• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನಮ್ಮ ಮೆಟ್ರೋ' ರೈಲುಗಳ ಸಂಚಾರ ಅವಧಿಯಲ್ಲಿ ಬದಲಾವಣೆ

|

ಬೆಂಗಳೂರು, ಅಕ್ಟೋಬರ್ 21: ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಬಳಿಕ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಸಂಚಾರವನ್ನು ಸೆಪ್ಟೆಂಬರ್ ತಿಂಗಳಿನಿಂದ ಪುನರಾರಂಭಿಸಲಾಗಿತ್ತು. ಹಂತ ಹಂತವಾಗಿ ವಿವಿಧ ರೈಲುಗಳ ಸಂಚಾರ ಶುರುವಾಗಿತ್ತು. ಮೆಟ್ರೋ ರೈಲುಗಳಲ್ಲಿ ಸಂಚರಿಸಲು ಅನೇಕ ಕಡ್ಡಾಯ ನಿಯಮಗಳನ್ನು ಪಾಲಿಸಬೇಕು. ಆದರೆ ಕೋವಿಡ್ ಭಯದಿಂದ ಈಗಲೂ ಜನರು ಮೆಟ್ರೋದಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಇದರಿಂದ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೆಟ್ರೂ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಹಾಗೂ ಹೆಚ್ಚುವರಿ ಸಂಚಾರ ನಡೆಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಈಗ ದಟ್ಟಣೆಯ ಅವಧಿಯಲ್ಲಿಯೂ ಮೆಟ್ರೋ ರೈಲುಗಳು ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದೆ. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ರೈಲುಗಳ ನಡುವಿನ ಕಾರ್ಯಾಚರಣೆ ಅವಧಿಯನ್ನು ಪರಿಷ್ಕರಿಸಿದೆ.

ತವರು ರಾಜ್ಯದಿಂದ ವಾಪಸ್ ಬಂದ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಸೋಂಕು

ಅಕ್ಟೋಬರ್ 22ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದ್ದು, ಇದುವರೆಗೆ ಇದ್ದ ರೈಲುಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ. ಸಂಚರಿಸುವ ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾದರೆ ಆಯ್ದ ನಿಲ್ದಾಣಗಳಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುವುದು ಎಂದು ನಿಗಮ ಹೇಳಿದೆ.

ಸೋಮವಾರದಿಂದ ಶುಕ್ರವಾರದವರೆಗೆ ದಟ್ಟಣೆಯ ಅವಧಿಯಲ್ಲಿ ಪ್ರತಿ ಐದು ನಿಮಿಷದ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ವಾರದ ಅವಧಿಯ ಉಳಿದ ಸಮಯಗಳಲ್ಲಿ 12 ನಿಮಿಷಕ್ಕೆ ಒಂದರಂತೆ ರೈಲು ಓಡಾಡಲಿದೆ. ಹಾಗೆಯೇ 2 ಮತ್ತು 4ನೇ ಶನಿವಾರ ದಟ್ಟಣೆ ಅವಧಿಯಲ್ಲಿ 8 ನಿಮಿಷಕ್ಕೆ, ಉಳಿದ ಸಮಯಗಳಲ್ಲಿ 12 ನಿಮಿಷಕ್ಕೆ ಒಂದರಂತೆ ರೈಲುಗಳು ಓಡಾಡಲಿವೆ.

ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 9-10 ಮತ್ತು ಸಂಜೆ 5.30-6.30ರ ಅವಧಿಯಲ್ಲಿ ಐದು ನಿಮಿಷದ ಅಂತರದಲ್ಲಿ ರೈಲು ಸಂಚರಿಸಲಿದೆ. ಬೆಳಿಗ್ಗೆ 8-9 ಗಂಟೆ ಹಾಗೂ ಸಂಜೆ 6.30-8 ಗಂಟೆಯವರೆಗೆ ಆರು ನಿಮಿಷದ ಅಂತರದಲ್ಲಿ ಸಂಚಾರ ನಡೆಸಲಿದೆ. ಉಳಿದ ಸಮಯಗಳಲ್ಲಿ 12 ನಿಮಿಷಕ್ಕೆ ಒಂದರಂತೆ ರೈಲು ಓಡಾಟ ಇರಲಿದೆ.

ನಮ್ಮ ಮೆಟ್ರೋ; ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ ಇನ್ನು ಸರಳ, ಸುಲಭ

2 ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾಮಾನ್ಯ ರಜಾ ದಿನಗಳಂದು ಬೆಳಿಗ್ಗೆ 10-12 ಮತ್ತು ಸಂಜೆ 5-8ರವರೆಗೆ ಎಂಟು ನಿಮಿಷದ ಅಂತರದಲ್ಲಿ ರೈಲು ಓಡಾಡಲಿದೆ. ಉಳಿದ ಸಮಯಗಳಲ್ಲಿ 12 ನಿಮಿಷದ ಅಂತರದಲ್ಲಿ ರೈಲು ಸಂಚರಿಸಲಿವೆ.

   ಮೋದಿ ಕೊಟ್ರು ವಿಶೇಷ ಸಲಹೆ | Oneindia Kannada

   ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಪ್ರತಿನಿತ್ಯ ಮೆಟ್ರೋ ರೈಲು ಸೇವೆ ಇದೆ. ದಿನಕ್ಕೆ ಸರಾಸರಿ 55 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ನಿಗಮ ತಿಳಿಸಿದೆ.

   English summary
   BMRCL has revised the Namma Metro train time table due to low passengers during coronavirus pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X