ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲ್ಕ್‌ ಬೋರ್ಡ್‌ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣಕ್ಕೆ ಮತ್ತೊಂದು ಟೆಂಡರ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 1: ಬೆಂಗಳೂರಿನಲ್ಲಿ ವಾಹನ ದಟ್ಟಣೆ ವಿಪರೀತವಾಗಿದೆ. ಸಿಲ್ಕ್‌ ಬೋರ್ಡ್‌ ವೃತ್ತದಲ್ಲಿ ಮೆಟ್ರೋ ಮಾರ್ಗದ ಒಂದು ಭಾಗವಾದ ನಾಲ್ಕು ಪಥಗಳ ಮೇಲುರಸ್ತೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮತ್ತೊಮ್ಮೆ ಟೆಂಡರ್‌ ಕರೆದಿದೆ.

ಮೆಟ್ರೋ ಎರಡನೇ ಹಂತದಲ್ಲಿ ಸಿಲ್ಕ್ ಬೋರ್ಡ್‌-ಕೆ.ಆರ್.ಪುರ 19 ಕಿ.ಮೀ ಉದ್ದದ ಮೆಟ್ರೋ ಮಾರ್ಗಕ್ಕೆ ಈ ಹಿಂದೆಯೇ ಟೆಂಡರ್‌ ಕರೆಯಲಾಗಿತ್ತು, ಅದರ ಕಾಮಗಾರಿಗಳು ಪ್ರಗತಿಯಲ್ಲಿದೆ ಇದೀಗ ಇದರ ಜತೆಗೆ ಸಿಲ್ಕ್‌ ಬೋರ್ಡ್‌ ವೃತ್ತದ ಟ್ರಾಫಿಕ್‌ ಜಾಮ್‌ ಕಡಿಮೆ ಮಾಡಲು 2.84 ಕಿ.ಮೀ ಉದ್ದದ ನಾಲ್ಕು ಪಥಗಳ ಮೇಲುರಸ್ತೆ ನಿರ್ಮಿಸಲಾಗುತ್ತಿದೆ. ಒಟ್ಟು 133.54 ಕೋಟಿ ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಉಚಿತ ಪಾರ್ಕಿಂಗ್‌ ವ್ಯವಸ್ಥೆ!ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಉಚಿತ ಪಾರ್ಕಿಂಗ್‌ ವ್ಯವಸ್ಥೆ!

ಒಂದೇ ಕಂಬಗಳನ್ನು ಬಳಸಿಕೊಂಡು ಮೆಟ್ರೋ ಮಾರ್ಗ ಮತ್ತು ಮೇಲುರಸ್ತೆಯನ್ನು ನಿರ್ಮಿಸುವುದು ಈ ಯೋಜನೆಯ ವಿಶೇಷವಾಗಿದೆ. ಎರಡನೇ ಹಂತದಲ್ಲಿ ಆರ್‌.ವಿ. ರಸ್ತೆ ನಿಲ್ದಾಣದಿಂದ ನಿರ್ಮಾಣವಾಗುತ್ತಿರುವ ಮೆಟ್ರೋ ಮಾರ್ಗವು ರಾಗಿಗುಡ್ಡದ ಮೂಲಕ ಬಿಟಿಎಂ ಲೇಔಟ್‌ ಕಡೆಗೆ ಹೋಗುತ್ತದೆ.

BMRCL invites bids for proposed Silk Board Junction signal free corridor

ಇದೇ ಭಾಗದಲ್ಲಿ ಕೆಆರ್ಪುರ-ಸಿಲ್ಕ್‌ ಬೋರ್ಡ್‌ ಮೆಟ್ರೋ ಯೋಜನೆ ಹಾಗೂ ಆರ್‌.ವಿರಸ್ತೆ- ಬೊಮ್ಮಸಂದ್ರ ಮೆಟ್ರೋ ಮಾರ್ಗದ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ. ಮೇಲುರಸ್ತೆಯು ಸಿಲ್ಕ್‌ ಬೋರ್ಡ್‌ ಬಳಿ ಎರಡು ಪಥವಾಗಿ ಮುಂದುವರೆಯಲಿದೆ.

English summary
BMRCL calls second tender for signal free corridor near silkborad junction, According to the tender, the cost of the contract is estimated at 133.54 crore. t has called for putting in place loops, ramps for the road flyover at Central Silk Board junction for a length of 2.84 Km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X