ಮೆಟ್ರೋ ಸೇವೆ 12ರ ತನಕ ವಿಸ್ತರಣೆ; ಅಧಿಕೃತ ಆದೇಶದಲ್ಲೇನಿದೆ?
ಬೆಂಗಳೂರು, ಡಿಸೆಂಬರ್ 10 : ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಜನವರಿ 1ರಿಂದ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12ಗಂಟೆ ತನಕ ವಿಸ್ತರಣೆ ಮಾಡಲಾಗಿದೆ. ಬಹುದಿನದಿಂದ ಮೆಟ್ರೋ ಸೇವೆ ವಿಸ್ತರಣೆಗೆ ಬೇಡಿಕೆ ಇತ್ತು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಈ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲು ಸೇವಾ ಅವಧಿಯನ್ನು ವಾರದ ಎಲ್ಲಾ ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಆದೇಶ ಹೇಳಿದೆ.
ನಾಡಪ್ರಭು ಕೆಂಪೇಗೌಡ-ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು ಉಳಿದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ರೈಲು ನಾಲ್ಕು ದಿಕ್ಕುಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಹೊರಡಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಹೊರಡುವ ಪರಿಷ್ಕೃತ ವೇಳಾಪಟ್ಟಿ ಹೀಗಿದೆ.
* ಮೈಸೂರು ರಸ್ತೆ : ಪ್ರಸ್ತುತ ವೇಳೆ 11.05, ಪರಿಷ್ಕೃತ ವೇಳೆ 11.40
* ಬೈಯಪ್ಪನಹಳ್ಳಿ : ಪ್ರಸ್ತುತ ವೇಳೆ 11 ಗಂಟೆ. ಪರಿಷ್ಕೃತ ವೇಳೆ 11.35
* ನಾಗಸಂದ್ರ : ಪ್ರಸ್ತುತ ವೇಳೆ 10.50, ಪರಿಷ್ಕೃತ ವೇಳೆ 11.25
* ಯಲಚೇನಹಳ್ಳಿ : ಪ್ರಸ್ತುತ ವೇಳೆ 11 ಗಂಟೆ, ಪರಿಷ್ಕೃತ ವೇಳೆ 11.35
ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಿದರೂ ದಿನದ ಮೊದಲ ರೈಲು ಸೇವಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.












Click it and Unblock the Notifications