ನಮ್ಮ ಮೆಟ್ರೋ ಫಿಡರ್ ಬಸ್‌ಗಳ ಮಾರ್ಗ, ಸಮಯ, ಮ್ಯಾಪ್ ಮಾಹಿತಿ ಒಂದೇ ಕ್ಲಿಕ್ಕಿನಲ್ಲಿ
ಬೆಂಗಳೂರು, ಡಿಸೆಂಬರ್ 15: ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 73 ಕಿಲೋ ಮೀಟರ್ ಮೆಟ್ರೋ ಜಾಲ ಹೊಂದಿರುವ ನಮ್ಮ ಮೆಟ್ರೋಗೆ ಪೂರಕವಾಗಿ ಒಟ್ಟು 121 ಫೀಡರ್ ಬಸ್‌ಗಳು ನಿತ್ಯ ನೂರಾರು ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ಬಸ್‌ಗಳು ಯಾವ ಸಮಯದಲ್ಲಿ ಎಲ್ಲಿರುತ್ತವೇ?, ಯಾವ ಮಾರ್ಗದಲ್ಲಿ ಯಾವ ಬಸ್‌ಗಳಿವೆ? ಎಂಬೆಲ್ಲ ಮಾಹಿತಿ, ಮ್ಯಾಪ್ (ನಕ್ಷೆ) ಸಮೇತ ಒಂದೇ ಕ್ಲಿಕ್ಕಿನಲ್ಲಿ ತಿಳಿಯಬಹುದಾಗಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC metro feeder bus) ಹೆಚ್ಚುತ್ತಿರುವ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ವರೆಗೆ ಸಾರಿಗೆ ಸೇವೆ ನೀಡುತ್ತಿವೆ. ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಮೆಟ್ರೋ ನಿಲ್ದಾಣಗಳಿಂದ ವಿವಿಧೆಡೆ ಸಂಚರಿಸುತ್ತವೆ. ಇವುಗಳು ಆಯಾ ಸಮಯದಲ್ಲಿ ಎಲ್ಲಿವೆ, ಯಾವ ಮಾರ್ಗದಲ್ಲಿ ಯಾವ ಬಸ್‌ಗಳು ಓಡಾಡುತ್ತಿವೆ, ಮಾರ್ಗಗಳ ಕುರಿತು ತಿಳಿಯಲು ಹೊಸ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಿದೆ.

ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳು ಮುಂದಿನ ವರ್ಷ ಇನ್ನಷ್ಟು ಹೆಚ್ಚಾಗಲಿವೆ. ಕ್ರಮೇಣ ಹಂತ ಹಂತವಾಗಿ ಬಸ್‌ಗಳ ಸೇವೆ ಹೆಚ್ಚಿಸಲು ಯೋಜಿಸಲಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರ ವೆಬ್‌ಸೈಟ್ ಆರಂಭಿಸಿದೆ.
ಇಲ್ಲಿ ನೀವು ಒಂದೇ ಕ್ಲಿಕ್ಕಿನಲ್ಲಿ ಮೆಟ್ರೋ ಫೀಡರ್ (MF) ಬಸ್‌ಗಳ ಮಾರ್ಗಗಳು, ಯಾವ ಕಡೆಯಿಂದ ಯಾವ ಮೆಟ್ರೋ ನಿಲ್ದಾಣದ ಹತ್ತಿ ಬರುತ್ತಿದೆ ಎಂಬೆಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲೆ ತಿಳಿದುಕೊಳ್ಳಬಹುದಾಗಿದೆ.
https://t.co/a4nsFQUI9j.
— BMTC (@BMTC_BENGALURU) December 14, 2023
BMTC Metro feeder service timing and route details at one click .Open the url and touch MF route no will take to the page of detailed timing and route maps,Kindly share maxim to reach all pic.twitter.com/cYZj8PyHDH
MF ಬಸ್ ಮಾಹಿತಿ ತಿಳಿಯುವ ವಿಧಾನಗಳು
* ಮೊದಲು ಮೇಲೆ ತಿಳಿಸಲಾದ ವೆಬ್‌ಸೈಟ್ ಲಿಂಕ್ ಗೆ ನೀವು ಭೇಟಿ ಕೊಡಬೆಕು.
* ಮೊಬೈಲ್ ಇಲ್ಲವೇ ಲ್ಯಾಪ್ ಟಾಪ್ ಮೂಲಕವು ಈ ಲಿಂಕ್ ನಿಂದ ನೀವು ಮಾಹಿತಿ ಪಡೆಯಬಹುದು.
* ಲಿಂಕ್ ತೆರೆದ ಕೂಡಲೇ ನಿಮಗೆ ಒಟ್ಟು 36 MF ಬಸ್‌ಗಳ ಪಟ್ಟಿ ಕಾಣುತ್ತದೆ.
* ನೀವು ನಿಮಗೆ ಬೇಕಾದ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು.
* ಉದಾಹರಣೆಗೆ MF3 ಅನ್ನು ಆಯ್ಕೆ ಮಾಡಿದರೆ, ಕಾಡುಗೋಡಿಯಿಂದ ಮಾರತ್ತಹಳ್ಳಿವರೆಗಿನ ಫೀಡರ್ ಬಸ್ ಸೇವೆ ನಕ್ಷೆ, ನಿಲ್ದಾಣ, ಎಲ್ಲಿಂದ ಎಲ್ಲಿಗೆ ಬಸ್ ಓಡಾಡಲಿದೆ ಎಂಬೆಲ್ಲ ಮಾಹಿತಿ ತಿಳಿಯುತ್ತವೆ.
* ಇದೇ ರೀತಿ ಹಲವು ಆಯ್ಕೆಗಳನ್ನು ಕೊಡಲಾಗಿದೆ. ನೀವು ನಿಮಗೆ ಬೇಕಾದ ಮಾರ್ಗದ ಮಾಹಿತಿ ಒಂದೇ ಕ್ಲಿಕ್ಕಿನ ಮೂಲಕ ತಿಳಿಯಲು ಇದು ಅನುಕೂಲವಾಗಲಿದೆ ಎಂದು BMRCL ಮತ್ತು ಬಿಎಂಟಿಸಿ ತಿಳಿಸಿದೆ. ಇದು ಸರ್ಕಾರದ ಅಧಿಕೃತ ವೆಬ್‌ಸೈಟ್ ಆಗಿದೆ.

2024ಕ್ಕೆ ಎಂಎಫ್ ಬಸ್ ಸಂಖ್ಯೆ 300ಕ್ಕೆ ಹೆಚ್ಚಳ
ಬೆಂಗಳೂರಿನಲ್ಲಿ ಪ್ರತಿ ಮೆಟ್ರೋ ಪ್ರಯಾಣಿಕರಿಗೂ ಬಿಎಂಟಿಸಿ ಬಸ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಲಾಸ್ಟ್ ಮೈಲ್ ವರೆಗಿನ ವ್ಯಕ್ತಿಗೆ ಈ ಫೀಡರ್ ಬಸ್ ಸೇವೆ ಸಿಗಲಿದೆ. ಸದ್ಯ ನಗರದಲ್ಲಿ 121 ಬಸ್‌ಗಳು 1800ಕ್ಕೂ ಅಧಿಕ ಟ್ರಿಪ್‌ಗಳನ್ನು ಹೊಡೆಯುತ್ತಿವೆ.
ಮೆಟ್ರೋ ನೇರಳೆ ಮಾರ್ಗ ಪೂರ್ಣವಾಗಿ ತೆರೆದ ನಂತರ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ವರ್ಷದ ಹಳದಿ ರೇಖೆಯಲ್ಲಿಯು ಮೆಟ್ರೋಗಳು ಓಡಾಟ ನಡೆಸಲಿವೆ. ಈ ಪ್ರಯುಕ್ತ ಸದ್ಯ ಬಿಎಂಟಿಸಿ ಮೆಟ್ರೋ ಫಿಡರ್ ಬಸ್‌ಗಳ ಸಂಖ್ಯೆ 300ಕ್ಕೆ ಏರಿಕೆ ಮಾಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications