'ಮಂಗಳೂರು ಚಲೋ'ಗೆ ಅನುಮತಿ ನಿರಾಕರಣೆ: ಟ್ವಿಟ್ಟರ್ ನಲ್ಲಿ ಆಕ್ರೋಶ

ಬೆಂಗಳೂರು, ಸೆಪ್ಟೆಂಬರ್ 5: 'ಈ ಭೂಮಿಯ ಮೇಲಿರುವ ಯಾವ ಶಕ್ತಿಗೂ ಮಂಗಳೂರು ಚಲೋ ಬೈಕ್ ಜಾಥಾವನ್ನು ತಡೆಯಲು ಸಾಧ್ಯವಿಲ್ಲ' ಇದು ಕರ್ನಾಟಕ ಬಿಜೆಪಿಯ ಟ್ವಿಟ್ಟರ್ ಹೇಳಿಕೆ.

ಕರಾವಳಿಯಲ್ಲಿ ಹೆಚ್ಚುತ್ತಿರುವ ಹಿಂದು ಕಾರ್ಯಕರ್ತರ ಮೇಲಿನ ದಾಳಿಯನ್ನು ವಿರೋಧಿಸಿ ಇಂದಿನಿಂದ (ಸೆ.5) ಸೆ.7 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಬೈಕ್ rally ಗೆ ಅನುಮತಿ ನೀಡಲು ಕರ್ನಾಟಕ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ರೀತಿ ಪ್ರತಿಕ್ರಿಯಿಸಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಾಥಾಕ್ಕೆ ಅನುಮತಿ ನೀಡಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಬಿಜೆಪಿಯ ಜನಪ್ರಿಯತೆಯನ್ನು ಸಹಿಸದವರು ಬೇಕೆಂದೇ ಜಾಥಾಕ್ಕೆ ತಡೆಯೊಡ್ಡೂತ್ತಿದ್ದಾರೆ ಎಂಬುದು ಬಿಜೆಪಿ ನಾಯಕರ ಅಂಬೋಣ.

ಒಟ್ಟಿನಲ್ಲಿ ಸೆ.4 ರಿಂದ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿರುವ #MangaluruChalo ಹ್ಯಾಶ್ ಟ್ಯಾಗ್ ನಲ್ಲಿ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಟ್ವೀಟ್ ಮಾಡಿ, ಜಾಥಾಕ್ಕೆ ಅನುಮತಿ ನೀಡದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಏರ್ಪಡುತ್ತಿದೆ!

ಮಂಗಳೂರು ಚಲೋ ಜಾಥಾ ಕೈಗೊಂಡಿದ್ದ ಕೋಲಾರದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಬಂಧಿಸಿದ ಕ್ರಮವನ್ನು ಖಂಡಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಪರಿಸ್ಥಿತಿಯಂಥ ಸನ್ನಿವೇಶವನ್ನು ರಾಜ್ಯದಲ್ಲಿ ಸೃಷ್ಟಿಸುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವ ಹೂತುಹಾಕಲಾಗುತ್ತಿದೆ!

ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜನೆಗೊಂಡ ಮಂಗಳೂರು ಜಾಥಾಕ್ಕೆ ಅನುಮತಿ ನೀಡದೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಹೂತುಹಾಕುತ್ತಿದೆ ಎಂದು ಕರ್ನಾಟಕ ಬಿಜೆಪಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ಅನುಮತಿ ನೀಡಿರಲಿಲ್ಲವೇ?

2010 ರಲ್ಲಿ ಬಿಜೆಪಿ, ಕಾಂಗ್ರೆಸ್ ನ ಬಳ್ಳಾರಿ ಪಾದಯಾತ್ರೆಗೆ ಅನುಮತಿ ನೀಡಿತ್ತು. ಆದರೆ ಹೇಡಿ ಸಿದ್ದರಾಮಯ್ಯ ಬಿಜೆಪಿಯ ಮಂಗಳೂರು ಚಲೋವನ್ನು ತಡೆಯುತ್ತಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಜನರ ಭಾವನೆ ನಿರ್ಬಂಧಿಸಲು ಸಾಧ್ಯವೇ?

ಮಂಗಳೂರು ಚಲೋವನ್ನು ನಿರ್ಬಂಧಿಸಿದ ಮಾತ್ರಕ್ಕೆ ಜನರ ಭಾವನೆಗಳನ್ನು ನಿರ್ಬಂಧಿಸಲು ನಿಮ್ಮಿಂದ ಸಾಧ್ಯವೇ ? ಮಂಗಳೂರು ಚಲೋ ಎಂಬುದು ಜನ ಶಕ್ತಿ ಸಂಘ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಅರವಿಂದ್ ಲಿಂಬಾವಳಿ

ಪಿಎಫ್ ಐ ಮತ್ತು ಕೆಎಫ್ ಡಿ ನಂಥ ಇಸ್ಲಾಮಿಕ್ ಸಂಸ್ಥೆಗಳು ಹಿಂದುಗಳನ್ನು ಬರ್ಬರವಾಗಿ ಹತ್ಯೆಗೈಯುತ್ತಿವೆ. ಆದರೆ ನಮ್ಮನ್ನು ಒಡೆಯುವುದನ್ನು ಬಿಟ್ಟು ಕಾಂಗ್ರೆಸ್ ಬೇರೇನನ್ನೂ ಮಾಡುತ್ತಿಲ್ಲ ಎಂದು ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+