ದೇವೇಗೌಡರನ್ನು ಭಸ್ಮಾಸುರ ಎಂದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ಜನವರಿ 9: ಜೆಡಿಎಸ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ದೇವೇಗೌಡರು ಭಸ್ಮಾಸುರನಿದ್ದಂತೆ ಅವರಿಂದಲೇ ಕಾಂಗ್ರೆಸ್ ಪಕ್ಷ ನಾಶವಾಗುತ್ತದೆ ಅಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ದೇವೇಗೌಡರಿಂದಲೇ ಕಾಂಗ್ರೆಸ್ ಅಂತ್ಯವಾಗುತ್ತದೆ, ಕಾಂಗ್ರೆಸ್ ನಾಯಕರು ಬೇಗ ಎಚ್ಚೆತ್ತುಕೊಳ್ಳಬೇಕು, ಅದರ ಜೊತೆಗೆ ದೇವೇಗೌಡರು ಬಿಜೆಪಿ ನಾಯಕರನ್ನೂ ಭೇಟಿ ಮಾಡುತ್ತಿದ್ದಾರೆ, ಬಿಜೆಪಿ ಕೂಡ ಎಚ್ಚರಿಕೆಯಿಂದಿರಬೇಕು ಎಂದು ತಮ್ಮ ಪಕ್ಷದ ನಾಯಕರಿಗೂ ಸಲಹೆ ನೀಡಿದ್ದಾರೆ.
ನಾನು ಕೂಡ ಒಂದು ಕಾಲದಲ್ಲಿ ದೇವೇಗೌಡರ ಸಲಹೆಯನ್ನು ತಲೆಯ ಮೇಲೆ ಇಟ್ಟುಕೊಂಡಿದ್ದೆ ಹೇಗೋ ಅದರಿಂದ ಪಾರಾಗಿ ಬಂದೆ. ಇದೀಗ ದೇವೇಗೌಡರ ಕೈ ಕಾಂಗ್ರೆಸ್ ಮೇಲಿದೆ. ಇದರಿಂದ ಶೀಘ್ರದಲ್ಲೇ ಕಾಂಗ್ರೆಸ್ ಭಸ್ಮವಾಗುತ್ತೆ. ಜೆಡಿಎಸ್ ಹೇಳಿದಂತೆ ಕೇಳಿದರೆ ಮಾತ್ರ ಕಾಂಗ್ರೆಸ್‌ಗೆ ಉಳಿಗಾಲ ಎಂದು ಹೇಳಿದ್ದಾರೆ.

ದೇವೇಗೌಡರು ಮೋದಿಯವರನ್ನು ಭೇಟಿಯಾಗಿ ಕಾಂಗ್ರೆಸ್ ಪಾಳಯದಲ್ಲಿ ಅವರು ನಡುಕವನ್ನು ಹುಟ್ಟಿಸುತ್ತಾರೆ, ಜೆಡಿಎಸ್ ಬಿಟ್ಟು ರಾಹುಲ್ ಗಾಂಧಿಯವರಿಗೆ ಬೇರೆ ದಾರಿ ಇಲ್ಲ, ಇದೇ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಯಾವಾಗಲೂ ಕಣ್ಣಿರು ಹಾಕುತ್ತಾರೆ.
ಆದರೆ ಅದನ್ನು ಯಾರೂ ಕೂಡ ನಂಬಬಾರದು ಕರವಸ್ತ್ರದಲ್ಲಿ ಅಂಬ್ರುತಾಂಜನ ಯಾವಾಗಲೂ ಇಟ್ಟುಕೊಂಡಿರುತ್ತಾರೆ ಎಂದು ನಾಟಕ ಮಾಡುತ್ತಾರೆ. ಬ್ರಿಟನ್ ರಾಣಿ ಹೊರತುಪಡಿಸಿದರೆ ಅತ್ಯಂದ ಶ್ರೀಮಂತರಾಣಿ ಸೋನಿಯಾ ಗಾಂಧಿ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications