BMTC E-BUS: ರಸ್ತೆಗಿಳಿಯಲಿವೆ 100 ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು, ಯಾವಾಗ?- ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 18: ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿ ಸಾರಿಗೆಯಾದ ಬಿಎಂಟಿಸಿಯು ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖರೀದಿಸುತ್ತಿರುವ ಹವಾನಿಯಂತ್ರಣ ರಹಿತ 921 ವಿದ್ಯುತ್ ಚಾಲಿತ ಬಸ್‌ಗಳ ಪೈಕಿ, ಮೊದಲ ಹಂತದಲ್ಲಿ 100 ಬಸ್‌ಗಳು ಸಂಸ್ಥೆಯ ತೆಕ್ಕೆಗೆ ಸೇರಲಿವೆ. ಹಾಗಾದರೆ ಇವುಗಳ ಚಾಲನೆಯ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 100 ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನುಳಿದ 821 ಬಸ್‌ಗಳು 2024ರ ವರ್ಷಾಂತ್ಯಕ್ಕೆ ಸಂಸ್ಥೆಯನ್ನು ಸೇರಲಿವೆ ಎಂದು ತಿಳಿದುಬಂದಿದೆ.

ಈ ಎಲ್ಲ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ12 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗುತ್ತಿದೆ. ಸಂಸ್ಥೆಯು ಈಗಾಗಲೇ 390 EV ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಟಾಟಾ ಕಂಪೆನಿಯ 100 ಬಸ್ ಸೇರ್ಪಡೆ ನಂತರ ಆ ಸಂಖ್ಯೆ 490ಕ್ಕೆ ಏರಿಕೆ ಆಗಲಿದೆ. ಆದ್ದರಿಂದ ಪ್ರಯಾಣಿಕರು ಬಸ್ ಯಾವಾಗಲೂ ಜನದಟ್ಟಣೆಯಿಂದ ಒದ್ದಾಡುವ ಸನ್ನಿವೇಶ ಸೃಷ್ಟಿ ಆಗದಂತೆ BMTC ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.












Click it and Unblock the Notifications