಈ ಯೋಜನೆಯನ್ನು ಜನವರಿ 26ಕ್ಕೆ ಜಾರಿಗೆ ತರಲು ಮುಂದಾಗಿದೆ.
"Nim bus"ಅಪ್ಲಿಕೇಶನ್ ಬಳಕೆದಾರರಿಗೆ ನೈಜ ಸಮಯದಲ್ಲಿ (BMTC)ಬಸ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಮಾಹಿತಿಯನ್ನು ಸಹ ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಅದರ ಸಾಫ್ಟ್ ಲಾಂಚ್‌ನಲ್ಲಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು ಪ್ರವೇಶವನ್ನು ನೀಡಿದ ಬಳಕೆದಾರರು ನೀಡಿದ ಪ್ರತಿಕ್ರಿಯೆಯನ್ನು ಆಧರಿಸಿ ಆ್ಯಪ್ ಅನ್ನು ಉತ್ತಮಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ.

ಎರಡು ಬಾರಿ ಪ್ರಯತ್ನಗಳು ವಿಫಲ
ಹಲವು ತಾಂತ್ರಿಕ ದೋಷಗಳಿಂದ ಕೂಡಿದ್ದರಿಂದ ಈ ಆ್ಯಪ್ ಅನ್ನು ಪ್ರಾರಂಭಿಸಲು ಬಿಎಂಟಿಸಿ ಈ ಹಿಂದೆಯೂ ಸಹ ಎರಡು ಬಾರಿ ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ಕಾಲ ಕೂಡಿಬಂದಿದ್ದು, ಜನವರಿ 26ರಂದು ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರ ಮಾಡಿದೆ.

BMTC ಮೂಲಗಳು ಹೇಳುವುದೇನು?
"ನಿಮ್ ಬಸ್" ಮೂರನೇ ಅಪ್ಲಿಕೇಶನ್ ಆಗಿದ್ದು, ಈ ಬಾರಿ ಅದನ್ನು ವಿಫಲಗೊಳ್ಳಲು ನಾವು ಬಯಸುವುದಿಲ್ಲ. ಕಳೆದ ಕೆಲವು ವಾರಗಳಿಂದ ಅಪ್ಲಿಕೇಶನ್ ಪರೀಕ್ಷೆಯಲ್ಲಿದೆ. ನಾವು ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂದು ಬಿಎಂಟಿಸಿ ತಿಳಿಸಿದೆ. ನಾವು 400 ವೋಲ್ವೋ ಬಸ್‌ಗಳು ಸೇರಿದಂತೆ ಪ್ರತಿದಿನ ಸುಮಾರು 5,600 ಬಸ್‌ಗಳನ್ನು ನಿರ್ವಹಿಸುತ್ತೇವೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಸ್ಕ್ರ್ಯಾಪ್ ಆಗಲಿರುವ ಬಸ್‌ಗಳಲ್ಲಿ ಲೈವ್ ಟ್ರ್ಯಾಕಿಂಗ್ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications