Get Updates
Get notified of breaking news, exclusive insights, and must-see stories!

Jeans Park: ಎಲ್ಲಪ್ಪ ಜೀನ್ಸ್ ಪಾರ್ಕ್? 36 ಜೀನ್ಸ್ ತಯಾರಿಕಾ ಘಟಕಗಳ ಮುಚ್ಚುವ ಸ್ಥಿತಿ! ಸುಳ್ಳುಬುರಕು ರಾಹುಲ್ ಗಾಂಧಿ..

ಬೆಂಗಳೂರು, ನವೆಂಬರ್ 20: ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಳ್ಳಾರಿಯಲ್ಲಿ "ಜೀನ್ಸ್ ಪಾರ್ಕ್" ಮಾಡುತ್ತೇವೆ ಎಂದು ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದರು. ಈ ಯೋಜನೆಯ ಮೊದಲ ಹಂತವಾಗಿ 158 ಎಕರೆ ಭೂ ಸ್ವಾಧೀನ ಈಗಾಗಲೇ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಸುಮಾರು 400 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಸಹ ತಿಳಿಸಿದ್ದರು. ಇದೀಗ ಬಿಜೆಪಿ ಎಲ್ಲಿದೆ 'ಜೀನ್ಸ್ ಪಾರ್ಕ್" ಎಂದು ಪ್ರಶ್ನಿಸಿ ವ್ಯಂಗ್ಯವಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿಯು, "ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ?. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ "ಜೀನ್ಸ್ ಪಾರ್ಕ್" ಮಾಡುತ್ತೇವೆ, ಬಳ್ಳಾರಿಯನ್ನು "ಜೀನ್ಸ್ ರಾಜಧಾನಿ" ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಸರಿಯಾದ ಮೂಲಸೌಕರ್ಯವಿಲ್ಲದೆ 36 ಜೀನ್ಸ್ ತಯಾರಿಕಾ ಘಟಕಗಳು ಮುಚ್ಚುವ ಪರಿಸ್ಥಿತಿ ತಂದಿಟ್ಟಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ವಾಗ್ದಾಳಿ ನಡೆಸಿದರು.

BJP Questioned Where built Bellary Jeans Park over Rahul Gandhi statement

ರಾಹುಲ್ ಗಾಂಧಿ ಅವರೇ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಇನ್ನೂ ಟೇಕ್ ಆಫ್ ಆಗದ ನಿಮ್ಮ ಕಾಂಗ್ರೆಸ್ ಸರ್ಕಾರವನ್ನ ಈಗಲಾದರೂ ಎಬ್ಬಿಸದಿದ್ದರೆ ನಿಮ್ಮ ಪಕ್ಷಕ್ಕೆ ಬಿಹಾರದಲ್ಲಿ ಬಂದ ಗತಿಯೇ ಕರ್ನಾಟಕದಲ್ಲೂ ಬರುವುದು ನಿಶ್ಚಿತ ಎಂದು ಕಾಂಗ್ರೆಸ್ ಅವನತಿ ಬಗ್ಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಜೀನ್ಸ್ ಪಾರ್ಕ್ ನಿರ್ಮಾಣವಾಗಿ ಜೀನ್ಸ್ ತಯಾರಿಕಾ ಘಟಕಗಳಿಗೆ ಅಗತ್ಯವಾದ STP ಗಳು ಇದ್ದಿದ್ದರೆ, ಹೀಗೆ ರಾತ್ರೋರಾತ್ರಿ ಘಟಕಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಏಳಿ ಸ್ವಾಮಿ, ಎದ್ದೇಳಿ. ಕರ್ನಾಟಕವನ್ನು ಉಳಿಸಿ ಎಂದು ಕುಟುಕಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಹೇಳಿಕೆಗೆ ಪೂರಕವಾಗಿ ಸಚಿವ ಎಂ.ಬಿ.ಪಾಟೀಲ್ ಅವರು ಪ್ರತಿಕ್ರಿಯಿಸಿದ್ದರು. ಜೀನ್ಸ್ ಪಾರ್ಕ್ ಯೋಜನೆಗೆ ಶೀಘ್ರದಲ್ಲೇ ರಾಹುಲ್ ಗಾಂಧಿ ಅವರಿಂದ ಚಾಲನೆ ಕೊಡಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ದೃಷ್ಟಿಕೋನದಿಂದ ಮೂಡಿ ಬಂದಿದೆ. ಈ ಯೋಜನೆಯ ಮೊದಲ ಹಂತವಾಗಿ 158 ಎಕರೆ ಭೂ ಸ್ವಾಧೀನ ಈಗಾಗಲೇ ಪೂರ್ಣಗೊಂಡಿದೆ. 400 ಎಕರೆ ಭೂಮಿ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+