ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಮೀಸಲು ಬೋಗಿ ಗುರುತಿಗೆ ಬ್ಲ್ಯಾಕ್‌ಬೆಲ್ಟ್‌: ಮಹಿಳೆಯರು ಫುಲ್‌ ಖುಷ್‌

By Nayana
|
Google Oneindia Kannada News

Recommended Video

ಮೆಟ್ರೋನಲ್ಲಿ ಮಹಿಳಾ ಮೀಸಲು ಬೋಗಿ ಗುರುತಿಗೆ ಬ್ಲ್ಯಾಕ್‌ಬೆಲ್ಟ್‌ | Oneindia Kannada

ಬೆಂಗಳೂರು, ಜೂನ್‌ 27: ನಮ್ಮ ಮೆಟ್ರೋ ಆರು ಬೋಗಿಯಲ್ಲಿ ಮೊದಲ ಬೋಗಿ ಮಹಿಳೆಯರಿಗೆ ಮೀಸಲು, ಆದರೆ ಅಲ್ಲಿ ಸೂಚನಾ ಫಲಕವಿಲ್ಲದೆ ಮಹಿಳಾ ಪರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮೆಟ್ರೋ ಮೊದಲ ಬೋಗಿಯಲ್ಲಿ ಪುರುಷರು ಹಾಗೂ ಮಹಿಳೆಯ ಮಧ್ಯೆ ಬ್ಲ್ಯಾಕ್‌ ಬೆಲ್ಟ್‌ ಇರಿಸಿ ಪ್ರತ್ಯೇಕಿಸಲಾಗಿದೆ.

ನಮ್ಮ ಮೆಟ್ರೋ ಆರು ಬೋಗಿ ಬಂದಿದೆ ಆದರೂ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಎನ್ನುವ ನಾಮಫಲಕವಿಲ್ಲ ಎಂದು ಪ್ರಯಾಣಿಕರು ದೂರಿದ್ದರು, ಆದರೆ ನಮ್ಮ ಮೆಟ್ರೋ ಯೂ ಟರ್ನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎರಡೂ ಮುಖಗಳತ್ತ ಮೆಟ್ರೋ ಚಲಿಸುವ ಕಾರಣ ಯಾವ ದಿಕ್ಕಿನಲ್ಲಿ ಚಲಿಸುತ್ತದೆಯೋ ಆ ದಿಕ್ಕಿನ ಮೊದಲ ಬೋಗಿ ಮಹಿಳೆಯರಿಗೆ ಮೀಸಲಾಗಿರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದರು.

ಸ್ತ್ರೀಯರಿಗೆ ಪ್ರತ್ಯೇಕ ಬೋಗಿ ಫಲಕ ಹಾಕಲ್ಲ: ಮೆಟ್ರೋ ನಿಗಮಸ್ತ್ರೀಯರಿಗೆ ಪ್ರತ್ಯೇಕ ಬೋಗಿ ಫಲಕ ಹಾಕಲ್ಲ: ಮೆಟ್ರೋ ನಿಗಮ

ಕೊನೆಗೂ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಒಂದು ಮತ್ತು ಎರಡನೇ ಬೋಗಿ ನಡುವೆ ಬ್ಲ್ಯಾಕ್‌ ಬೆಲ್ಟ್‌ ಇರಿಸಲಾಗಿದೆ.

Black belt between general and female coach in metro

ಆರು ಬೋಗಿ ಮೆಟ್ರೋ ಪೀಕ್‌ ಅವಧಿಯಲ್ಲಿ ಮಾತ್ರ ಸಂಚರಿಸುತ್ತದೆ. ಈ ಅವಧಿ ಸಣ್ಣದಾದರೂ ರೈಲು ಸಂಚಾರದ ನಿರ್ವಹಣೆ ಕಷ್ಟಕರವಾಗಿದೆ. ಈಗ ಮಹಿಳಾ ಮೀಸಲು ಸಮಸ್ಯೆ ಒಂದು ಮೀಟರ್‌ ಬೆಲ್ಟ್‌ನಿಂದ ಪರಿಹಾರವಾಗಿದೆ. ಮಹಿಳಾ ಮೀಸಲಿನ ಬೋಗಿಯ ನಡುವಿನ ಎರಡೂ ಬದಿಗಳ ಕಂಬಿಯ ನಡುವೆ ಬೆಲ್ಟ್‌ ಸಿಕ್ಕಿಸಲಾಗುತ್ತದೆ.

ಈ ಬೆಲ್ಟ್‌ ನಡುವೆ ಮಹಿಳೆಯರಿಗೆ ಮಾತ್ರ ಎಂಬ ಫಲಕ ತೂಗುಹಾಕಲಾಗಿದೆ. 2 ನೇ ಬೋಗಿಯಲ್ಲಿ ನಿಂತ ಪುರುಷರು ಈಗ ಮೊದಲ ಬೋಗಿಗೆ ಬರುವುದು ತಪ್ಪಿದೆ. ಹಿಂದಿನ ಎರಡು ದಿನ ನಡೆದ ಮೆಟ್ರೋ ಕಾರ್ಯಾಚರಣೆಯಲ್ಲಿ ಈ ವ್ಯವಸ್ಥೆ ಇರಲಿಲ್ಲ.

ಎರಡನೇ ಬೋಗಿಯಲ್ಲಿ ದಟ್ಟಣೆ ಹೆಚ್ಚಾದಾಗ ಪುರುಷರುಅನಿವಾರ್ಯವಾಗಿ ಮೊದಲ ಬೋಗಿಗೆ ಬರುತ್ತಿದ್ದರು. ಆದರೆ ಈಗ ಬೆಲ್ಟ್ ಇರುವುದರಿಂದ ಪುರುಷರು ತಾವಾಗಿಯೇ ಎಚ್ಚರವಹಿಸಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

English summary
BMRCL had come to a solution over confusion in six coaches of Namma Metro to separate the general and female coach with installing the black belt finally. It is believed that male commuters would not board in the female coach as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X