Namma Metro: ಮೆಟ್ರೋ ಕಿತ್ತಳೆ ಮಾರ್ಗದ ಕಾರಿಡಾರ್ ಭೂಸ್ವಾಧಿನ, ಅಪ್ಡೇಟ್ ಮಾಹಿತಿ ಇಲ್ಲಿದೆ
ಬೆಂಗಳೂರು, ಜನವರಿ 29: ಬೆಂಗಳೂರು ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ 03ನೇ ಹಂತದ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭೂಸ್ವಾಧಿನ ಪ್ರಕ್ರಿಯೆ ಆರಂಭಿಸಿದೆ. ಈ ಹಂತದಲ್ಲಿ ಒಟ್ಟು ಎರಡು ಕಾರಿಡಾರ್‌ಗಳು ನಿರ್ಮಾಣವಾಗುತ್ತಿವೆ. ಈ ಪೈಕಿ 'ಮೆಟ್ರೋ ಕಿತ್ತಳೆ ಮಾರ್ಗ'ಕ್ಕೆ (Namma Metro Orange Line) ನಿಗಮ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಅಗತ್ಯವಿರುವ 1.29 ಲಕ್ಷ ಚದರ ಮೀಟರ್ ಭೂಮಿ ಗುರುತಿಸಿದೆ.
ಮೆಟ್ರೋ ಮೂರನೇ ಹಂತದಲ್ಲಿ ಒಟ್ಟು ಎರಡು ಕಾರಿಡಾರ್‌ಗಳು ನಿರ್ಮಾಣವಾಗುತ್ತಿಗೆ. ಜೆಪಿನಗರ 4ನೇ ಹಂತ-ಕೆಂಪಾಪುರ ವರೆಗೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆ ವರೆಗೆ ಎರಡು ನಿರ್ಮಾಣವಾಗುತ್ತಿದೆ. ಇದರಲ್ಲಿ ಮೆಟ್ರೋ ಅಧಿಕಾರಿಗಳು ಮೆಟ್ರೋ ಕಿತ್ತಳೆ ಮಾರ್ಗ (ಜೆಪಿನಗರ 4ನೇ ಹಂತ-ಕೆಂಪಾಪುರ) ಮಾರ್ಗವನ್ನು ಮೊದಲು ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಈ ಕಾರಿಡಾರ್ ನಿರ್ಮಿಸಲು ಸುಮಾರು 15000 ಕೋಟಿ ರೂಪಾಯಿಗೆ ಅಧಿಕ ಹಣ ಖರ್ಚಾಗಬಹುದು ಎಂದಿರುವ ಬಿಎಂಆರ್‌ಸಿಎಲ್ ಇತ್ತೀಚೆಗೆ ಜಿಯೋ ಟೆಕ್ನಿಕಲ್ ಸರ್ವೇ ಆರಂಭಿಸಿತ್ತು. ಈ ಸಮೀಕ್ಷೆಯಲ್ಲಿ ಕಾರಿಡಾರ್ ನಿರ್ಮಾಣಕ್ಕೆ ಬೇಕಾದ 777 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಗುರುತಿಸಿದೆ. ಇವೆಲ್ಲವು ಖಾಸಗಿ ಆಸ್ತಿಗಳಾಗಿವೆ. ಶೀಘ್ರವೇ ಇದರ ಪರಿಹಾರ, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸದಲ್ಲಿ ನಮ್ಮ ಮೆಟ್ರೋ ಇದೆ.
ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಒಟ್ಟು 1900 ಕೋಟಿ ರೂಪಾಯಿ ಬೇಕಾಗಬಹುದು. ಈ ಭೂಸ್ವಾಧೀನ ಕುರಿತು ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ. ಮೆಟ್ರೋ ಅಧಿಕಾರಿಗಳು ಸಿದ್ಧತೆ ನಡೆಸಿದೆ. ಕಾರಿಡಾರ್ ಪೂರ್ಣಗೊಳ್ಳಲು ಈಗ ಗುರುತಿಸಿರುವ ಭೂಮಿ ಸಾಕಾಗುವುದಿಲ್ಲ, ಇನ್ನೂ 26000 ಚದರ ಮೀಟರ್ ಭೂಮಿಯ ಅಗತ್ಯವಿದೆ. ಇದಕ್ಕಾಗಿ ಸಾರಕ್ಕಿ, ಜಗರನಹಳ್ಳಿ, ನಾಯಂಡಹಳ್ಳಿ ಮತ್ತು ಒಳಗೊಂಡ ಇತರ ಸ್ಥಳಗಳಲ್ಲಿ ಭೂಮಿ ಗುರುತಿಸಲಿದ್ದೇವೆ.
ಈ ಕಾರಿಡಾರ್‌ಗಳಲ್ಲೂ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಮೂರನೇ ಹಂತದ ಮೆಟ್ರೋ ಯೋಜನೆ ಎರಡು ಕಾರಿಡಾರ್‌ಗಳಲ್ಲೂ ಡಬಲ್ ಡೆಕ್ಕರ್ ಮೇಲ್ಸೇತುವೆ ಬರಲಿವೆ. ಇದು ಹೊಸ ಡಿಪಿಆರ್‌ಗೆ ಸಂಬಂಧಪಡುತ್ತದೆ. ಭೂಸ್ವಾಧೀನ ಹಳೇ ಡಿಪಿಆರ್ ಮೂಲಕವೇ ನಡೆಯುತ್ತಿದೆ.
ಡಬಲ್ ಡೆಕ್ಕರ್ ಸಹಿತ ನಿರ್ಮಾಣವಾಗುವ ಜೆಪಿನಗರ-ಕೆಂಪಾಪುರ ಮಾರ್ಗವು 2029ರಲ್ಲಿ ಪೂರ್ಣಗೊಳಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಮೂರನೇ ಹಂತದ ಮತ್ತೊಂದು ಕಾರಿಡಾರ್ ನಿರ್ಮಾಣ ಕಾರ್ಯವು ಶೀಘ್ರವೇ ಅರಂಭಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.












Click it and Unblock the Notifications