ಕಲಿಯುಗದಲ್ಲಿ 'ರಾಮದ್ವೇಷಿ'ಗಳಿಗೆ 'ರಾವಣ, ದುರ್ಯೋಧನನ' ಗತಿ: ಆರ್ ಅಶೋಕ್ ಹೀಗಂದಿದ್ದೇಕೆ?

ಬೆಂಗಳೂರು, ಜನವರಿ 22: ಭಾರತಕ್ಕೆ ಇಂದು ಐತಿಹಾಸಿಕ ದಿನ ಎನ್ನಬಹುದು. ಕಾರಣ ಶತಮಾನಗಳ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರಿ ನೌಕರರು ಶ್ರೀರಾಮೋತ್ಸವದಲ್ಲಿ ಪಾಲ್ಗೊಳ್ಳಲು ಸಹಾಯವಾಗುವಂತೆ ಕಚೇರಿಗೆ ಅರ್ಧ ದಿನ ರಜೆ ನೀಡಿದ್ದು, ಕರ್ನಾಟಕ ರಜೆ ನೀಡಲು ನಿರಾಕರಿಸಿದೆ. ಸರ್ಕಾರ ನಡೆಗೆ ರಾಜ್ಯ ಬಿಜೆಪಿ ಟೀಕಿಸಿದೆ.

ಹೌದು, ಕರ್ನಾಟಕದಲ್ಲಿ ರಾಮ ಮಂದಿರ ಉದ್ಘಾಟನೆ ಸಂಬಂಧ ಕಾಂಗ್ರೆಸ್ ಸರ್ಕಾರ ರಜೆ ನೀಡಲು ಮಾಡಿದ್ದ ಹಲವು ಮನವಿಗಳನ್ನು ತಿರಸ್ಕರಿಸಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸೋಮವಾರ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

BJP R Ashok Condemn Karnataka Govt Decision of Not Announce Holiday on Monday Jan 22nd

ಇಡೀ ಭಾರತ ದೇಶ ರಾಮಮಯವಾಗಿದೆ ಜನರೆಲ್ಲರೂ ಸ್ವಯಂಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನ ಸಹಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲು ನಿರಾಕರಿಸಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಕೈಹಿಡಿದ ಮಡದಿ ಮಂಡೋದರಿ, ಒಡ ಹುಟ್ಟಿದ ತಮ್ಮ ವಿಭೀಷಣ ರಾಮ ದ್ವೇಷ ಬೇಡ ಎಂದು ಎಷ್ಟೇ ಹೇಳಿದರೂ ಕೇಳದ ರಾವಣನ ಗತಿ ಕಡೆಗೆ ಏನಾಯಿತು?.

ಅಧರ್ಮದ ಹಾದಿ ಹಿಡಿದು, ಸ್ವಂತ ದಾಯಾದಿಗಳ ಮೇಲೇ ಯುದ್ಧ ಸಾರಿ, ಶ್ರೀಕೃಷ್ಣನನ್ನು ಎದುರು ಹಾಕಿಕೊಂಡ ದುರ್ಯೋಧನನ ಕಥೆ ಕಡೆಗೆ ಏನಾಯ್ತು?

ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ

ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಶಿಗಳಿಗೂ ಅದೇ ರೀತಿ ಆಗಲಿದೆ ಎಂದು ರಾಮಾಯಣದ ದೃಷ್ಟಾಂತಗಳನ್ನು ನೆನಪಿಸಿದ್ದಾರೆ ಸರ್ಕಾರ ನಡೆಯನ್ನು ಖಂಡಿಸಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

BJP R Ashok Condemn Karnataka Govt Decision of Not Announce Holiday on Monday Jan 22nd

ಇಂದಿನ ರಾಮ ಮಂದಿರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರಲು ತೀರ್ಮಾನಿಸಿದ ಬಳಿಕ ಕಾಂಗ್ರೆಸ್ ಯಾವ ನಾಯಕರು ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಇದಾದ ಬಳಿಕ ರಜೆ ಘೋಷಣೆ ಮಾಡದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಬಿಜೆಪಿ ನಾಯಕರು ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಸೋಮವಾರ ರಜೆ ಘೋಘಿಸುವಂತೆ ಮನವಿ ಮಾಡಿದ್ದರು.

ಪದ್ಮನಾಭನಗರದಲ್ಲಿ ವಿಶೇಷ ಪೂಜೆ

ಇನ್ನೂ ರಾಮ ಜನ್ಮಭೂಮಿಯಲ್ಲಿ ರಾಮನ ಮಂದಿರ ಉದ್ಘಾಟನೆ ಆಗುತ್ತಿರುವ ಶುಭ ಸಂದರ್ಭದಲ್ಲಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ (ಕಾರ್ಮೆಲ್ ಶಾಲೆ ಪಕ್ಕ) ಶ್ರೀ ರಾಮನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.

ಇಂದು ಸಜೆ ಇಲ್ಲ ಅದ್ಧೂರಿಯಾಗಿ ನಡೆಯುವ ರಾಮೋತ್ಸವದಲ್ಲಿ ಖ್ಯಾತ ಸಂಗೀತ ವಿದ್ವಾಂಸ ವಿಜಯ ಪ್ರಕಾಶ್ ನೇತೃತ್ವದಲ್ಲಿ ರಾಮ ಭಜನೆ, ಸಂಗೀತ ಕಾರ್ಯಕ್ರಮ ಹಾಗೂ ಗಂಗಾರತಿ ನಡೆಯಲಿದೆ. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿರುತ್ತಾರೆ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+