ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸುರಂಗ ಮಾರ್ಗ ಕಾಮಗಾರಿಯಿಂದ ಬರುವ ತ್ಯಾಜ್ಯ ಎಲ್ಲಿ ಹಾಕ್ತಾರೆ?

|
Google Oneindia Kannada News

ಬೆಂಗಳೂರು, ಜೂನ್ 13: ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸುರಂಗ ಮೆಟ್ರೋ ನಿರ್ಮಾಣ ಕಾರ್ಯ ಇನ್ನೇನು ಆರಂಭವಾಗಲಿದೆ. ಆದರೆ ಸುರಂಗ ಕೊರೆದ ಬಳಿಕ ಮಣ್ಣನ್ನು ಎಲ್ಲಿ ಹಾಕುವುದು ಎನ್ನುವ ಸಮಸ್ಯೆಗೆ ಪರಿಹಾರವೂ ದೊರೆತಿದೆ.

25 ಲಕ್ಷ ಕ್ಯೂಬಿಕ್ ಮೀಟರ್ ತ್ಯಾಜ್ಯವನ್ನು ಎಲ್ಲಿ ಹಾಕುವುದು ಎನ್ನುವುದೇ ಬಿಎಂಆರ್‌ಸಿಎಲ್‌ಗೆ ದೊಡ್ಡ ತಲೆನೋವಾಗಿತ್ತು. ಬೆಂಗಲೂರಿನ ಹೊರವಲಯದಲ್ಲಿ ಒಟ್ಟು 6 ಸ್ಥಳಗಳನ್ನು ಗುರುತಿಸಲಾಗಿದೆ. ಒಟ್ಟು 14 ಕಿ.ಮೀ ಸುರಂಗ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳು ಬರಲಿವೆ. ಒಟ್ಟು ಎರಡು ಪ್ಯಾಕೇಜುಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

ಸಿನಿಮಾ ಶೂಟಿಂಗ್‌ ಇಂದ ನಮ್ಮ ಮೆಟ್ರೋಗೆ ಬಂದ ಆದಾಯವೆಷ್ಟು? ಸಿನಿಮಾ ಶೂಟಿಂಗ್‌ ಇಂದ ನಮ್ಮ ಮೆಟ್ರೋಗೆ ಬಂದ ಆದಾಯವೆಷ್ಟು?

ಅಲ್ಲಿಂದ ಬರುವ 25 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಪರಿಸರಕ್ಕೆ ಹಾನಿಯಾಗದಂತೆ ಹೇಗೆ ಹಾಕುವುದು ಎನ್ನುವುದೂ ಸವಾಲಾಗಿದೆ.ಈ ತ್ಯಾಜ್ಯವನ್ನು ಹಾಕಲು 21 ಎಕರೆ ಜಾಗ ಬೇಕಾಗುತ್ತದೆ. ಬೆಂಗಳೂರು ನಗರ ಡಿಸಿಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ.

BMRCL identify 6 places to dump tonnel waste

ಕಂದಾಯ ಇಲಾಖೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆಯಲಾಗಿದೆ. ಮೆಟ್ರೋ ಎರಡನೇ ಹಂತ ನಿರ್ಮಾಣಕ್ಕೆ 2014ರಲ್ಲೇ ಅನುಮತಿ ಸಿಕ್ಕಿದೆ. ಈ ಮೊದಲೇ ತಿಳಿಸಿದ ಹಾಗೆ ಈ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಬೇಕಿತ್ತು.

English summary
BMRCL identify 6 places in the Bengaluru Outskirts to dump underground metro station work.The quantity of excavated material is estimated to be 25 lakh cubic metres and BMRCL is responsible for its safe and environment-friendly disposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X