ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಈ ಕಾರಣಕ್ಕೆ ಮತ್ತೆ ಅರೆಸ್ಟ್‌ ?

ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಲಂಚಕ್ಕಾಗಿ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡುಗೆ ಈಗ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಆದರೆ, ಮತ್ತೊಂದು ಗಂಭೀರ ಪ್ರಕರಣದಲ್ಲಿ ಮುನಿರತ್ನ ನಾಯ್ಡು ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ರೀತಿ ಆದರೆ, ಜಾಮೀನಿನ ನಿರಾಳತೆ ಅನುಭವಿಸುವ ಮೊದಲೇ ಮುನಿರತ್ನ ನಾಯ್ಡು ಮತ್ತೊಬ್ಬ ಕಂಬಿ ಹಿಂದೆ ಹೋಗಲಿದ್ದಾರೆ.

ಈಗಾಗಲೇ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದರೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡುಗೆ ಶಾಸಕರು - ಸಂಸದರ ವಿಶೇಷ ನ್ಯಾಯಾಲಯದಿಂದ ಗುರುವಾರ ಜಾಮೀನು ಮಂಜೂರು ಆಗಿದೆ. ಆದರೆ, ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ ಎನ್ನುವ ಸಂತೋಷ ಮುನಿರತ್ನಗೆ ಹೆಚ್ಚು ದಿನ ಉಳಿಯುವಂತೆ ಕಾಣುತ್ತಿಲ್ಲ. ಇನ್ನು ಈಗಾಗಲೇ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಈ ಷರತ್ತುಗಳನ್ನು ಉಲ್ಲಂಘಿಸಿದರೆ ಭಾರೀ ಸಂಕಷ್ಟ ಕಾದಿದೆ.

BJP MLA Munirathna Naidu will arrested again for this reason

ಅದರ ನಡುವೆ ಮತ್ತೊಂದು ಪ್ರಕರಣವೂ ಅವರ ಬೆನ್ನೇರಿದೆ. ಇನ್ನು ಜಾಮೀನಿಗೆ ಸಂಬಂಧಿಸಿದಂತೆ ಎರಡು ಲಕ್ಷ ರೂಪಾಯಿ ಮೌಲ್ಯದ ಬಾಂಡ್, 2 ಶ್ಯೂರಿಟಿ ಕೊಟ್ಟಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರ ನಾಶ ಮಾಡಬಾರದು. ಸಾಕ್ಷಿದಾರರಿಗೆ ಬೆದರಿಕೆ ಹಾಕಬಾರದು ಎಂದು ಹೇಳಿ ಕೋರ್ಟ್‌ ಜಾಮೀನು ನೀಡಿದೆ. ಇದೀಗ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಪ್ರಕರಣಗಳು ಗಂಭೀರ ಸ್ವರೂಪವನ್ನು ಪಡೆದುಕೊಂಡಿವೆ. ಹೀಗಾಗಿ, ಈ ಪ್ರಕರಣಗಳಲ್ಲಿ ಮುನಿರತ್ನ ನಾಯ್ಡು ನನ್ನು ಪೊಲೀಸರು ಮತ್ತೆ ಬಂಧಿಸುವ ಸಾಧ್ಯತೆ ಇದೆ.

ಮುನಿರತ್ನ ನಾಯ್ಡು ಬಂಧನ ಯಾಕೆ

ಬಿಜೆಪಿ ಶಾಸಕ, ನಿರ್ಮಾಪಕ ಮುನಿರತ್ನ ನಾಯ್ಡುನನ್ನು ಪೊಲೀಸರು ಇದೇ ಸೆಪ್ಟೆಂಬರ್‌ 14ರಂದು ಬಂಧಿಸಿದ್ದರು. ಬೆಂಗಳೂರಿನ ಗುತ್ತಿಗೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಮುನಿರತ್ನ ನಾಯ್ಡು ಬಂಧನವಾಗಿತ್ತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರನಾದ ಚಲುವರಾಜು ಎನ್ನುವವರಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಜಾತಿ ನಿಂದನೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಮುನಿರತ್ನ ಮಾತನಾಡಿದ್ದ ಅಶ್ಲೀಲವಾಗಿ ಮಾತನಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.

ಎಸ್ಕೇಪ್‌ ಪ್ಲಾನ್‌ ಮಾಡಿದ್ದ ಮುನಿರತ್ನ

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಎಸ್ಕೇಪ್‌ ಪ್ಲಾನ್‌ ಮಾಡಿದ್ದರು. ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ಜಿಗಿಯುವ ಪ್ಲಾನ್‌ ಅವರದ್ದಾಗಿತ್ತು. ಆದರೆ, ಕರ್ನಾಟಕ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಕೋಲಾರದಲ್ಲಿ ಸೆಪ್ಟೆಂಬರ್‌ 14ರಂದು ಪೊಲೀಸರು ಬಂಧಿಸಿದ್ದರು. ಇದು ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ಮುನಿರತ್ನ ನಾಯ್ಡು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+