BMTC: ಟಿಕೆಟ್ ರಹಿತ ಪ್ರಯಾಣಿಕರಿಂದ 6,34,865 ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರಿನಾದ್ಯಂತ ಸಂಚರಿಸಿ ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಈ ಬಸ್‌ಗಳಲ್ಲಿ ಟಿಕೇಟ್ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವ ಪ್ರಯಾಣಿಕರಿಂದ ಸಾರಿಗೆ ಅಧಿಕಾರಿಗಳು ಬರೋಬ್ಬರಿ 6,34,865 ರೂಪಾಯಿ ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ ಎಂದು ಸಾರಿಗೆ ಸಂಸ್ಥೆ ಸೋಮವಾರ ತಿಳಿಸಿದೆ.
ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಅಪರಾಧವಾಗುತ್ತದೆ. ಈ ಸಂಬಂಧ ಕಠಿಣ ನಿಯಮ ಇದ್ದರೂ ಸಹಿತ ಉಲ್ಲಂಘಿಸಿ, ಬಿಎಂಟಿಸಿ ಬಸ್ ನಿರ್ವಾಹಕರ ಕಣ್ತಪ್ಪಿಸಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದಾರೆ. ಇದರಿಂದ ಮಾಸಿಕ ಬಿಎಂಟಿಸಿ ಆದಾಯದಲ್ಲಿ ಸೋರಿಕೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರಾದ್ಯಂತ ಬಿಎಂಟಿಸಿ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ಬಿಎಂಟಿಸಿ 18,409 ಟ್ರಿಪ್‌ಗಳ ಪರಿಶೀಲನೆ
ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವಲ್ಲಿ ನಿರತರಾದ ತನಿಖಾ ತಂಡಗಳು ನಗರದಾದ್ಯಂತ ಸಂಚರಿಸುವ ಬಸ್‌ಗಳಲ್ಲಿ ಒಂದೂ ಬಿಡದೇ ಪರಿಶೀಲಿಸಿದ್ದಾರೆ. ಕಳೆದ ವರ್ಷಾಂತ್ಯ 2025ರ ಡಿಸೆಂಬರ್ ಒಂದೇ ತಿಂಗಳಲ್ಲಿ 18,409 ಟ್ರಿಪ್‌ಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ತಪಾಸಣೆ ವೇಳೆ 2801 ಟಿಕೇಟ್ ರಹಿತ ಪ್ರಯಾಣಿಕರು ಪತ್ತೆ ಆಗಿದ್ದಾರೆ. ಇದರಿಂದ ಒಟ್ಟು 6,34,865 ರೂಪಾಯಿಯನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ. ಇದೇ ವೇಳೆ ಬಿಎಂಟಿಸಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1748 ಪ್ರಕರಣಗಳು ಕೂಡ ದಾಖಲಾಗಿವೆ.
ಇನ್ನೂ ಬಿಎಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿದ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಿದ್ದ 250 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಪ್ರಕರಣಗಳಿಂದ ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ಒಟ್ಟು 25,000 ರೂಪಾಯಿ ಹಣ ದಂಡ ರೂಪದಲ್ಲಿ ಸಂಗ್ರಹಿಸಲಾಗಿದೆ.
3051 ಪ್ರಯಾಣಿಕರ ಮೇಲೆ ದಂಡ ಹೇರಿಕೆ
ಒಟ್ಟಾರೆಯಾಗಿ ಡಿಸೆಂಬರ್ 2025 ರಲ್ಲಿ 3051 ಪ್ರಯಾಣಿಕರ ಮೇಲೆ ವಿವಿಧ ನಿಯಮ ಉಲ್ಲಂಘನೆಯಡಿ ಒಟ್ಟು 6,59,865 ರೂಪಾಯಿ ದಂಡ ವಿಧಿಸಿ, ಹಣ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ ಅಥವಾ ದಿನದ ಪಾಸ್ ಇಲ್ಲವೇ ಮಾಸಿಕ ಪಾಸುಗಳ ಸಹಿತ ಪ್ರಯಾಣಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಪ್ರಯಾಣಿಕರ ನಿಯಮ ಪಾಲನೆಯಿಂದ ಬಿಎಂಟಿಸಿ ಸಂಸ್ಥೆಯು ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕೂರುವಂತಿಲ್ಲ. ಒಂದು ವೇಳೆ ಕೂತರು ಸಹಿತ ಮಹಿಳಾ ಪ್ರಯಾಣಿಕರು ಬರುತ್ತಿದ್ದಂತೆ ಬಿಟ್ಟು ಕೊಡಬೇಕೆಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ.
ಬಿಎಂಟಿಸಿ ತನಿಖಾ ತಂಡದ ತಪಾಸಣೆಯ ಪಟ್ಟಿ
1. ತನಿಖೆ ಮಾಡಿದ ಒಟ್ಟು ಬಸ್‌ಗಳು: 18409
2. ಪತ್ತೆಯಾದ ಪ್ರಕರಣಗಳು: 1748 (ಇದರಲ್ಲಿ ಸಾಮಾನ್ಯ ಪ್ರಕರಣಗಳು: 1654, ಕೆಂಪು ಚುಕ್ಕೆ ಪ್ರಕರಣಗಳು: 68, ಗಂಭೀರ
ಕೆಂಪುಚುಕ್ಕೆ ಪ್ರಕರಣಗಳು: 23, ವಿಶೇಷ ಪ್ರಕರಣಗಳು: 01 ಮತ್ತು ಖಾಸಗಿ ಬಸ್ ಗಳ ಪ್ರಕರಣಗಳು: 02 ಸೇರಿವೆ)
3. ಟಿಕೇಟ್ ರಹಿತ ಪ್ರಯಾಣಿಕ ಮೇಲೆ ವಿಧಿಸಿದ ದಂಡ: 6,34,865 ರೂಪಾಯಿ
4. ಮಹಿಳಾ ಪ್ರಯಾಣಿಕರ ಆಸನದಲ್ಲಿ ಕೂತವರಿಗೆ ವಿಧಿಸಿದ : 25,000 ರೂಪಾಯಿ
5. ಒಟ್ಟು ವಸೂಲಾದ ದಂಡ : 6,59,865 ರೂಪಾಯಿ
6. ದಂಡ ವಿಧಿಸಲಾದ ಟಿಕೇಟ್ ರಹಿತ ಪ್ರಯಾಣಿಕರು: 2801
7. ಮಹಿಳಾ ಪ್ರಯಾಣಿಕರ ಆಸನದಲ್ಲಿ ಕೂತ ಪುರುಷ ಪ್ರಯಾಣಿಕರ ಸಂಖ್ಯೆ: 250
8. ದಂಡ ವಿಧಿಸಲಾದ ಒಟ್ಟು ಪ್ರಯಾಣಿಕರು: 3051












Click it and Unblock the Notifications