BMTC: ಬಿಎಂಟಿಸಿಯಿಂದ ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ, ಇಲ್ಲಿದೆ ಮಾರ್ಗ, ಸಮಯಗಳ ವಿವರ
BMTC: ಬೆಂಗಳೂರು ಜೀವನಾಡಿ ಸಾರಿಯಾಗಿರುವ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಹೊಸ ಮೆಟ್ರೋ ಫೀಡರ್ ಮಾರ್ಗವನ್ನು ಪರಿಚಯಿಸಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಗರದ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಕೆ.ಆರ್. ಮಾರುಕಟ್ಟೆಯಿಂದ ಬನ್ನೇರುಘಟ್ಟ ರಸ್ತೆ ಮೂಲಕ ಬಿಳೇಕಹಳ್ಳಿಗೆ ನೂತನ ಮೆಟ್ರೋ ಫೀಡರ್ ಬಸ್ ಬಸ್ ಮಾರ್ಗವನ್ನು ಪ್ರಾರಂಭಿಸಿದೆ.

ಬಸ್ ಸಂಚಾರದ ಪ್ರಮುಖ ಮಾರ್ಗಗಳು
ಮಾರ್ಗ ಸಂಖ್ಯೆ 366-AB ಕೆ.ಆರ್.ಮಾರುಕಟ್ಟೆಯಿಂದ ಲಾಲ್‌ಬಾಗ್ ಮುಖ್ಯ ದ್ವಾರ, ಡೈರಿ ಸರ್ಕಲ್, ಬಿಳೇಕಹಳ್ಳಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಮುಖಾಂತರ ಬಿಳೇಕಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಸ್ತುತ ಈ ಮಾರ್ಗದಲ್ಲಿ ಒಂದು ಬಸ್ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಒಟ್ಟು 8 ಏಕಮುಖ ಸಂಚಾರಗಳನ್ನು ಮಾಡುತ್ತಿದೆ. ಬಿಎಂಟಿಸಿಯು ಈಗ ಈ ಮಾರ್ಗಕ್ಕೆ MF-14VJ ಎಂದು ಮರುನಾಮಕರಣ ಮಾಡಿದೆ.
* ಕೆ.ಆರ್. ಮಾರುಕಟ್ಟೆಯಿಂದ ಹೊರಡುವ ಬಸ್‌ಗಳ ಸಮಯ: ಬೆಳಗ್ಗೆ 8, ಬೆಳಗ್ಗೆ 10:35, ಮಧ್ಯಾಹ್ನ 12:25 ಮತ್ತು ಮಧ್ಯಾಹ್ನ 3 ಗಂಟೆಗೆ.
* ಬಿಳೇಕಹಳ್ಳಿಯಿಂದ ಹೊರಡುವ ಬಸ್‌ಗಳ ಸಮಯ: ಬೆಳಗ್ಗೆ 9:00, ಬೆಳಗ್ಗೆ 11:35, ಮಧ್ಯಾಹ್ನ 1:25 ಮತ್ತು ಸಂಜೆ 4:20ಕ್ಕೆ.
ಕೆ.ಆರ್.ಮಾರುಕಟ್ಟೆಯಿಂದ ಬಸ್ ಹೊರಡುವ ಸಮಯಗಳು
* ಬೆಳಗ್ಗೆ 8:00
* ಬೆಳಗ್ಗೆ 10:35
* ಮಧ್ಯಾಹ್ನ 12:25
* ಮಧ್ಯಾಹ್ನ 3:00
ಬಿಳೇಕಹಳ್ಳಿಯಿಂದ ಬಸ್ ಹೊರಡುವ ಸಮಯಗಳು
* ಬೆಳಗ್ಗೆ 9:00
* ಬೆಳಗ್ಗೆ 11:35
* ಮಧ್ಯಾಹ್ನ 1:25
* ಸಂಜೆ 4:20
ಒಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೆಟ್ರೋ ಹಾಗೂ ನಗರ ಸಾರಿಗೆ ಪ್ರಯಾಣಿಕರಿಗೆ ಈ ಹೊಸ ಫೀಡರ್ ಬಸ್ ಸೇವೆ ಹೆಚ್ಚು ಅನುಕೂಲ ಆದಂತಾಗಲಿದೆ.


Click it and Unblock the Notifications
