ಬೆಂ ಉತ್ತರದಿಂದ ನಾನೂ ಕಣಕ್ಕಿಳಿಯುವೆ: ಶೋಭಾ

BJP Shobha Karandlaje too wants to contest from Bangalore North Lok Sabha seat
ಬೆಂಗಳೂರು, ಫೆ.10: ಯಾಕೋ ಬೆಂಗಳೂರು ಉತ್ತರ ಕ್ಷೇತ್ರವು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಕಗ್ಗಂಟಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ. ಬೆಂಗಳೂರು ಉತ್ತರದಿಂದ ನಾನೂ ಕಣಕ್ಕಿಳಿಯುವೆ ಎಂದು ಬಿಜೆಪಿಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸೀರಿಯಸ್ಸಾಗಿಯೇ ಹೇಳಿದ್ದಾರೆ. ಇದನ್ನು ಪಕ್ಷದ ವರಿಷ್ಠರಿಗೂ ಹೇಳಿರುವೆ ಎಂದಿದ್ದಾರೆ.

ಈಗಾಗಲೇ ಇದೇ ಕ್ಷೇತ್ರದ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಲು ಮಾಜಿ ಗೃಹ ಸಚಿವ ಮತ್ತು ಸ್ಥಳೀಯ ಆರ್ ಅಶೋಕ್ ಅವರು ಪಟ್ಟು ಹಿಡಿದಿದ್ದಾರೆ. ಅದರ ಜತೆಗೆ ಮಾಜಿ ಮುಖ್ಯಮಂತ್ರಿ, ದೂರದ ಸದಾನಂದ ಗೌಡರು ಸಹ ನಾನೇ ಕಣಕ್ಕಿಳಿಯುವೆ ಎನ್ನುತ್ತಿದ್ದಾರೆ.

ಇನ್ನು ಡಿಬಿ ಚಂದ್ರೇಗೌಡರೂ ಹಾಲಿ ಸಂಸದರಾಗಿ ಇಲ್ಲೇ ಇದ್ದಾರೆ. ಆದರೆ ಅವರು ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ತಾವು ಸ್ಪರ್ಧಿಸುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ( ಬೆಂ.ಉತ್ತರ : ಬಿಜೆಪಿಯಿಂದ ಯಾರಿಗೆ ಟಿಕೆಟ್? )

ಹೀಗೆ ಪಕ್ಷದ ಘಟಾನುಘಟಿಗಳೇ ಬೆಂಗಳೂರು ಉತ್ತರಕ್ಕಾಗಿ ಕಾದಾಟ ನಡೆಸುತ್ತಿರುವಾಗ ಶೋಭಾ ಅವರು ಟಿಕೆಟ್ ಸಿಕ್ಕಿದರೆ, ಪಕ್ಷ ಟಿಕೆಟ್ ಕೊಟ್ಟರೆ ನಾನೂ ಕಣಕ್ಕಿಳಿಯುವೆ ಎಂದು ಮಗುಮ್ಮಾಗಿ ಹೇಳಿದ್ದಾರೆ. ಅಂದಹಾಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರ ವ್ಯಾಪ್ತಿಗೆ ಬರುವ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿ, ಹೀನಾಯ ಸೋಲು ಕಂಡಿದ್ದರು.

ಇದು ಪಕ್ಷದಲ್ಲಿ ಸಂಚಲನವನ್ನುಂಟುಮಾಡಿದ್ದು, ಹೀಗೆ ಶೋಭಾ ದಿಢೀರನೆ ತಮ್ಮ ಕ್ಯಾಂಡಿಡೇಚರ್ ಅನ್ನು ಘೋಷಿಸಿರುವುದು ಕುತೂಹಲಕಾರಿಯಾಗಿದೆ. ಇದೇ ಕ್ಷೇತ್ರಕ್ಕೆ ಅವರು ಎಷ್ಟು ಪಟ್ಟು ಹಿಡಿದ್ದಾರೆ ಅಂದರೆ ಮೈಸೂರು ಅಥವಾ ಚಿಕ್ಕಮಗಳೂರು ಅಥವಾ ಮತ್ಯಾವುದೇ ಕ್ಷೇತ್ರದಿದಲೂ ತಾವು ಸ್ಪರ್ಧಿಸುವುದಿಲ್ಲ. ಆದರೆ ಬೆಂಗಳೂರು ಉತ್ತರದಿಂದಲೇ ಸ್ಪರ್ಧಿಸುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನವೇ ಗೊಂದಲದ ಗೂಡಾಗಿ, ತಮ್ಮ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿರುವುದನ್ನು ಕಂಡು ಕ್ಷೇತ್ರದ ಪ್ರಬುದ್ಧ ಮತದಾರರು ಮಾತ್ರ ಆಶ್ಚರ್ಯ ಚಕಿತರಾಗಿದ್ದಾರೆ. ಒಟ್ಟಿನಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ, ಕ್ಷೇತ್ರದ ಮತದಾರರು ಯಾರಿಗೆ ಟಿಕೆಟ್ ನೀಡುತ್ತಾರೋ... ಕುತೂಹಲವಂತೂ ಗರಿಗೆದರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+