• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯಾರ್ಥಿಗಳಿಂದ ಬಿಎಂಟಿಸಿಗೆ ಹರಿದುಬಂದಿದ್ದು ಬರೋಬ್ಬರಿ 27 ಕೋಟಿ

|

ಬೆಂಗಳೂರು, ಜುಲೈ 24: ವಿದ್ಯಾರ್ಥಿಗಳ ಬಸ್‌ಪಾಸ್‌ನಿಂದ ಬಿಎಂಟಿಸಿಗೆ ಬರೋಬ್ಬರಿ 27 ಕೋಟಿ ಹರಿದುಬಂದಿದೆ.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳ ಬಸ್‌ ಪಾಸ್ ವಿತರಣೆ ಕುರಿತು ಗೊಂದಲ ಏರ್ಪಟ್ಟಿತ್ತು. ಜುಲೈವರೆಗೂ ಬಿಎಂಟಿಸಿ ಬಸ್‌ಪಾಸ್ ಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಹಳೆ ಪಾಸುಗಳನ್ನು ತೋರಿಸಿ ಅಥವಾ ಕಾಲೇಜಿನ ರಶೀದಿಯನ್ನು ತೋರಿಸಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿತ್ತು.

2030ಕ್ಕೆ ಬಿಎಂಟಿಸಿ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್, ಎಷ್ಟು ಸತ್ಯ ಸ್ವಾಮಿ?2030ಕ್ಕೆ ಬಿಎಂಟಿಸಿ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್, ಎಷ್ಟು ಸತ್ಯ ಸ್ವಾಮಿ?

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಒಟ್ಟು 23322 ಪಾಸುಗಳಿಂದ ಒಟ್ಟು 3,776,500ರೂಗಳು ಸಂದಾಯವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿ ಪಾಸು(ಹುಡುಗರಿಗೆ) 22762 ಪಾಸುಗಳು ವಿತರಣೆಯಾಗಿದ್ದು ಅದರಿಂದ 11,018,000 ರೂ ಬಂದಿದೆ.

ಪ್ರೌಢಶಾಲಾ ವಿದ್ಯಾರ್ಥಿ ಪಾಸು(ಹುಡುಗಿಯರಿಗೆ)23362 ಪಾಸುಗಳು ವಿತರಣೆಯಾಗಿದ್ದು ಅದರಿಂದ 8071000 ರೂ ಸಂದಾಯವಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ 88,058 ಪಾಸುಗಳನ್ನು ವಿತರಿಸಲಾಗಿದ್ದು, 65360000 ರೂ ಬಂದಿದೆ.

ಕಾಳೇಜು ವಿದ್ಯಾರ್ಥಿಗಳಿಗೆ(ಪದವಿ ಸ್ನಾತಕೋತ್ತರ ಪದವಿ ಇತ್ಯಾದಿ)ಗೆ 92406 ಪಾಸುಗಳು ವಿತರಣೆಯಾಗಿವೆ ಅದರಿಂದ 83,340,600 ರೂ ಸಂದಾಯವಾಗಿದೆ.

ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ 29831 ಸಾವಿರ ಪಾಸುಗಳನ್ನು ವಿತರಿಸಲಾಗಿದ್ದು, 27 ,669 ,900 ರೂ ಲಭ್ಯವಾಗಿದೆ. ತಾಂತ್ರಿಕ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ 1109 ಪಾಸುಗಳನ್ನು ವಿತರಿಸಲಾಗಿದ್ದು, 1509400 ರೂ ಲಭ್ಯವಾಗಿದೆ. ಸಂಜೆ ಕಾಲೇಜು, ಪಿಎಚ್‌ಡಿ ವಿದ್ಯಾರ್ಥಿಗಳಿಗೆ 54920 ಪಾಸುಗಳನ್ನು ವಿತರಿಸಲಾಗಿದ್ದು, 70,574400, ರೂ ಸಂದಾಯವಾಗಿದೆ.

English summary
BMTC have received 27 crore rupees from the student for bus passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X