BMTC: 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ: ಸಮಯಗಳ ವಿವರ ತಿಳಿಯಿರಿ
BMTC Good News: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲೊ ಬಿಎಂಟಿಸಿ ಕೂಡ ಒಂದಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಈ ಸಂಸ್ಥೆ ಬಸ್‌ಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮೂರು ಹೊಸ ಮಾರ್ಗಗಳಲ್ಲಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಸಮಯ, ಮಾರ್ಗಗಳ ಸಂಪೂರ್ಭ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸಿರುವ ಬಸ್‌ಗಳು ನಗರದ ಎರಡು ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಈ ಮೂಲಕ ಪ್ರಯಾಣಿಕರು ಪ್ರಮುಖ ಟರ್ಮಿನಲ್ ಅಥವಾ ನಿಲ್ದಾಣಗಳಲ್ಲಿ ಬಸ್ ಬದಲಾವಣೆ ಮಾಡದೆ ನೇರವಾಗಿ ಸಂಚಾರ ಮಾಡಬಹುದಾಗಿದೆ. ಈ ಬಗ್ಗೆ ಬಿಎಂಟಿಸಿ ಪ್ರಕಟಣೆ ಹೊರಡಿಸಿದ್ದು, ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ಪರಿಚಯಿಸಿದೆ. ಪ್ರಯಾಣಿಕರು ಈ ಸೇವೆಯನ್ನು ಬಳಕೆ ಕೊಳ್ಳಬೇಕೆಂದು ಬಿಎಂಟಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹೊಸ ಬಸ್ ಮಾರ್ಗ 1: ಮಾರ್ಗ ಸಂಖ್ಯೆ NICE-5EB ಆಗಿದ್ದು ಬಿಡದಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಒಂದು ಬಸ್ 2 ಟ್ರಿಪ್ ಸಂಚಾರ ಮಾಡಲಿದೆ. ಬಿಡದಿ ಬಸ್ ನಿಲ್ದಾಣವನ್ನು ಬೆಳಗ್ಗೆ 8 ಗಂಟೆಗೆ ಬಿಡಲಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್‌ನಿಂದ ಸಂಜೆ 6 ಗಂಟೆಗೆ ಬಿಡಲಿದೆ. ಈ ಬಸ್ ಕುಂಬಳಗೋಡು, ಅಂಚೇಪಾಳ್ಯ, ಬಸವನಗರ, ನೈಸ್ ರಸ್ತೆ, ಕೋನಪ್ಪನ ಅಗ್ರಹಾರ ಮಾರ್ಗದಲ್ಲಿ ಸಂಚಾರ ಮಾಡಲಿದೆ.
ಹೊಸ ಬಸ್ ಮಾರ್ಗ 2: ಮಾರ್ಗ ಸಂಖ್ಯೆ - NICE-5K ಆಗಿದ್ದು, ಕೆಂಗೇರಿ ಟಿಟಿಎಂಸಿಯಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ 4 ಬಸ್‌ಗಳನ್ನು ಬಿಡಲಾಗಿದ್ದು, 32 ಟ್ಟಿಪ್ ಓಡಾಟ ನಡೆಸಲಿವೆ. ಕೆಂಗೇರಿ ಟಿಟಿಎಂಸಿ ನಿಲ್ದಾಣವನ್ನು ಬೆಳಗ್ಗೆ 07.15, 07.45, 08.15, 08.45, 09.45, 10.35, 11.05, 11.35, 12.50, ಮಧ್ಯಾಹ್ನ 1.20, 1.50, 2.20, 3.50, ಸಂಜೆ 4.20, 4.50, 5.20 ಗಂಟೆಗೆ ಬಿಡಲಿವೆ.
ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್‌ನಿಂದ ಬೆಳಗ್ಗೆ 08.30, 09.00, 09.30, 10.00, 11.15,11.45, ಮಧ್ಯಾಹ್ನ 12.15, 12.45, 2.00, 2.30, 3.00, 3.30, 5.00, 5.30, 6.00, 6.30 ಬಿಡಲಿವೆ. ಇನ್ನೂ ಈ ಬಸ್‌ಗಳು ನೈಸ್ ರಸ್ತೆ, ಕೋನಪ್ಪನ ಅಗ್ರಹಾರ ಮಾರ್ಗದಲ್ಲಿ ಸಂಚಾರ ಮಾಡಲಿವೆ.
ಹೊಸ ಬಸ್ ಮಾರ್ಗ 3: ಮಾರ್ಗ ಸಂಖ್ಯೆ NICE-6E ಆಗಿದ್ದು, ಬಸವೇಶ್ವರ ನಗರದಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಒಂದು ಬಸ್ ಬಸ್ 2 ಟ್ರಿಪ್ ಸಂಚಾರ ಮಾಡಲಿದೆ. ಬಸವೇಶ್ವರನಗರ ನಿಲ್ದಾಣವನ್ನು ಬೆಳಗ್ಗೆ 07.30 ಬಿಡಲಿದೆ. ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್‌ನಿಂದ ವೇಳೆ ಸಂಜೆ 5.45 ಗಂಟೆಗೆ ಬಿಡಲಿದ್ದು, ಸುಮನಹಳ್ಳಿ, ಸುಂಕದಕಟ್ಟೆ, ಬ್ಯಾಡರಹಳ್ಳಿ, ಗೊಲ್ಲಹಳ್ಳಿ (ನೈಸ್ ರಸ್ತೆ ಮೂಲಕ) ಬಸ್‌ಗಳು ಸಂಚಾರ ಮಾಡಲಿದೆ.












Click it and Unblock the Notifications