BMTC: ಬಿಎಂಟಿಸಿ ಹೊಸ ಮಾರ್ಗ, ಎಲೆಕ್ಟ್ರಾನಿಕ್ ಸಿಟಿ ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು, ನವೆಂಬರ್ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎರಡು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಈ ಬಾರಿ ಎಲೆಕ್ಟ್ರಾನಿಕ್ ಸಿಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೈಸ್ ರಸ್ತೆ ಮೂಲಕ ನಗರದಿಂದ ಬಸ್ ಸಂಚಾರವನ್ನು ಪ್ರಾರಂಭಿಸಿದೆ. ಈಗಾಗಲೇ ನೈಸ್ ರಸ್ತೆಯ ಮೂಲಕ ಹಲವಾರು ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ನಡೆಸುತ್ತಿದ್ದು, ಈ ಸಾಲಿಗೆ ಹೊಸ ಬಸ್ ಸೇರ್ಪಡೆಯಾಗಿದೆ. ಪ್ರಯಾಣಿಕರ ಮಾಹಿತಿಗಾಗಿ ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬಿಎಂಟಿಸಿ ಕಾವೇರಿ ನಗರ-ಎಲೆಕ್ಟ್ರಾನಿಕ್ ಸಿಟಿ ನಡುವೆ ಬಸ್ ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ನಗರದ ಸಂಚಾರ ದಟ್ಟಣೆಗೆ ಸಿಲುಕದೇ ಜನರು ಸುಲಭವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ಮಾಡಲು ಅನುಕೂಲವಾಗಲಿದೆ. ನಾನ್ ಎಸಿ ಬಸ್ ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.

ಹೊಸ ಬಸ್ ಮಾರ್ಗದ ವಿವರ: ನವೆಂಬರ್ 8ರಿಂದ ಬಿಎಂಟಿಸಿ ಕಾವೇರಿ ನಗರ- ಎಲೆಕ್ಟ್ರಾನಿಕ್ ಸಿಟಿ ನಡುವೆ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮಾರ್ಗದಕ್ಕೆ ನೈಸ್-4ಎ ಎಂದು ಹೆಸರಿಡಲಾಗಿದೆ.
ಈ ಬಸ್ ಸಂಚಾರದಿಂದ ಕಾವೇರಿ ನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ ಸುತ್ತಮುತ್ತಲಿನ ಜರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ. ನೈಸ್-4A ಬಸ್ ಕಾವೇರಿ ನಗರದಿಂದ ವಿಪ್ರೋ ಗೇಟ್, ಕುರುಬರಹಳ್ಳಿ, ಕೆಹೆಚ್‌ಬಿ ಕಾಲೋನಿ, ವಿಜಯನಗರ ಹಾಗೂ ಅತ್ತಿಗುಪ್ಪೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರವನ್ನು ನಡೆಸುತ್ತದೆ.
ಬಿಎಂಟಿಸಿ ಮಾಹಿತಿ ಪ್ರಕಾರ ಈ ಬಸ್ ಕಾವೇರಿ ನಗರದಿಂದ 7.30ಗಂಟೆಗೆ ಹೊರಡಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ 16.45ಕ್ಕೆ ಹೊರಡಲಿದೆ. ಈ ಮಾರ್ಗದ ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
248ಯು ಮಾರ್ಗದ ಬಸ್: ಬಿಎಂಟಿಸಿ ಸುಮ್ಮನಹಳ್ಳಿ-ಅಬ್ಬಿಗೆರೆ 248ಯು ಹೊಸ ಮಾರ್ಗವನ್ನು ಘೋಷಣೆ ಮಾಡಿದೆ. ಈ ಮಾರ್ಗದಲ್ಲಿ ಸಹ ನವೆಂಬರ್ 8ರಿಂದ ಬಸ್ ಸೇವೆ ಆರಂಭವಾಗಿದೆ.
ಸುಮ್ಮನಹಳ್ಳಿ-ಅಬ್ಬಿಗೆರೆ 248ಯು ಮಾರ್ಗದ ಬಸ್ ಸುಂಕದಕಟ್ಟೆ, ಪೀಣ್ಯ 2ನೇ ಹಂತ, ಜಾಲಹಳ್ಳಿ ಕ್ರಾಸ್, ಶೆಟ್ಟಿಹಳ್ಳಿ ಮಾರ್ಗವಾಗಿ ಸಂಚಾರವನ್ನು ನಡೆಸಲಿದೆ.
ಬಸ್ ಸುಮ್ಮನಹಳ್ಳಿ ಬಿಡುವ ವೇಳೆ 9.15, 10.10, 11.40, 12.35,14.20,15.15, 16.55, 17.50 ಹಾಗೂ ಅಬ್ಬಿಗೆರೆ ಬಿಡುವ ವೇಳೆ 8.10, 9.05, 10.35, 11.30, 13.15, 13.40, 15.50 ಮತ್ತು 16.45.
ಕರ್ನಾಟಕ ಸರ್ಕಾರ 'ಶಕ್ತಿ' ಯೋಜನೆ ಜಾರಿಗೊಳಿಸಿದ ಬಳಿಕ ಬಿಎಂಟಿಸಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ. ಇದಕ್ಕೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಸ್‌ಗಳು ಶೇ 70ರಷ್ಟು ಭರ್ತಿಯಾಗಿ ಸಂಚಾರವನ್ನು ನಡೆಸುತ್ತಿವೆ.
ಹೊಸ ಹೊಸ ಬಸ್‌ಗಳ ಸೇರ್ಪಡೆ ಬಳಿಕ ಬಿಎಂಟಿಸಿ ಸಾಮಾನ್ಯ ಮಾರ್ಗ, ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
821 ಹೊಸ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. 50 ಬಸ್‌ಗಳು ಈಗಾಗಲೇ ಬಂದಿದ್ದು, ಉಳಿದ ಬಸ್‌ಗಳು 2025ಕ್ಕೆ ಆಗಮಿಸಲಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಬಿಎಂಟಿಸಿ ಸೇವೆ ವಿಸ್ತರಣೆ ಮಾಡಲು ಒತ್ತಡವಿದೆ. ಪ್ರಯಾಣಿಕರ ಸಂಖ್ಯೆ 27.4 ಲಕ್ಷದಿಂದ 40 ಲಕ್ಷಕ್ಕೆ ಏರಿಕೆಯಾಗಿದೆ.











Click it and Unblock the Notifications