ಟೆಂಡರ್ ರದ್ದು: ನಾಗವಾರ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ಮತ್ತಷ್ಟು ತಡ
ಬೆಂಗಳೂರು,ಫೆಬ್ರವರಿ 06:ಕಾಳೇನ ಅಗ್ರಹಾರ ಹಾಗೂ ನಾಗವಾರ ನಡುವಿನ ಎರಡನೇ ಹಂತದ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಟೆಂಡರ್ ರದ್ದುಪಡಿಸಲಾಗಿದೆ.
ಸಿಂಪ್ಲೆಕ್ಸ್ ಸಂಸ್ಥೆ ಕಲೆನ ಅಗ್ರಹಾರದಿಂದ ನಾಗವಾರ ಮಾರ್ಗದಲ್ಲಿ ಎರಡನೇ ಹಂತದ ಎಲೆವೇಟೆಡ್ ಕಾಮಗಾರಿಯನ್ನು ನಡೆಸುತ್ತಿತ್ತು. ಈ ಮಾರ್ಗ 7.5 ಕಿಲೋ ಮೀಟರ್ ಉದ್ದದ ಕಲೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಹೊಂದಿದ್ದು ಕಳೆದ ಜನವರಿ 29ಕ್ಕೆ ರದ್ದುಪಡಿಸಲಾಗಿದೆ.
ಔಟರ್ ರಿಂಗ್ ರೋಡ್ ಮೆಟ್ರೋ: ಮಾರ್ಚ್ ಅಂತ್ಯಕ್ಕೆ ಗುತ್ತಿಗೆ
ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸದಿಂದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಿದ್ದ 500 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ರದ್ದುಗೊಳಿಸಿದೆ.

ಹೆಸರಘಟ್ಟ ಕ್ರಾಸ್ ಹಾಗೂ ಮಾದಾವರ ನಡುವೆ ಕಾಮಗಾರಿ
ಹೆಸರಘಟ್ಟ ಕ್ರಾಸ್ ಮತ್ತು ಮಾದಾವರ ಮಧ್ಯೆ 3 ಕಿಲೋ ಮೀಟರ್ ಗಳ ಹಸಿರು ಮಾರ್ಗದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದಿರಕಲ್ಲು ಮತ್ತು ಮಾದಾವರಗಳಲ್ಲಿ ನಿಲ್ದಾಣಗಳಿರುತ್ತವೆ.

ಕೆಲಸದ ಪ್ರಗತಿ ಶೂನ್ಯ
ಕಾರ್ಯನಿರ್ವಹಿಸದಿರುವಿಕೆ ಮತ್ತು ಅನುಷ್ಠಾನ ದಿನಾಂಕವು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ರೀಚ್ -6 ಎಲಿವೇಟೆಡ್ ಲೈನ್ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. 18 ತಿಂಗಳ ಹಿಂದೆ ಇಡೀ ಭೂಮಿಯನ್ನು ಲಭ್ಯಗೊಳಿಸಲಾಗಿದ್ದರೂ, ಇದುವರೆಗಿನ ಕೆಲಸದ ಪ್ರಗತಿಯು ಕೇವಲ 35 ಪ್ರತಿಶತದಷ್ಟಿದೆ. 500 ಕೋಟಿ ರೂ.ಗಳ ಯೋಜನೆಯಲ್ಲಿ ಇದುವರೆಗೆ ಮಾಡಿದ ಕೆಲಸವು ಕೇವಲ 175 ಕೋಟಿ ರೂಗಳದ್ದಾಗಿದೆ ಎಂದು ಬಿಎಂಆರ್ ಸಿಎಲ್ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.

ಮಾರ್ಚ್ ಅಂತ್ಯಕ್ಕೆ ಗುತ್ತಿಗೆ
ಸಿಲ್ಕ್ ಬೋರ್ಡ್ ಹಾಗೂ ಕೆಆರ್ ಪುರಂ ಎರಡನೇ ಹಂತದ ನಮ್ಮ ಮೆಟ್ರೋ ಕಾರಿಡಾರ್ ಗುತ್ತಿಗೆಯನ್ನು ಮಾರ್ಚ್ ಅಂತ್ಯದೊಳಗೆ ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಮೆಟ್ರೋ ಕಾರಿಡಾರ್ ಯೋಜನೆಗೆ ವೇಗ ಸಿಕ್ಕಿದಂತಾಗುತ್ತದೆ. ಮೂರು ವರ್ಷ ಟೆಂಡರ್ ರದ್ದುಗೊಳಿಸುವುದು,ಅಥವಾ ಬಿಡ್ ಮುಂದೂಡುವುದರಲ್ಲೇ ಕಳೆದುಹೋಗಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ನಮ್ಮ ಮೆಟ್ರೋ ರೈಲು ಯೋಜನೆಗೆ ಬರೋಬ್ಬರಿ 14,788 ಕೋಟಿ ರೂ. ಘೋಷಣೆ ಮಾಡುವ ಮೂಲಕ ನಗರಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.

ಮೂರನೇ ಹಂತದ ವಿಸ್ತರಣೆ ಕಾಮಗಾರಿ ಮುಂದುವರೆಯಲಿದೆ
ಆದರೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಜೊತೆಗೆ ಮೂರನೇ ಹಂತದ ರೀಚ್ -3 ವಿಸ್ತರಣೆ ಮಾರ್ಗದ ಕಾಮಗಾರಿ ಮುಂದುವರಿಯಲಿದೆ. ಈ ಮಾರ್ಗದಲ್ಲಿ 75 ಕೋಟಿ ರೂಪಾಯಿಗಳ ಕೆಲಸ ಮುಗಿದಿದೆ ಎಂದರು.

ಟೆಂಡರ್ ರದ್ದು: ನಾಗವಾರ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ಮತ್ತಷ್ಟು ತಡ
ಕಾಳೇನ ಅಗ್ರಹಾರ ಹಾಗೂ ನಾಗವಾರ ನಡುವಿನ ಎರಡನೇ ಹಂತದ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಟೆಂಡರ್ ರದ್ದುಪಡಿಸಲಾಗಿದೆ.