ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಸ್ ಅಧಿಕಾರಿಗಳ ಕೂಗಿಗೆ ದನಿಗೂಡಿಸಿದ ಸುರೇಶ್‌ಕುಮಾರ್

By Manjunatha
|
Google Oneindia Kannada News

Recommended Video

ಐ ಪಿ ಎಸ್ ಅಧಿಕಾರಗಳ ಸಂಘವನ್ನ ಬೆಂಬಲಿಸಿದ ಬಿಜೆಪಿ ಮುಖಂಡ ಸುರೇಶ್ ಕುಮಾರ್ | Oneindia Kannada

ಬೆಂಗಳೂರು, ಮಾರ್ಚ್ 12: ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಶರ್ಮಾ ಅವರು ಪೊಲೀಸ್ ಇಲಾಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಪ್ರಶ್ನಿಸಿ ಮತ್ತು ಇನ್ನತೆರೆ ವಿಷಯಗಳ ಬಗ್ಗೆ ಸರ್ಕಾರಕ್ಕೆ ಬರೆದಿರುವ ಆಕ್ರೋಶ ಭರಿತ ಪತ್ರಕ್ಕೆ ಬಿಜೆಪಿ ಶಾಸಕ ಮಾಜಿ ಕಾನೂನು ಮಂತ್ರಿ ಸುರೇಶ್ ಕುಮಾರ್ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ಹರಿಬಿಟ್ಟಿರುವ ಸುರೇಶ್ ಕುಮಾರ್, 'ಐಪಿಎಸ್ ಅಧಿಕಾರಿಗಳ ಸಂಘ ಬರೆದಿರುವ ಪತ್ರದಲ್ಲಿ ಬರೆದಿರುವ ಅಕ್ಷರ ಅಕ್ಷರವೂ ಸರಿಯಾಗಿದೆ, ಅದನ್ನು ನಾನು ಅನುಮೋದಿಸುತ್ತೇವೆ, ಬೆಂಬಲಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿಗಳು ಗರಂ, ರತ್ನಪ್ರಭಾಗೆ ಪತ್ರಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿಗಳು ಗರಂ, ರತ್ನಪ್ರಭಾಗೆ ಪತ್ರ

ರಾಜ್ಯದ ಜನರಲ್ಲಿ ಭಯಮುಕ್ತ ಭಾವ ನಿರ್ಮಿಸಬೇಕಾಗಿದ್ದ ಪೊಲೀಸರೆ ಇಂದು ಆತಂಕದಲ್ಲಿ ಕೆಲಸ ಮಾಡುವ ಪರಿಸ್ಥಿತಿ ರಾಜ್ಯದಲ್ಲಿ ಇದೆ, ಐಎಎಸ್ ಅಧಿಕಾರಿ ರಶ್ಮಿ ಮೇಲೆ ನಡೆದ ಹಲ್ಲೆಯಿಂದ ಪ್ರಾರಂಭಗೊಂಡು ಆ ನಂತರ ಅಧಿಕಾರಿಗಳ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ಸಾಲು ಸಾಲಾಗಿ ನಡೆದವು, ಲೋಕಾಯುಕ್ತರ ಮೇಲೂ ಹಲ್ಲೆ ನಡೆಯಿತು, ಇವೆಲ್ಲಾ ನಮ್ಮ ರಾಜ್ಯಕ್ಕೆ ಭೂಷಣವಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

bjp leader suresh kumar supports IPS officers association

ಐಪಿಎಸ್ ಅಧಿಕಾರಿಗಳ ಒಕ್ಕೂಟ ಎತ್ತಿರುವ ಪ್ರಶ್ನೆಗಳೆಲ್ಲವೂ ಸೂಕ್ತ ಮತ್ತು ಪ್ರಸ್ತುತವಾಗಿದ್ದು, ಅವರ ಬೇಡಿಕೆಯನ್ನು ಮನ್ನಿಸಿ ಸರ್ಕಾರವು ಈ ಕೂಡಲೇ ಐಪಿಎಸ್ ಅಧಿಕಾರಿಗಳ ಸಭೆ ಕರೆದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೊಲೀಸ್ ಇಲಾಖೆಯನ್ನು ಸುಧಾರಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಐಪಿಎಸ್ ಅಧಿಕಾರಿಗಳ ಒಕ್ಕೂಟದ ಪತ್ರದಲ್ಲಿ ಬಹಳ ಗಂಭೀರ ವಿಷಯ ಪ್ರಸ್ತಾಪಿಸಲಾಗಿದೆ ಎಂದಿರುವ ಅವರು ಬೆಂಗಳೂರಿಗೆ ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಕಮಿಷನರ್‌ಗಳು ಬಂದಿದ್ದಾರೆ ಹೀಗಾದರೆ ಅಧಿಕಾರಿಗಳು ದಕ್ಷತೆಯಿಂದ ತಮ್ಮ ಕಾರ್ಯವನ್ನು ಮಾಡಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಐಪಿಎಸ್ ಅಧಿಕಾರಿಗಳ ಒಕ್ಕೂಟದ ಪತ್ರವನ್ನು ಯಡಿಯೂರಪ್ಪ ಹಾಗೂ ಕರ್ನಾಟಕ ಬಿಜೆಪಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ.

English summary
BJP leader Suresh Kumar supports IPS officers association letter to the government about political pressure in Police department. Suresh Kumar said government should respond immediately to the IPS officers demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X