ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಬೃಹತ್ ಮೆಟ್ರೋ ನಿಲ್ದಾಣ ಸ್ಥಾಪನೆ, ಎಲ್ಲಿ?, ಹಣ ಎಷ್ಟು?

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ.ನಿಂದ ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣವೊಂದು ಜಯನಗರದಲ್ಲಿ ತಲೆ ಎತ್ತಲಿದೆ. ಸ್ಥಳ ಎಲ್ಲಿ, ಅಂದಾಜು ವೆಚ್ಚ ಎಷ್ಟು? ತಿಳಿಯಲು ಮುಂದೆ ಓದಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ, ಹೊಸ ಮಾರ್ಗ ನಿರ್ಮಾಣದ ಯೋಜನೆಗಳು ನಡೆಯುತ್ತಿವೆ. ಇದೇ ವೇಳೆ ವಿವಿಧೆಡೆ ಮೆಟ್ರೋ ನಿಲ್ದಾಣಗಳು ನಿರ್ಮಿಸಲಾಗುತ್ತಿದ್ದು, ಆ ಪೈಕಿ ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣವೊಂದು ಜಯನಗರದಲ್ಲಿ ತಲೆ ಎತ್ತಲಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಒಟ್ಟು ಬರೊಬ್ಬರಿ 130 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾರಿಡಾರ್‌ ಮೇಲೆ ಬೃಹತ್ ಮೆಟ್ರೋ ನಿಲ್ದಾಣವೊಂದನ್ನು ನಿರ್ಮಿಸಲಿದೆ. ಜನಗರದ 9 ನೇ ಬ್ಲಾಕ್ ವ್ಯಾಪ್ತಿಯಲ್ಲಿರುವ ಜಯದೇವ ಆಸ್ಪತ್ರೆ ಬಳಿ ಇಂತದ್ದೊಂದು ಮೆಟ್ರೋ ನಿಲ್ದಾಣ ತಲೆ ಎತ್ತಲಿದೆ.

Namma Metro: ಪಿಲ್ಲರ್ ಕುಸಿತದ ಬಳಿಕ ಕಾಮಗಾರಿ ಸ್ಥಗಿತ, BMRCL ಕೈಗೊಂಡ ಸುರಕ್ಷತಾ ವಿಧಾನ ಇದುNamma Metro: ಪಿಲ್ಲರ್ ಕುಸಿತದ ಬಳಿಕ ಕಾಮಗಾರಿ ಸ್ಥಗಿತ, BMRCL ಕೈಗೊಂಡ ಸುರಕ್ಷತಾ ವಿಧಾನ ಇದು

ಈ ನಿಲ್ದಾಣದ ವಿಶೇಷತೆ ಎಂದರೆ, ರಸ್ತೆ ಕಾರಿಡಾರ್‌ ಮೇಲಿರುವ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಇದು ಪಾತ್ರವಾಗಲಿದೆ. RV ರಸ್ತೆ ಜಂಕ್ಷನ್‌ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ ಹಾಗೂ ಬನ್ನೇರುಘಟ್ಟ-ನಾಗವಾರ ವರೆಗಿನ ಪಿಂಕ್ ಲೈನ್ ಅನ್ನು ಇಂಟರ್‌ಚೇಂಜ್ ಆಗಿಸುವ ಮೆಟ್ರೋ ನಿಲ್ದಾಣವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

2024ಕ್ಕೆ 2ನೇ ಹಂತದ ಯೋಜನೆ ಪೂರ್ಣ ಸಾಧ್ಯತೆ

2024ಕ್ಕೆ 2ನೇ ಹಂತದ ಯೋಜನೆ ಪೂರ್ಣ ಸಾಧ್ಯತೆ

ಮುಂದಿನ ವರ್ಷ (2024)ದ ಹೊತ್ತಿಗೆ ನಮ್ಮ ಮೆಟ್ರೋ (Namma Metro) ಎರಡನೇ ಹಂತದ ಕಾಮಗಾರಿ ಬಹುತೇಕ ಮುಗಿಯಲಿದೆ. ಇನ್ನು ಗುರುವಾರಷ್ಟೇ ಕೇಂದ್ರ ಸರ್ಕಾರ ಬೆಂಗಳೂರಲ್ಲಿ 26,000 ಕೋಟಿ ರೂ.ಗಳ ಮೆಟ್ರೋ ಮೂರನೇ ಹಂತದ ಕಾಮಗಾರಿ ನಿರ್ಮಾಣದ ಪ್ರಸ್ತಾವನೆಗೆ ಸ್ವೀಕರಿಸಿದೆ. ಈ ಬಗ್ಗೆ ಸಂಸತ್ತಿಗೆ ಕೇಂದ್ರವೇ ತಿಳಿಸಿದೆ.

ಮೂರನೇ ಹಂತದ ಕಾಮಗಾರಿ ಬಳಿಕ ನಾಲ್ಕನೇ ಹಂತದ ಮೆಟ್ರೋ ವಿಸ್ತರಣೆ ಇಲ್ಲವೇ ಹೊಸ ಕಾಮಗಾರಿಗೆ ಕೇಂದ್ರಕ್ಕೆ ಅಮನುತಿ ಕೋರಲಾಗುವುದು. ಈ ನಾಲ್ಕನೆ ಹಂತದ ಮೆಟ್ರೋ ಯೊಜನೆಕ ಉಪನಗರ ಪ್ರದೇಶಗಳನ್ನು ಸಂಪರ್ಕ ಸಾಧಿಸುತ್ತದೆ. ಉದಾಹರಣೆಗೆ ಬೆಂಗಳೂರು- ಮಾಗಡಿಗೆ ಸಾರಿಗೆ ಸಂಪರ್ಕ ದೊರೆಯಲಿದೆ ಎಂದು ರಾಜ್ಯ ಸರ್ಕಾರವೇ ತಿಳಿಸಿದೆ.

ಮೆಟ್ರೋ 3ನೇ ಹಂತದಲ್ಲಿ 2 ಕಾರಿಡಾರ್

ಮೆಟ್ರೋ 3ನೇ ಹಂತದಲ್ಲಿ 2 ಕಾರಿಡಾರ್

ಇನ್ನೂ ಮೂರನೇ ಹಂತದ ಮೆಟ್ರೋ ಕಾಮಗಾರಿಯಲ್ಲಿ ಬರುವ ಕಾರಿಡಾರ್‌ಗಳೆಂದರೆ, 'ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಒಟ್ಟು 32.15 ಕಿಲೋ ಮೀಟರ್ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.50 ಕಿಲೋ ಮೀಟರ್ ಮಾರ್ಗ ನಿರ್ಮಾಣವಾಗಲಿದೆ. ಎರಡು ಕಾರಿಡಾರ್‌ಗಳಿಗೆ ಒಟ್ಟು ಸುಮಾರು 16,328 ಕೋಟಿ ರೂ.ವೆಚ್ಚವಾಗಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೊ 2ನೇ ಹಂತ ಈಗಾಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕಾನೂನು ತೊಡಕುಗಳು, ಮರ ಕಡಿಯಲು ಅನುಮತಿ ಪಡೆಯುವಲ್ಲಿನ ವಿಳಂಬ, ಹೆಚ್ಚಿನ ಪ್ರೀಮಿಯಂ, ಭೂಸ್ವಾಧೀನದಲ್ಲಿ ಸಮಸ್ಯೆಗಳು ಮತ್ತು ಕೋವಿಡ್ ಪ್ರೇರಿತ ಲಾಕ್‌ಡೌನ್‌ಗಳು ಮತ್ತು ಸುರಂಗ ಕೊರೆಯುವ ಯೋಜನೆಯ ಟೆಂಡರ್ ರದ್ದು ಮತ್ತು ವಿಳಂಬದಿಂದ ತಡವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮೆಟ್ರೋ ಯೋಜನೆಗಳ ಅಂದಾಜು ವೆಚ್ಚದ ವಿವರ

ಮೆಟ್ರೋ ಯೋಜನೆಗಳ ಅಂದಾಜು ವೆಚ್ಚದ ವಿವರ

ವಿಧಾನಸಭೆಯಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ, ನಮ್ಮ ಮೆಟ್ರೋ 1ನೇ ಹಂತ ಯೋಜನಾ ವೆಚ್ಚ 14,133.17 ಕೋಟಿ ರೂ. 2ನೇ ಹಂತ ಪೂರ್ಣಕ್ಕೆ ಒಟ್ಟು ಯೋಜನಾ ವೆಚ್ಚ 30,695.12 ಕೋಟಿ ಮತ್ತು 2ನೇ ಹಂತದ A ಮತ್ತು B ಉಪಹಂತದ ಯೋಜನೆಗಳಿಗೆ 14,788.10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 10,341.01 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರವು 24,513.87 ಕೋಟಿ ಪಾಲು ಹೊಂದಿದೆ. ಬಾಕಿ ಹಣ ಇನ್ನಿತರ ಮೂಲಗಳಿಂದ ದೊರೆಯುತ್ತದೆ.

ಕೆಂಗೇರಿಯಿಂದ ಚೆಲ್ಲಘಟ್ಟವರೆಗೆ ಮೆಟ್ರೋ ವಿಸ್ತರಣೆ

ಕೆಂಗೇರಿಯಿಂದ ಚೆಲ್ಲಘಟ್ಟವರೆಗೆ ಮೆಟ್ರೋ ವಿಸ್ತರಣೆ

ಕಾಳೇನ ಅಗ್ರಹಾರ-ನಾಗವಾರ ಮಾರ್ಗಕ್ಕೆ 12,816.95 ಕೋಟಿ ರೂ., ಆರ್‌ವಿ ರಸ್ತೆ-ಬೊಮ್ಮಸಂದ್ರ 6,900.05 ಕೋಟಿ ರೂಪಾಯಿ, ವೈಟ್‌ಫೀಲ್ಡ ಯೋಜನೆಗೆ 5,449.36 ಕೋಟಿ ರೂ.ವೆಚ್ಚವಾಗಬಹದು ಎಂದು ಅಂದಾಜಿಸಲಾಗಿದೆ. ಇದು ದುಬಾರಿ ಯೋಜನೆಯಾಗಿದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗೆ 2.05 ಕಿಲೋ ಮೀಟರ್ ಮಾರ್ಗ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ.

ಇನ್ನೂ 19.75 ಕಿಲೋ ಮೀಟರ್‌ನ ಸೆಂಟ್ರಲ್ ಸಿಲ್ಕ್ ಬೋರ್ಡ್‌- ಕೆಆರ್ ಪುರಂವರೆಗೆ ಯೋಜನೆಗೆ ಮತ್ತು ರಿಂಗ್ ರಸ್ತೆ ಸಮೀಪ ಹಾದು ಹೋಗುವ ಏರ್‌ಪೋರ್ಟ್ ರಸ್ತೆ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ 38.44 ಕಿಲೋ ಮೀಟರ್ ಸಂಪರ್ಕವು 2026ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

English summary
Namma Metro: Bengaluru Metro Rail Corporation Limited (BMRCL) will build biggest metro station in Bengaluru at Jayanagar cost of Rs 130 crore soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X