ಮೆಟ್ರೋ ಸ್ಮಾರ್ಟ್‌ಕಾರ್ಡ್ ರೀಚಾರ್ಜ್‌ಗೆ ಗಂಟೆಗಟ್ಟಲೆ ನಿಲ್ಬೇಕು, ಬಿಎಂಟಿಸಿ ಬೆಟರ್
ಬೆಂಗಳೂರು, ಮಾರ್ಚ್ 29: ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ 50ರೂ ಇರಲೇಬೇಕು ಎಂದು ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ.
ಇದರ ಪರಿಣಾಮ ಪ್ರಯಾಣಿಕರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಿಎಂಟಿಸಿ ಬಸ್ ಸೇವೆಯೇ ಬೆಟರ್ ಎನ್ನುವ ಭಾವನೆ ಎಲ್ಲರಲ್ಲೂ ಬಂದಿದೆ.
ನಿತ್ಯ ಟೋಕನ್ ಪಡೆದುಕೊಳ್ಳುತ್ತಾ ನಿಂತರೆ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ ಎನ್ನುವ ಕಾರಣದಿಂದಾಗಿ ಸ್ಮಾರ್ಟ್‌ಕಾರ್ಡ್ ಜಾರಿಗೆ ತಂದಿದ್ದರು. ಇದೀಗ ಸ್ಮಾರ್ಟ್ ಕಾರ್ಡ್ ಪದೇ ಪದೇ ರೀಚಾರ್ಜ್ ಮಾಡಿಸುವ ಕಾರಣ ನಿತ್ಯ ನೂರಾರು ಮಂದಿ ಸರತಿಯಲ್ಲಿ ನಿಲ್ಲುವಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆಲವು ಮಂದಿ ಮುಂದಿನ ಸ್ಟಾಪ್‌ನಲ್ಲಿಯೇ ಇಳಿದುಕೊಳ್ಳುತ್ತಾರೆ ಅಂಥವರಿಗೆ ನಿತ್ಯ 10ರೂ ಇದ್ದರೆ ಸಾಕು ಆದರೆ ಅವರು ಕೂಡ ಐದು ದಿನದ ಬಳಿಕ ಮಾಡಿಸುವ ರೀಚಾರ್ಜ್‌ನ್ನು ಐದು ದಿನ ಮೊದಲೇ ಮಾಡಿಸಬೇಕಾಗಿದೆ.

ನಗದು ನೀಡಿಯೇ ರೀಚಾರ್ಜ್ ಮಾಡಿಸಬೇಕು ಕಾರ್ಡ್ ನಡಿಯಲ್ಲ
ಈ ಮೊದಲು ಎಲ್ಲಾ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಡಿಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನೀಡಿ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಬಹುದಿತ್ತು. ಆದರೆ ಈಗ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆ ವ್ಯವಸ್ಥೆಯನ್ನೇ ತೆಗೆದು ಹಾಕಿದ್ದಾರೆ. ನಗದು ನೀಡಿದರೆ ಮಾತ್ರ ರೀಚಾರ್ಜ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

50ರೂಗಿಂತ ಕಡಿಮೆ ರೀಚಾರ್ಜ್ ಸೌಲಭ್ಯಕ್ಕೆ ಆಗ್ರಹ
ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50ರೂ ಠೇವಣಿ ಇರಲೇಬೇಕೆಂಬ ನಿಯಮ ದಿಢೀರ್ ಜಾರಿಗೆ ತಂದಿರುವುದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದರು. ಬಹುತೇಕ ಪ್ರಯಾಣಿಕರಿಗೆ ಹೊಸ ನಿಯಮದ ಕುರಿತು ಮಾಹಿತಿ ಇಲ್ಲದ ಕಾರಣ ಬೈಯ್ಯಪ್ಪನಹಳ್ಳಿ, ಮೆಜೆಸ್ಟಿಕ್ ಮೊದಲಾದ ನಿಲ್ದಾಣಗಳಲ್ಲಿ ಪ್ರಯಾಣಿಕರು ಉದ್ದದ ಸಾಲಿನಲ್ಲಿ ನಿಂತು ತಮ್ಮ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಂಡರು. ಕನಿಷ್ಠ ರೀಚಾರ್ಜ್ ಮೊತ್ತವನ್ನು 10,20,30ಕ್ಕೆ ಸರಳೀಕರಣಗೊಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪೇಟಿಎಂ ಇನ್ನೂ ಅಳವಡಿಸಿಲ್ಲ
ಪೇಟಿಎಂ ಮೊದಲಾದ ಅಪ್ಲಿಕೇಷನ್ ಸೇವೆಗಳನ್ನು ಜಾರಿಗೆ ತರಲಾಗುವುದು ಎಂದು ಬಿಎಂಆರ್‌ಸಿಎಲ್ ಹೇಳಿ ವರ್ಷವೇ ಕಳೆಯಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

14 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ
ಮೆಟ್ರೋ ಆರಂಭವಾದಾಗಿನಿಂದ ಇಲ್ಲಿಯವರೆಗೆ 14 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟವಾಗಿವೆ. ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿದ್ದರಿಂದ 183 ಕೋಟಿ ರೂಗೂ ಅಧಿಕ ಆದಾಯ ಬಂದಿದೆ. ನೇರಳೆ ಮಾರ್ಗದಲ್ಲಿ ಶೇ.65.86 ಹಾಗೂ ಹಸಿರು ಮಾರ್ಗದಲ್ಲಿ ಶೇ.59.84 ರಷ್ಟು ಮಂದಿ ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಾರೆ.












Click it and Unblock the Notifications