ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC News: ಬೆಂಗಳೂರನಲ್ಲಿ 921 ಹೊಸ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಸಂಪುಟ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 09: ಬೆಂಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲಿ ಸಿಇಎಸ್ಎಲ್ ಟೆಂಡರ್ ಕಂಪನಿ ಮೂಲಕ ಒಟ್ಟು 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಹೊಸದಾಗಿ ಬಸ್‌ಗಳು ಮುಂದಿನ ದಿನಗಳಲ್ಲಿ ಓಡಾಡಲಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಹೊಸ 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ರಾಜ್ಯ ರಾಜಧಾನಿಗೆ 921 ಬಸ್‌ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಅದಕ್ಕಾಗಿ ಸಹಾಯ ಧನವನ್ನೂ ನೀಡಲಿದೆ. ಅಲ್ಲದೇ ಇಷ್ಟು ಬಸ್‌ಗಳ ಖರೀದಿಗೆ ರಾಜ್ಯ ಸರ್ಕಾರವು ಸಹಾಯಧನ ನೀಡಲಿದೆ.

Railway News: ಡಿ.10ರಿಂದ ಜ.29ರವರೆಗೆ ಬೆಂಗಳೂರು-ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚಾರRailway News: ಡಿ.10ರಿಂದ ಜ.29ರವರೆಗೆ ಬೆಂಗಳೂರು-ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚಾರ

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಈ ಬಸ್ಸುಗಳಿಗೆ ರಾಜ್ಯ ಸರ್ಕಾರವೂ ಧನಸಹಾಯ ನೀಡಲಿದೆ. ಇದನ್ನು ಬಳಸಿಕೊಂಡು ಬಿಎಂಟಿಸಿ ಈ ಬಸ್‌ಗಳನ್ನು ಸಿಇಎಸ್‌ಎಲ್ ಮೂಲಕ ಕಾರ್ಯಚರಣೆ ನಡೆಸಲಿವೆ ಎಂದು ತಿಳಿಸಿದರು.

ಒಂದು ಎಲೆಕ್ಟ್ರಿಕ್ ಬಸ್ಸಿಗೆ ಸರಿ ಸುಮಾರು 1.50 ಕೋಟಿ ಬೆಲೆ ಇದೆ. ಅದರನ್ವಯ ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ 39.08 ಲಕ್ಷ ರೂ.ಸಹಾಯಧನ ನೀಡಲಿದೆ. ಕೇಂದ್ರ ಈ ಹಣವನ್ನು ಬಸ್‌ ಒದಗಿಸುವ ಕಂಪನಿಗೆ ನೀಡಲಾಗುವುದು. ಬಾಕಿ ಮೊತ್ತವನ್ನು ಸಿಇಎಸ್‌ಎಲ್‌ ಟೆಂಡರ್ ಕಂಪನಿಯೇ ಭರಿಸಿ ಬಸ್‌ ಖರೀದಿ ಮಾಡಲಿದೆ. ಬಿಎಂಟಿಸಿ ಪ್ರತಿ ಕಿ.ಮೀಗೆ 40ರೂ. ನಿಗದಿ ಮಾಡಿದ್ದು, ಆ ಮೊತ್ತವನ್ನು ಸಿಇಎಸ್ಎಲ್‌ಗೆ ನೀಡಲಾಗುತ್ತದೆ. ಚಾಲಕನನ್ನು ಕಂಪನಿಯೇ ಒದಗಿಸುತ್ತದೆ. ನಿರ್ವಾಹಕರು ಮಾತ್ರ ಬಿಎಂಟಿಸಿ ನಿಗದವರು ಇರಲಿದ್ದಾರೆ ಎಂದು ಅವರು ವಿವರಿಸಿದರು.

BMTC 921 Electric Bus Will Be Run In Bengaluru Agreed By Karnataka Cabinet

ಸಂಪುಟ ಸಭೆಯ ಇತರ ನೀರ್ಣಯಗಳು

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಗರದ ಹೊರವಲಯದಲ್ಲಿರುವ ಉಪನಗರಗಳನ್ನು ಸಂಪರ್ಕಿಸುವಂತೆ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಮಧ್ಯಂತರ ವರ್ತುಲ ರಸ್ತೆಯ ಗ್ರೇಡ್ ಸಪರೇಟರ್ ಮರುನಿಗದಿಪಡಿಸಲು ರಾಜ್ಯ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ನಗರದಲ್ಲಿ ಕಳೆದ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಸುರಿದ ಭಾರಿ ಮಳೆಯಿಂದ ಉಂಟಾಗಿದ್ದ ಪ್ರವಾಹ ಹಾನಿಯನ್ನು ತಡೆಗಟ್ಟುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಚಂದ್ರಾ ಲೇಔಟ್‌ನಲ್ಲಿ ಸುಮಾರು 2924.89 ಚದರ ಮೀಟರ್‌ ವಿಸ್ತೀರ್ಣದಲ್ಲಿ ಬಿಬಿಎಂಪಿ ನಿರ್ಮಿಸಿರುವ ಕನಕ ಭವನದ ಕಟ್ಟಡವನ್ನು ಕಾಗಿನೆಲೆ ಮಹಾಸಂಸ್ಥಾನದ ಕನಕಪೀಠಕ್ಕೆ 30 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ಹಸ್ತಾಂತರಿಸಲು ಅನುಮೋದನೆ ದೊರೆತಿದೆ.

ಇನ್ನೂ ಯಲಹಂಕ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿನ 7 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ಗೆ ಅಂತಾರಾಷ್ಟ್ರೀಯ ದರ್ಜೆ ಟೆನ್ನಿಸ್‌ ಕ್ರೀಡಾಂಗಣ ನಿರ್ಮಾಣಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

English summary
Bengaluru Metropolitan Transport Corporation (BMTC) 921 Electric bus will be run in Bengaluru agreed by state Cabinet, JC Madhuswamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X