ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಆಸ್ತಿ ತೆರಿಗೆ ಬದಲು 4 ರೀತಿ ಸೇವಾ ಶುಲ್ಕ ಕಟ್ಟಬೇಕು

|
Google Oneindia Kannada News

ಬೆಂಗಳೂರು,ಫೆಬ್ರವರಿ15: ನಮ್ಮ ಮೆಟ್ರೋ ಆಸ್ತಿ ತೆರಿಗೆ ಬದಲು 4 ಮಾದರಿಯ ಸೇವಾ ಶುಲ್ಕವನ್ನು ಕಟ್ಟಬೇಕಾಗಿದೆ.

ಉನ್ನತ ಮಟ್ಟದ ಸಮಿತಿಯು ಶುಲ್ಕವನ್ನು ನಿಗದಿಪಡಿಸಿದೆ. ಬಿಬಿಎಂಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿದ ಮಾದರಿಯಲ್ಲಿಯೇ ನಮ್ಮ ಮೆಟ್ರೋನಿಲ್ದಾಣ, ಕಟ್ಟಡ ಸೇರಿದಂತೆ ಇನ್ನಿತರೆ ಆಸ್ತಿಗಳಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ಕಟ್ಟಬೇಕಾಗಿದೆ.

 ಟೆಂಡರ್ ರದ್ದು: ನಾಗವಾರ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ಮತ್ತಷ್ಟು ತಡ ಟೆಂಡರ್ ರದ್ದು: ನಾಗವಾರ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ಮತ್ತಷ್ಟು ತಡ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಬಿಬಿಎಂಪಿ ಆಸ್ತಿ ತೆರಿಗೆ ವಿನಾಯಿತಿ ನೀಡಿಸೇವಾ ಶುಲ್ಕ ನಿಗದಿ ಮಾಡಿದೆ.ಆದರೂ ಸರ್ಕಾರಿ ಇಲಾಖೆಗಳು ಪ್ರತಿವರ್ಷ ಸೇವಾ ಶುಲ್ಕವನ್ನು ಪಾವತಿ ಮಾಡದೇ ಬಾಕಿಉಳಿಸಿಕೊಂಡಿವೆ.

2020-21ನೇ ಸಾಲಿನಲ್ಲಿ ಸರ್ಕಾರಿ ಕಟ್ಟಡಗಳಿಂದ ಸುಮಾರು 100 ಕೋಟಿಗೂ ಅಧಿಕ ಮೊತ್ತದ ಸೇವಾ ಶುಲ್ಕ ವಸೂಲಿ ಮಾಡಬೇಕಿದೆ.

ಸರ್ಕಾರಿ ಕಟ್ಟಡ,ಮೆಟ್ರೋಗೂ ವಿಧಿಸುತ್ತಿರುವ ಶುಲ್ಕದಲ್ಲಿ ವ್ಯತ್ಯಾಸವಿದೆ

ಸರ್ಕಾರಿ ಕಟ್ಟಡ,ಮೆಟ್ರೋಗೂ ವಿಧಿಸುತ್ತಿರುವ ಶುಲ್ಕದಲ್ಲಿ ವ್ಯತ್ಯಾಸವಿದೆ

ಸರ್ಕಾರಿ ಕಟ್ಟಡಗಳಿಗೂ,ನಮ್ಮ ಮೆಟ್ರೋಗೂ ವಿಧಿಸುತ್ತಿರುವ ಸೇವಾ ಶುಲ್ಕದಲ್ಲಿ ವ್ಯತ್ಯಾಸವಿದೆ. ಮೆಟ್ರೋಗೆ ಅದು ನಡೆಸುತ್ತಿರುವ ಚಟುವಟಿಕೆ ಆಧರಿಸಿ ಧರವನ್ನು ನಿಗದಿಪಡಿಸಲಾಗಿದೆ. ನಮ್ಮ ಮೆಟ್ರೋತನ್ನ ಸ್ವತ್ತಿನಲ್ಲಿ ಹೋಟೆಲ್,ಖಾಸಗಿ ಕಚೇರಿ,ವ್ಯಾಪಾರ ಮಳಿಗೆ ,ಪಾರ್ಕಿಂಗ್ ಶುಲ್ಕ ಸೇರಿದಂತೆ ಹಲವು ಚಟುವಟಿಕೆಗಳಿಗೆ ಜಾಗ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಆಸ್ತಿಗಳಿವೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಆಸ್ತಿಗಳಿವೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದ 400ಕ್ಕೂ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳಿಗೆ ಪ್ರತಿವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಶೇ.25ರಷ್ಟುಮಾತ್ರ ಸೇವಾ ಶುಲ್ಕ ವಸೂಲಿ ಮಾಡಲಾಗುತ್ತದೆ.ಅದೇ ಮಾದರಿಯಲ್ಲಿ ನಮ್ಮ ಮೆಟ್ರೋಗೆ ಸೇರಿದಕಟ್ಟಡ,ನಿವೇಶನಗಳಿಗೆ ಆಸ್ತಿ ತೆರಿಗೆ ವಿನಾಯಿತಿನೀಡಿ ಸೇವಾ ಶುಲ್ಕ ವಸೂಲಿ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಸಭೆ ಕರೆಯಲಾಗಿದೆ.

ನಿಲ್ದಾಣದ ಹೊರಗಿರುವ ಮೆಟ್ರೋಗೆ ಸೇರಿದ ಜಮೀನು

ನಿಲ್ದಾಣದ ಹೊರಗಿರುವ ಮೆಟ್ರೋಗೆ ಸೇರಿದ ಜಮೀನು

ನಿಲ್ದಾಣದಿಂದ ಹೊರಗಡೆ ಇರುವ ಮೆಟ್ರೋಗೆ ಸೇರಿದ ಜಮೀನು ಮತ್ತು ಕಟ್ಟಡಗಳಿಗೆ ಶೇ.75ರಷ್ಟು ಸೇವಾ ಶುಲ್ಕ ವಿಧಿಸಿ, ಶೇ.25ರಷ್ಟು ವಿನಾಯಿತಿ ನೀಡಿದೆ. ಮೆಟ್ರೋ ನಿಲ್ದಾಣದ ಹೊರ ಮತ್ತು ಒಳಗೆಇರುವ ಮಳಿಗೆ ಅಂಗಡಿ,ಕಿಯೋಸ್ಕ್,ನಿಲ್ದಾಣದಲ್ಲಿರುವ ಪಾರ್ಕಿಂಗ್ ಜಾಗಕ್ಕೆ ರಿಯಾಯಿತಿ ಇಲ್ಲ. ಶೇ.100ರಷ್ಟು ಸೇವಾ ಶುಲ್ಕ ವಿಧಿಸಲಾಗಿದೆ.

Recommended Video

ಆಫೀಸ್‌ನತ್ತ ಮುಖ ಮಾಡುತ್ತಿರುವ ನೌಕರರು ಕೇಂದ್ರದ ಈ ಗೈಡ್‌ಲೈನ್ಸ್‌ ಪಾಲಿಸುವುದು ಕಡ್ಡಾಯ | Oneindia Kannada
ನಾಲ್ಕು ಮಾದರಿಯ ಸೇವಾ ಶುಲ್ಕಗಳು ಯಾವುವು?

ನಾಲ್ಕು ಮಾದರಿಯ ಸೇವಾ ಶುಲ್ಕಗಳು ಯಾವುವು?

ನಮ್ಮ ಮೆಟ್ರೋ ನಿಲ್ದಾಣದ ಸೀಮಿತ ಪ್ರದೇಶ,ಡಿಪೋಗಳು,ಕಾರ್ಯಾಗಾರ,ಆಡಳಿತ ಕಚೇರಿ ಹಾಗೂ ತರಬೇತಿ ಕಚೇರಿಗಳಿಗೆ ಮಾತ್ರ ಶೇ.25ರಷ್ಟು ಸೇವಾ ಶುಲ್ಕ ವಿಧಿಸಿ ಶೇ.70ರಷ್ಟು ರಿಯಾಯಿತಿ ನೀಡಿದೆ.
ಇನ್ನು ಸಿಬ್ಬಂದಿ ವಾಸಿಸುವ ಮನೆಗಳಿಗೆ ಶೇ.50ರಷ್ಟು ಸೇವಾ ಶುಲ್ಕ ವಿಧಿಸಿ ಉಳಿದ ಶೇ.50ರಷ್ಟು ಪಾವತಿಗೆ ಸೂಚಿಸಿದೆ.

English summary
BBMP Says BMRCL have to pay 4 services Fee instead of Property tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X