• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ತಿರುಚುತ್ತಿದೆ: ಎಚ್‌ಸಿ ಮಹದೇವಪ್ಪ

By ಒನ್‌ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ನವೆಂಬರ್ 03: ದಲಿತ ಸಮುದಾಯಕ್ಕೆ ಸೇರಿದ್ದರೂ ದಲಿತರ ನ್ಯಾಯಬದ್ಧ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಕಾರಜೋಳ, ಜಿಗಜಿಣಗಿ ಅವರು ಸಿದ್ದರಾಮಯ್ಯ ಅವರ ಮಾತನ್ನು ತಿರುಚಿ ಅಪಪ್ರಚಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ ಎಂದು ಎಚ್‌ಸಿ ಮಹದೇವಪ್ಪ ಅವರು ಹೇಳಿದ್ದಾರೆ.

ಅಧಿಕಾರ ಸಿಕ್ಕಾಗ ದಲಿತರ ಪರವಾಗಿ ಅತಿ ಹೆಚ್ಚಿನ ಕೆಲಸ ಮಾಡಿದ ಸಿದ್ದರಾಮಯ್ಯ ಅವರು ಒಬ್ಬ ನಿಜವಾದ ಅಂಬೇಡ್ಕರ್ ವಾದಿ.

ದಲಿತರಿಗೆ SCP/TSP ಕಾಯ್ದೆ, ಜಾರಿಗೊಳಿಸಿ, ಗುತ್ತಿಗೆ ಮೀಸಲಾತಿ ಅವಕಾಶ ಕಲ್ಪಿಸಿ, ಬಡ್ತಿ ಮೀಸಲಾತಿ ಯೋಜನೆ ರೂಪಿಸಿ, ಕಲ್ಲು ಗಣಿಗಾರಿಕೆಯಲ್ಲಿ ಮೀಸಲಾತಿ, ಕೈಗಾರಿಕೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ ಸಿದ್ದರಾಮಯ್ಯ ಅವರು SCP/TSP ಕಾಯ್ದೆಯಡಿ 30 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿಗೊಳಿಸಿದರು.

ಬಹುಶಃ ಈಗ ದೊಡ್ಡದಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯ ಯಾವ ನಾಯಕರೂ ಕೂಡಾ ಸಿದ್ದರಾಮಯ್ಯನವರ ರೀತಿ ತಮ್ಮ ರಾಜಕೀಯ ಇತಿಹಾಸದಲ್ಲಿ ದಲಿತರ ಪರವಾದ ಕಾರ್ಯಕ್ರಮ ರೂಪಿಸುವುದಿರಲಿ, ಹಾಗೆ ಯೋಚಿಸಲೂ ಕೂಡಾ ಸಾಧ್ಯವಿಲ್ಲ.

ದಲಿತರಾಗಿದ್ದರೂ ಕೂಡಾ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯ ಹಣವನ್ನು ಕಡಿಮೆಗೊಳಿಸಿ ಅಂಬೇಡ್ಕರ್ ಆಶಯಕ್ಕೆ ವಿರೋಧಿಯಾದ ಕೋಮುವಾದಿ ಪಾಳಯಕ್ಕೆ ಸೇರಿ ನಿಜದ ಅಂಬೇಡ್ಕರ್ ವಾದಿ ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾರಜೋಳ, ಜಿಗಜಿಣಗಿ ಹಾಗೂ ನಾರಾಯಣಸ್ವಾಮಿ ಅವರಿಗೆ ನಾಚಿಕೆಯಾಗಬೇಕು!

ಅಂಬೇಡ್ಕರ್ ಸಿದ್ದಾಂತವನ್ನು ತಮ್ಮ ಬದುಕಲ್ಲೇ ಅಳವಡಿಸಿಕೊಂಡಿರುವ ಸಿದ್ದರಾಮಯ್ಯ ಅವರು ಎಂದಿಗೂ ದಲಿತರ ವಿರುದ್ಧವಾಗಿ ಹಗುರವಾಗಿ ಹಿಂದೆಯೂ ಮಾತನಾಡಿಲ್ಲ, ಇಂದೂ ಮಾತಾಡಿಲ್ಲ ಮುಂದೆಯೂ ಮಾತನಾಡಿಲ್ಲ.

ದಲಿತರ ಹಿತಾಸಕ್ತಿ ಕಾಪಾಡುವ ಜಾಗದಲ್ಲಿ ದಲಿತರ ಅವಕಾಶಗಳನ್ನು ತಪ್ಪಿಸುತ್ತಿರುವ ಬಿಹೆಪಿಯ ದಲಿತ ನಾಯಕರು ತಮ್ಮ ಸುಳ್ಳು ಪ್ರಚಾರಕ್ಕೆ ಮತ್ತು ದಲಿತ ವಿರೋಧಿ ನೀತಿಗಳಿಗಾಗಿ ರಾಜ್ಯದ ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ!

ಬಾಬಾ ಸಾಹೇಬರ ಹೆಸರಿನಲ್ಲಿ ಅಪಪ್ರಚಾರ ಮಾಡುವುದು ಸುಲಭ ಆದರೆ ಅವರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಇವರ ಕೈಯಲ್ಲಿ ಆಗದ ಕೆಲಸ!

   Rahul Dravid ಬಂದ ಮೇಲೆ ತಂಡ ಬದಲಾಗಲಿದೆಯೇ | Oneindia Kannada
   English summary
   HC Mahadevappa Says, BJP leaders misleading the general people about Dalit statement of Siddaramaiah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion