ಯಲಹಂಕದಲ್ಲಿ ರೋಡ್ ಶೋ ಮೂಲಕ ಅಮಿತ್ ಶಾ ಮತಬೇಟೆ
ಬೆಂಗಳೂರು, ಏಪ್ರಿಲ್ 10 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಬುಧವಾರ ಸಂಜೆ ರೋಡ್ ಶೋ ನಡೆಸಿದರು. ಬೆಂಗಳೂರು ನಗರದಲ್ಲಿ 2ನೇ ರೋಡ್ ಶೋ ನಡೆಸುವ ಮೂಲಕ ಅವರು ಲೋಕಸಭಾ ಚುನಾವಣೆಗೆ ಮತಬೇಟೆ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬುಧವಾರ ಸಂಜೆ ಅಮಿತ್ ಶಾ ಅವರು ಯಲಹಂಕದಲ್ಲಿ ರೋಡ್ ಶೋ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರ ಪರವಾಗಿ ಮತಯಾಚನೆ ಮಾಡಿದರು. ಬಿ.ಎನ್.ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಯಲಹಂಕದ ಕೊಂಡಪ್ಪ ಲೇಔಟ್‌ನಿಂದ ಆರಂಭವಾದ ರೋಡ್ ಶೋ ಯಲಹಂಕ ಮುಖ್ಯ ರಸ್ತೆಯ ಕೆಂಪೇಗೌಡ ಪ್ರತಿಮೆ ತನಕ ಸುಮಾರು 1.5 ಕಿ.ಮೀ. ನಡೆಯಿತು. ರೋಡ್ ಶೋನಿಂದಾಗಿ ಯಲಹಂಕ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

ಯಲಹಂಕ ಮುಖ್ಯ ರಸ್ತೆಯಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಅಮಿತ್ ಶಾ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಅವರು ಮಾಲಾರ್ಪಣೆ ಮಾಡಲಿಲ್ಲ. ಅಮಿತ್ ಶಾ ತೆರಳಿದ ಬಳಿಕ ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು.
ಏಪ್ರಿಲ್ 18ರಂದು ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಎಂ.ವೀರಪ್ಪ ಮೊಯ್ಲಿ ಅವರು ಕಣದಲ್ಲಿದ್ದಾರೆ.
LIVE: Shri @AmitShah's roadshow in Bengaluru, Karnataka. #ModiOnceMore https://t.co/RCIYja8etO
— BJP (@BJP4India) April 10, 2019












Click it and Unblock the Notifications