ರೈಲ್ವೆ ನಿಲ್ದಾಣದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭ

ಬೆಂಗಳೂರು, ಡಿಸೆಂಬರ್ 16 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸ್ ಸೇವೆಯನ್ನು ಆರಂಭಿಸಿದೆ. ಸಾವಿರಾರು ಜನರಿಗೆ ಇದರಿಂದಾಗಿ ಸಹಾಯಕವಾಗಲಿದೆ.

ಸೋಮವಾರ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬೆಂಗಳೂರು ಕೇಂದ್ರದ ಬಿಜೆಪಿ ಸಂಸದ ಪಿ. ಸಿ. ಮೋಹನ್ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು. ಬಿಎಂಟಿಸಿ ಎಂಡಿ ಸಿ. ಶಿಖಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಎಂಟಿಸಿ ಬಸ್‌ಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ನಿಂದ ನಗರದ ವಿವಿಧ ಭಾಗಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸಲಿವೆ. ಇದರಿಂದಾಗಿ ರೈಲು ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಸಾಗಲು ಆಟೋ, ಕ್ಯಾಬ್ ಅವಲಂಬಿಸಿದ್ದ ಜನರಿಗೆ ಅನುಕೂಲವಾಗಲಿದೆ.

ನೈಋತ್ಯ ರೈಲ್ವೆಯ ಅಧಿಕಾರಿಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಕೆಲವು ದಿನಗಳ ಹಿಂದೆ ಬಸ್ ಸೇವೆ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದರು. ಬಿಎಂಟಿಸಿ ಬಸ್ ಸೇವೆ ಆರಂಭಿಸುವ ಕುರಿತು ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಗೇಟ್ ನಂಬರ್ 3ರಿಂದ ಸಂಪರ್ಕ

ಗೇಟ್ ನಂಬರ್ 3ರಿಂದ ಸಂಪರ್ಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 3ನೇ ಗೇಟ್‌ನಿಂದ ಸಂಚಾರ ನಡೆಸಲಿವೆ. ಬೆಂಗಳೂರು ನಗರದ ವಿವಿಧ ಬಡಾವಣೆಗಳಿಗೆ ಬಸ್‌ಗಳು ನೇರವಾಗಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿವೆ.

1.7 ಕೋಟಿ ವೆಚ್ಚದ ಪ್ರವೇಶ ದ್ವಾರ

1.7 ಕೋಟಿ ವೆಚ್ಚದ ಪ್ರವೇಶ ದ್ವಾರ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 1.7 ಕೋಟಿ ವೆಚ್ಚದಲ್ಲಿ 3ನೇ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಜೂನ್‌ನಲ್ಲಿ ಇದು ಉದ್ಘಾಟನೆಗೊಂಡಿದ್ದು, ಇಲ್ಲಿಗೆ ಈಗ ಬಿಎಂಟಿಸಿ ಬಸ್ ಆಗಮಿಸಲಿದೆ. ಇದರಿಂದಾಗಿ ಜನರು ನೇರವಾಗಿ ರೈಲು ನಿಲ್ದಾಣ ತಲುಪಬಹುದಾಗಿದೆ.

ಫ್ಲಾಟ್‌ ಫಾರಂ ಸಂಪರ್ಕ

ಫ್ಲಾಟ್‌ ಫಾರಂ ಸಂಪರ್ಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಗೇಟ್ ನಂಬರ್ 3 ನೇರವಾಗಿ ರೈಲು ನಿಲ್ದಾಣದ ಫ್ಲಾಟ್‌ ಫಾರಂ ನಂಬರ್ 1ಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಯೇ ರೈಲ್ವೆ ಇಲಾಖೆ ಟಿಕೆಟ್ ಕೌಂಟರ್ ತೆರೆದಿದೆ. ಆದ್ದರಿಂದ, ಬಿಎಂಟಿಸಿ ಬಸ್‌ಗೆ ಬರುವ ಪ್ರಯಾಣಿಕರು ಇಲ್ಲಿ ಟಿಕೆಟ್ ಪಡೆದು ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗಲಿದೆ.

ಮೆಜೆಸ್ಟಿಕ್‌ನಿಂದ ನಡೆಯಬೇಕಿತ್ತು

ಮೆಜೆಸ್ಟಿಕ್‌ನಿಂದ ನಡೆಯಬೇಕಿತ್ತು

ಸ್ಥಳಾವಕಾಶದ ಕೊರತೆ ಕಾರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದೊಳಕ್ಕೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಜನರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದು ಸುರಂಗ ಮಾರ್ಗದ ಮೂಲಕ ರೈಲ್ವೆ ನಿಲ್ದಾಣಕ್ಕೆ ಬರಬೇಕಿತ್ತು. ಇದಕ್ಕಾಗಿ ಸುಮಾರು ದೂರ ನಡೆಯಬೇಕಿತ್ತು. ಈಗ ಬಸ್ ನೇರವಾಗಿ ರೈಲು ನಿಲ್ದಾಣಕ್ಕೆ ಹೋಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+