Tippu Sulthan: ಮತ್ತೆ ಟಿಪ್ಪು ಸುಲ್ತಾನ್ ಬೆಂಬಲಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್
"ನೀವು ಆಂಜನೆಯನ್ನು ಪೂಜೆ ಮಾಡುತ್ತೀರಾ ಇಲ್ಲ ಟಿಪ್ಪುವಿನ ಭಜನೆ ಮಾಡುತ್ತಿರಾ..? ಹಾಗಾದ್ರೆ ಟಿಪ್ಪು ಭಜನೆ ಮಾಡುವವರನ್ನು ಕಾಡಿಗೆ ಓಡಿಸುತತ್ತಿರೋ ಇಲ್ಲವೋ..?" ನಳಿನ್ ಪ್ರಶ್ನೆ.
ಬೆಂಗಳೂರು, ಫೆಬ್ರವರಿ. 15: ಟಿಪ್ಪು ಸುಲ್ತಾನ್ ಈ ರಾಜ್ಯದಲ್ಲಿ ಪದೇ ಪದೇ ಎಲ್ಲಾ ವಿಷಯಗಳಲ್ಲೂ ಕೇಳಿ ಬರುವ ಹೆಸರು. ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನುಲುಗಿ ಹೋದ ಹೆಸರುಗಳಲ್ಲಿ ಮೊದಲನೇಯದು ಟಿಪ್ಪು. ಪ್ರತಿ ಬಾರಿಯೂ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಲ್ಲಿ ಟಿಪ್ಪು ಹೆಸರು ಸೇರಿಸಲಾಗುತ್ತದೆ.
ಮಂಗಳವಾರ ಕೊಪ್ಪಳದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮ್ತತೆ ಟಿಪ್ಪು ಸುಲ್ತಾನ್ ಹೆಸರನ್ನು ಎಳೆದು ತಂದಿದ್ದಾರೆ. ಈ ರಾಜ್ಯದಲ್ಲಿ ಟಿಪ್ಪು ಸಂತಾನ ಇರಬೇಕೋ..? ರಾಮ ಭಕ್ತರು ಹನುಮ ಭಕ್ತರು ಬೇಕಾ..? ಎಂದು ಪ್ರಶ್ನೆ ಹಾಕಿದ್ದಾರೆ.
" ನಾವು ರಾಮ ಭಕ್ತರು, ಆಂಜನೇಯನ ಭಕ್ತರು, ಆಂಜನೇಯನ ಕಾರ್ಯ ಮಾಡುವವರು, ಆಂಜನೇಯನನ್ನು ಅಭಿವೃದ್ಧಿ ಮಾಡುವವರು. ನಾವು ಟಿಪ್ಪು ಸಂತಾನದವರಲ್ಲ. ಟಿಪ್ಪು ಸಂತಾನದವರನ್ನು ಮನೆಗೆ ಕಳುಹಿಸುವವರು. ಹಾಗಾಗಿ ಯಲಬುರ್ಗದ ಜನತೆಯಲ್ಲಿ ಕೇಳುತ್ತೇನೆ. ನೀವು ಆಂಜನೆಯನ್ನು ಪೂಜೆ ಮಾಡುತ್ತೀರಾ ಇಲ್ಲ ಟಿಪ್ಪುವಿನ ಭಜನೆ ಮಾಡುತ್ತಿರಾ..? ಹಾಗಾದ್ರೆ ಟಿಪ್ಪು ಭಜನೆ ಮಾಡುವವರನ್ನು ಕಾಡಿಗೆ ಓಡಿಸುತತ್ತಿರೋ ಇಲ್ಲವೋ..?" ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

ಮುಂದುವರಿದು "ಸಂಕಲ್ಪ ಮಾಡಿ ಈ ರಾಜ್ಯಕ್ಕೆ ಟಿಪ್ಪು ಸಂತಾನಾ ಬೇಕಾ, ರಾಮ ಭಕ್ತರು ಬೇಕಾ.. ಹನುಮ ಭಕ್ತರು ಬೇಕಾ..? ಎಂದು. ಈ ಆಂಜನೇಯನ ಪುಣ್ಯ ನೆಲದಲ್ಲಿ ಹೇಳುತ್ತೇನೆ. ಈ ನೆಲದಲ್ಲಿ ಟಿಪ್ಪುವನ್ನು ಪ್ರೀತಿ ಮಾಡುವವರು ಇರಬಾರದು. ರಾಮನ ಪೂಜೆ ಮಾಡುವವರು ಇರಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚೋದನಾತ್ಮವಾಗಿ ಭಾಷಣ ಮಾಡಿದ್ದಾರೆ.
#Karnataka BJP state president @nalinkateel makes controversial statement saying those who do bhajans of #TippuSultan should be chased away. Those who worship #Hanuman should chase away Tippu lovers to forest #Karnataka #KarnatakaElections2023 pic.twitter.com/HkPMJplYRY
— Imran Khan (@KeypadGuerilla) February 15, 2023
ಗಂಗಾವತಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಟಿಪ್ಪು ಮತ್ತು ಹನುಮ ಭಕ್ತರ ನಡುವೆ ಆಯ್ಕೆ ಯಾವುದು ಎಂದೇ ಪ್ರಶ್ನೆ ಹಾಕಿದ್ದಾರೆ. 2024 ರಲ್ಲಿ ಆಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗುತ್ತದೆ. ಅಷ್ಟರೊಳಗೆ ಆತನ ಶಿಷ್ಯನಿರುವ ಅಂಜನಾದ್ರಿಯನ್ನು ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇನ್ನು, ಬಳ್ಳಾರಿಯ ಕಂಪ್ಲಿಯಲ್ಲಿ ಮಾತನಾಡಿರುವ ಅವರು, "ರಾಜ್ಯದಲ್ಲಿ ಶ್ರೀಕೃಷ್ಣ ದೇವರಾಯ ಆಡಳಿತ ಬರಬೇಕು. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್‌ನ ಆಡಳಿತ ಬೇಡ. ರಾಜ್ಯದಲ್ಲಿ ಟಿಪ್ಪು ಸಂತಾನ ಬೇಕಾ..? ಶ್ರೀಕೃಷ್ಣ ದೇವರಾಯರ ಸಂತಾನ ಬೇಕಾ...? ಶ್ರೀಕೃಷ್ಣ ದೇವರಾಯರನ್ನು ಆರಾಧಿಸುವ ಸರ್ಕಾರ ಬರಬೇಕು. ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು" ಎಂದು ಹೇಳಿದ್ದಾರೆ.












Click it and Unblock the Notifications