Jagadish Shettar: ‘ಈಶ್ವರಪ್ಪ, ಬಿಎಸ್‌ವೈ ಬಿಜೆಪಿಯಲ್ಲೇ ಉಳಿದಿದ್ದೇಕೆ...’
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ 'ಕೈ' ಹಿಡಿದಿದ್ದಾರೆ. ಕಾಂಗ್ರೆಸ್ ನಾಯಕರು ಈ ಸಮಯವನ್ನ ಬಿಜೆಪಿ ವಿರುದ್ಧ ವಾಗ್ದಾಳಿಗೆ ಬಳಸಿಕೊಳ್ಳುತ್ತಿದ್ದು, ಲಿಂಗಾಯತ ಅಸ್ತ್ರ ಪ್ರಯೋಗ ಮುಂದುವರಿದಿದೆ. ಜೊತೆಗೆ ಬಿಜೆಪಿ ಹಿರಿಯ ನಾಯಕರ ಕಡೆಗಣನೆ ವಿಚಾರ ಮುಂದಿಟ್ಟುಕೊಂಡು ಟ್ವೀಟ್ ವಾರ್ ಮುಂದುವರಿಸಿದೆ ಕಾಂಗ್ರೆಸ್. ಈಶ್ವರಪ್ಪ, ಬಿಎಸ್‌ವೈ ವಿಚಾರ ಪ್ರಸ್ತಾಪಿಸಿ ಬಿಜೆಪಿ ನಾಯಕರನ್ನ ಕೆಣಕಿದೆ ಕರ್ನಾಟಕ ಕಾಂಗ್ರೆಸ್.
ಈಶ್ವರಪ್ಪ, BSY ಬಿಜೆಪಿಯಲ್ಲೇ ಉಳಿದಿದ್ದೇಕೆ, ಒತ್ತಾಯದಿಂದ ಬಿಜೆಪಿ ತಾಳಕ್ಕೆ ಕುಣಿಯಲು ಪ್ರಯತ್ನಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಒಂದೇ..
— Karnataka Congress (@INCKarnataka) April 17, 2023
ತಮ್ಮ ಮಕ್ಕಳಿಗೆ ಭವಿಷ್ಯ ರೂಪಿಸುವ ಪ್ರಯತ್ನಕ್ಕಾಗಿ ಮಾತ್ರ!
ಆ ಅನಿವಾರ್ಯತೆ ಇಲ್ಲದೆ ಹೋಗಿದ್ದರೆ ಅವರೂ ಬಿಜೆಪಿ ತೊರೆದು ಬಂಡಾಯದ ಬಾವುಟ ಹಾರಿಸುತ್ತಿದ್ದರು.
ನಿನ್ನೆ 'BSYರನ್ನು ಮೊನ್ನೆ ಟಿಕೆಟ್ ಹಂಚಿಕೆಯ ಸಭೆಯಿಂದ ಹೊರಗಿಟ್ಟಿದ್ದ ಬಿಜೆಪಿ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಾತನಾಡಿಸಲು ತಂದು ಕೂರಿಸಿದೆ. ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ. ಶೆಟ್ಟರ್ ವಿರುದ್ಧ BSY, BSY ವಿರುದ್ಧ ಯತ್ನಾಳ್, ಸೋಮಣ್ಣ.. ಜೋ-ಸಂ ಆಟ ಬಲು ಚೆನ್ನಾಗಿದೆ!' ಎಂದು ಟ್ವೀಟ್ ಮಾಡಿತ್ತು ಕಾಂಗ್ರೆಸ್. ಇಂದು ಟ್ವೀಟ್ ವಾರ್ ಇದೇ ಹಾದಿಯಲ್ಲಿ ಮುಂದುವರಿದು, ಈಶ್ವರಪ್ಪ ಹಾಗೂ ಬಿಎಸ್‌ವೈ ವಿಚಾರವನ್ನೂ ಎಳೆದು ತರಲಾಗಿದೆ.

'ಈಶ್ವರಪ್ಪ, BSY ಬಿಜೆಪಿಯಲ್ಲೇ ಉಳಿದಿದ್ದೇಕೆ, ಒತ್ತಾಯದಿಂದ ಬಿಜೆಪಿ ತಾಳಕ್ಕೆ ಕುಣಿಯಲು ಪ್ರಯತ್ನಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಒಂದೇ.. ತಮ್ಮ ಮಕ್ಕಳಿಗೆ ಭವಿಷ್ಯ ರೂಪಿಸುವ ಪ್ರಯತ್ನಕ್ಕಾಗಿ ಮಾತ್ರ! ಆ ಅನಿವಾರ್ಯತೆ ಇಲ್ಲದೆ ಹೋಗಿದ್ದರೆ ಅವರೂ ಬಿಜೆಪಿ ತೊರೆದು ಬಂಡಾಯದ ಬಾವುಟ ಹಾರಿಸುತ್ತಿದ್ದರು.' ಎಂದು ಟ್ವೀಟ್ ಮಾಡುವ ಮೂಲಕ ಜಗದೀಶ್ ಶೆಟ್ಟರ್ ಪರ ಬ್ಯಾಟ್ ಬೀಸಿದೆ ಕಾಂಗ್ರೆಸ್. ಮತ್ತೊಂದು ಕಡೆ ನಿನ್ನೆ ಮಾಜಿ ಸಿಎಂ ಶೆಟ್ಟರ್ ವಿರುದ್ಧ ಮಾಜಿ ಸಿಎಂ ಬಿಎಸ್‌ವೈ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿಯೂ ತಿರುಗೇಟು ನೀಡುವ ಪ್ರಯತ್ನ ಮಾಡಿದೆ ಕಾಂಗ್ರೆಸ್.
ಕಾಂಗ್ರೆಸ್ ಟ್ವೀಟ್‌ಗೆ ಬಿಜೆಪಿ ತಿರುಗೇಟು!
ಒಂದೆಡೆ ಕಾಂಗ್ರೆಸ್ ಲಿಂಗಾಯತ ಅಸ್ತ್ರ ಹಾಗೂ ಬಿಜೆಪಿ ಹಿರಿಯ ನಾಯಕರ ಕಡೆಗಣೆ ವಿಚಾರ ಮುಂದಿಟ್ಟುಕೊಂಡು ಟ್ವೀಟ್ ವಾರ್ ನಡೆಸಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಸಿಎಂ ಫೈಟ್ ವಿಚಾರವನ್ನ ಎಳೆದು ತಂದಿದೆ ಬಿಜೆಪಿ. 'ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುತ್ತಿರುವ @INCKarnatakaದ ಸಾಲು ಸಾಲು ಸಿಎಂ ಆಕಾಂಕ್ಷಿಗಳಿಗೆ ಎಐಸಿಸಿ ಅಧ್ಯಕ್ಷ @kharge ಅವರು ಸರಿಯಾಗಿಯೇ ವಾಸ್ತವ ನೆನಪಿಸಿದ್ದಾರೆ. ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುವವರು ಅವರ ಕ್ಷೇತ್ರ ಗೆದ್ದರೆ ಅದೇ ಹೆಚ್ಚು ಎಂಬ ಸನ್ನಿವೇಶ ಇದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.' ಎಂದು ಟ್ವೀಟ್ ಮಾಡಿ ಕಾಂಗ್ರೆಸ್‌ಗೆ ಪ್ರತ್ಯುತ್ತರ ನೀಡಿದೆ.
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುತ್ತಿರುವ @INCKarnatakaದ ಸಾಲು ಸಾಲು ಸಿಎಂ ಆಕಾಂಕ್ಷಿಗಳಿಗೆ ಎಐಸಿಸಿ ಅಧ್ಯಕ್ಷ @kharge ಅವರು ಸರಿಯಾಗಿಯೇ ವಾಸ್ತವ ನೆನಪಿಸಿದ್ದಾರೆ.
— BJP Karnataka (@BJP4Karnataka) April 17, 2023
ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುವವರು ಅವರ ಕ್ಷೇತ್ರ ಗೆದ್ದರೆ ಅದೇ ಹೆಚ್ಚು ಎಂಬ ಸನ್ನಿವೇಶ ಇದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.#CongVsSidduVsDKS pic.twitter.com/lKuoGJOoZy
'ಪೇಶ್ವೆ DNA...' ಅಸ್ತ್ರ ಬಳಸಿದ್ದ ಕಾಂಗ್ರೆಸ್
ನಿನ್ನೆಯಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್ ಬಲು ಜೋರಾಗಿದೆ. ನಿನ್ನೆ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುಕ್ಷಣದಿಂದಲೇ ಈ ಯುದ್ಧಕ್ಕೆ ಶರವೇಗ ಸಿಕ್ಕಿದೆ. ನಿನ್ನೆ ಬೆಳಗ್ಗೆ ಬಿಜೆಪಿ ಆಂತರಿಕ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, 'ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ. ಈ ಪೇಶ್ವೆ DNA ಹೊಂದಿದವರು ಬಸವಣ್ಣನ DNA ಹೊಂದಿದವರನ್ನು ಹೊರದಬ್ಬುತ್ತಿದ್ದಾರೆ. ಬಿಜೆಪಿ ಈಗ ತನ್ನ ಮನುವಾದದ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ.!' ಎಂದಿತ್ತು.

ಇದಿಷ್ಟೂ ಒಂದು ಕಡೆಯಾದರೆ ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದಲ್ಲೂ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಏರ್ಪಟ್ಟಿದೆ. ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಕೂಡ ಟ್ವೀಟ್ ವಾರ್ ಮುಂದುವರಿಸಬಹುದು. ಒಟ್ನಲ್ಲಿ ಇಬ್ಬರ ಈ ಟ್ವೀಟ್ ಫೈಟ್ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುವ ಜೊತೆಗೆ ಭಾರಿ ಚರ್ಚೆಯನ್ನೂ ಹುಟ್ಟುಹಾಕುತ್ತಿದೆ.












Click it and Unblock the Notifications