ಅಜ್ಜಿಗೆ ಮೊಮ್ಮಗಳ ಬ್ಲಿಂಕಿಟ್ ಟ್ಯೂಷನ್: ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್ ಮಾಡಲು ಕಲಿಯುತ್ತಿರುವ ಅಜ್ಜಿ ವಿಡಿಯೋ ವೈರಲ್

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಆನ್‌ಲೈನ್ ಮೂಲಕ ದಿನಸಿ ಅಥವಾ ಊಟ ಆರ್ಡರ್ ಮಾಡುವುದು ಯುವಜನತೆಗೆ ಅತ್ಯಂತ ಸುಲಭದ ಕೆಲಸ. ಏನೇ ಆರ್ಡರ್‌ ಮಾಡಿದ್ರೂ ಮನೆ ಬಾಗಿಲಿಗೆ ಬರುತ್ತದೆ. ಇದು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಆದ್ರೆ ಇದೆಲ್ಲ ನಮ್ಮ ಹಿರಿಯ ಜೀವಗಳಿಗೆ, ವಿಶೇಷವಾಗಿ ಅಜ್ಜ-ಅಜ್ಜಿಯಂದಿರಿಗೆ ಆ್ಯಪ್‌ಗಳ ಮೂಲಕ ವಸ್ತುಗಳನ್ನ ತರಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.

ಆದರೆ ಇಲ್ಲೊಬ್ಬರು ಅಜ್ಜಿ ಹೊಸ ತಂತ್ರಜ್ಞಾನವನ್ನ ಕಲಿಯಲೇಬೇಕು ಎಂಬ ಉತ್ಸಾಹದಿಂದ ತಮ್ಮ ಮೊಮ್ಮಗಳ ಬಳಿ ಬ್ಲಿಂಕಿಟ್ ಆ್ಯಪ್ ಬಳಸಲು ಕಲಿಯುತ್ತಿದ್ದಾರೆ. ಈ ಮುದ್ದಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

Blinkit Tuition For Nani Grandma Learning To Order Groceries Online Wins Hearts on Internet

'ಅಜ್ಜಿಗೆ ಬ್ಲಿಂಕಿಟ್ ಟ್ಯೂಷನ್': ಆನ್‌ಲೈನ್ ಶಾಪಿಂಗ್ ಪಾಠ ಶುರುವಾಗಿದ್ದು ಹೀಗೆ!

ಡಿಜಿಟಲ್ ಕ್ರಿಯೇಟರ್ ಆಗಿರುವ ಸಾನಿಯಾ ಹುಸೇನ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ತಮ್ಮ ಅಜ್ಜಿಗೆ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್ ಮಾಡುವುದನ್ನು ಅವರು ಹಂತ ಹಂತವಾಗಿ ಹೇಳಿಕೊಡುತ್ತಿರುವುದನ್ನ ಈ ವಿಡಿಯೋದಲ್ಲಿ ನೋಡಬಹುದು.

ಸಾನಿಯಾ ಅವರು, "ಮೊದಲು ಬ್ಲಿಂಕಿಟ್ ಆ್ಯಪ್ ಓಪನ್ ಮಾಡಿ, ಈಗ ನಿಮಗೆ ಏನೇನು ಬೇಕು ಹೇಳಿ" ಎಂದು ಕೇಳುತ್ತಾರೆ. ಆಗ ಅಜ್ಜಿ ತನಗೆ ಶಾಂಪೂ ಬೇಕು ಎನ್ನುತ್ತಾರೆ. ಸರ್ಚ್ ಬಾರ್‌ನಲ್ಲಿ ಟೈಪ್ ಮಾಡುವ ಮೂಲಕ ಅಥವಾ ಮೈಕ್ ಬಳಸಿ ವಾಯ್ಸ್ ಮೂಲಕ ವಸ್ತುಗಳನ್ನ ಹೇಗೆ ಹುಡುಕಬಹುದು ಎಂಬುದನ್ನ ಮೊಮ್ಮಗಳು ಅತ್ಯಂತ ತಾಳ್ಮೆಯಿಂದ ಹೇಳಿಕೊಡುತ್ತಾಳೆ.

ನೋಟ್ಸ್ ಮಾಡಿಕೊಂಡ ಅಜ್ಜಿ: ಆ್ಯಪ್‌ನಲ್ಲಿ ಏನೇನು ದಿನಸಿ ಆರ್ಡರ್ ಮಾಡಿದ್ರು?

ವಿಡಿಯೋ ಮುಂದುವರಿದಂತೆ ಅಜ್ಜಿಯ ಶಾಪಿಂಗ್ ಲಿಸ್ಟ್ ಕೂಡ ದೊಡ್ಡದಾಗುತ್ತದೆ. ನೆಸ್ಕೆಫೆ ಕಾಫಿ ಪುಡಿ, ಹರ್ಷೆಸ್ ಚಾಕೊಲೇಟ್ ಸಿರಪ್, ಅರ್ಧ ಕೆಜಿ ಅಮುಲ್ ಬೆಣ್ಣೆ ಹಾಗೂ ಒಂದು ಏರ್ ಫ್ರೈಯರ್ ಅನ್ನು ಕಾರ್ಟ್‌ಗೆ ಸೇರಿಸುತ್ತಾರೆ. ಆಸಕ್ತಿದಾಯಕ ವಿಷಯವೆಂದರೆ, ಅಜ್ಜಿ ಕೇವಲ ಮೊಬೈಲ್ ನೋಡುತ್ತಾ ಕಲಿಯುವುದಲ್ಲದೆ, ಓರ್ವ ಶಿಸ್ತಿನ ವಿದ್ಯಾರ್ಥಿಯಂತೆ ಪ್ರತಿಯೊಂದು ಹಂತವನ್ನ ಒಂದು ನೋಟ್ ಬುಕ್‌ನಲ್ಲಿ ಬರೆದುಕೊಳ್ಳುತ್ತಾರೆ.

ಆ್ಯಪ್‌ನಲ್ಲಿ 'Arriving in 15 minutes' (15 ನಿಮಿಷಗಳಲ್ಲಿ ಬರಲಿದೆ) ಎಂದು ತೋರಿಸಿದ್ದನ್ನ ಸಹ ಅಜ್ಜಿ ತಮ್ಮ ಪುಸ್ತಕದಲ್ಲಿ ನೋಟ್ ಮಾಡಿಕೊಳ್ಳುವುದು ನೋಡುಗರಿಗೆ ಅಚ್ಚರಿ ಹಾಗೂ ನಗು ತರಿಸುತ್ತದೆ. ಆ ಬಳಿಕ ಪೇಮೆಂಟ್ ಮಾಡುವುದು ಹಾಗೂ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವ ಆಯ್ಕೆಯ ಬಗ್ಗೆಯೂ ಸಾನಿಯಾ ವಿವರಿಸುತ್ತಾರೆ.

15 ನಿಮಿಷದಲ್ಲಿ ಬಂತು ಏರ್ ಫ್ರೈಯರ್: ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ಆರ್ಡರ್ ಯಶಸ್ವಿಯಾದ ಬಳಿಕ ಸಾನಿಯಾ "ಇದು ತುಂಬಾ ಸುಲಭ ಅಲ್ವಾ?" ಎಂದು ಕೇಳಿದಾಗ ಅಜ್ಜಿ "ಹೌದು, ನನಗೆ ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ, ಐ ಲವ್ ಯು" ಎಂದು ಪ್ರೀತಿಯಿಂದ ಹೇಳುತ್ತಾರೆ. ಪಾಠ ಮುಗಿಯುವಷ್ಟರಲ್ಲಿ ಅವರು ಆರ್ಡರ್ ಮಾಡಿದ್ದ ಏರ್ ಫ್ರೈಯರ್ ಮನೆ ಬಾಗಿಲಿಗೆ ಬರುತ್ತದೆ. ಇದನ್ನು ನೋಡಿ ಅಚ್ಚರಿಗೊಂಡ ಅಜ್ಜಿ "ಆ ಗಯಾ! ಏರ್ ಫ್ರೈಯರ್ ಆ ಗಯಾ.. ಟೆಕ್ನಾಲಜಿ!" ಎಂದು ಸಂಭ್ರಮಿಸುತ್ತಾರೆ.

ಈ ವಿಡಿಯೋಗೆ ಇಂಟರ್‌ನೆಟ್‌ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ 'ಬ್ಲಿಂಕಿಟ್' ಸಂಸ್ಥೆಯ ಅಧಿಕೃತ ಖಾತೆಯಿಂದಲೂ ಕಮೆಂಟ್ ಮಾಡಲಾಗಿದ್ದು, "10ಕ್ಕೆ 11 ಅಂಕ ಪಡೆಯುವಂತಹ ವಿದ್ಯಾರ್ಥಿ. ನಾನಿ ಜಿ ಅವರ ಬಗ್ಗೆ ಹೆಮ್ಮೆಯಿದೆ, ಇದು ನಮ್ಮ ಫೇವರಿಟ್ ಟ್ಯುಟೋರಿಯಲ್" ಎಂದು ಬರೆಯಲಾಗಿದೆ.

ಇನ್ನುಳಿದಂತೆ ನೆಟ್ಟಿಗರು ಕಮೆಂಟ್ ಮಾಡಿದ್ದು, "ಟೆಕ್ ಕಂಪನಿಗಳೇ ಈ ಅಜ್ಜಿಯ ಮುಂದೆ ಸೋಲೊಪ್ಪಿಕೊಳ್ಳಬೇಕು", "ಅಜ್ಜಿ ಪ್ರತಿಯೊಂದನ್ನೂ ನೋಟ್ಸ್ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ, ಅವರು ತಮ್ಮ ಕಾಲದ ಟಾಪರ್ ವಿದ್ಯಾರ್ಥಿ ಆಗಿರಬೇಕು" ಎಂದು ತಮಾಷೆಯಾಗಿ ಹಾಗೂ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+