ಬಿಜೆಪಿ ಮುಖಂಡ ಅನಂತರಾಜು ಪ್ರೇಯಸಿ ಬಸ್‌ಗೆ ಸಿಲುಕಿ ಆತ್ಮಹತ್ಯೆಗೆ ಯತ್ನದ ಹೈಡ್ರಾಮಾ

ಬೆಂಗಳೂರು, ಜೂನ್1: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆಗೆ ಅನಂತರಾಜು ಪ್ರಿಯತಮೆ ಹಾಜರಾಗಿ ಅನಂತರಾಜು ಪತ್ನಿ ಸುಮಾ ವಿರುದ್ಧ ದೂರು ದಾಖಲಿಸಿದರು.

ರೇಖಾ ನೀಡಿದ ದೂರನ್ನು ಪೊಲೀಸರು ಕೇವಲ ಎನ್‌ಸಿಆರ್ ದಾಖಲಿಸಿದ್ದರು. ಇದರ ಜೊತೆಗೆ ಹನಿಟ್ರಾಪ್ ಆರೋಪಿ ಅನ್ನೋ ಹಣೆ ಪಟ್ಟಿ ಕಟ್ಟಿದ್ದಾರೆ ಎಂದು ಬೇಸರಗೊಂಡ ರೇಖಾ ಠಾಣೆಯಿಂದ ಕಣ್ಣೀರು ಹಾಕಿ ಹೊರಬಂದು ಬಸ್ ಸಿಲುಕಿ ಆತ್ಮಹತ್ಯೆ ಗೆ ಯತ್ನಿಸುವ ಹೈಡ್ರಾಮ ನಡೆದಿದೆ. ಈ ವೇಳೆ ರೇಖಾ ಸಂಬಂಧಿ ರೇಖಾಳನ್ನು ರಸ್ತೆಯಿಂದ ಹೊರಗಡೆ ಎಳೆದು ಸಮಾಧಾನ ಪಡಿಸಿದ್ದಾರೆ.

ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರೇಖಾ ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದಾರೆ. ಬಿಜೆಪಿ ಮುಖಂಡ ಅನಂತರಾಜು ಜೊತೆ ಲೀವಿಂಗ್ ರಿಲೇಷನ್ ಶಿಪ್‌ನಲ್ಲಿದ್ದ ರೇಖಾ ವಿಚಾರ ಅನಂತರಾಜು ಮನೆಯಲ್ಲಿ ಗೊತ್ತಾಗಿ ದೊಡ್ಡ ರಾದ್ದಾಂತವೇ ನಡೆದಿತ್ತು.

ಈ ನಡುವೆ ಜೀವನದಲ್ಲಿ ಬೇಸತ್ತಿದ್ದ ಅನಂತರಾಜು ಮೇ 12ರಂದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದ. ಅನಂತರಾಜುವಿನ ಪ್ರೇಯಸಿ ಹನಿಟ್ರಾಪ್ ಮತ್ತು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿ ಆತ್ಮಹತ್ಯೆಗೆ ರೇಖಾ ಕಾರಣ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಸುಮಾ ಕೊಟ್ಟ ದೂರಿನ ಅನ್ವಯ ರೇಖಾರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

BJP Leader Anantharaju Lover Suicide Attempt

ರೇಖಾ ಮತ್ತು ಸುಮಾರ ನಡುವೆ ನಡೆದಿದ್ದ ಮಾತಿನ ಸಮರದ ಆಡಿಯೋಗಳು ರಿವಿಲ್ ಆಗಿದ್ದವು. ಜಾಮೀನ ಮೇಲೆ ಬಿಡುಗಡೆಯಾದ ರೇಖಾ ಬ್ಯಾಡರಹಳ್ಳಿ ಠಾಣೆಗೆ ಬಂದು ಅನಂತರಾಜು ಆತ್ಮಹತ್ಯೆಗೆ ಪತ್ನಿ ಸುಮಾರೇ ಕಾರಣ ಎಂದು ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಎನ್‌ಸಿಆರ್ ಮಾಡಿಕೊಂಡು ಆತ್ಮಹತ್ಯೆ ಕೇಸ್‌ನಲ್ಲಿ ನಿಮ್ಮನ್ನು ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದಾರೆ.

BJP Leader Anantharaju Lover Suicide Attempt

ಕೆಲ ಸಮಯ ಠಾಣೆಯಲ್ಲೇ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರಿಂದ ನನಗೆ ನ್ಯಾಯ ಸಿಗಲ್ಲ ಎನ್ನುತ್ತಾ ಹೊರಬಂದ ರೇಖಾ ಮಾಗಡಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಬಸ್‌ಗೆ ಅಡ್ಡಲಾಗಿ ಹೋಗಿ ನಿಲ್ಲುತ್ತಾ ಆತ್ಮಹತ್ಯೆಗೆ ಯತ್ನಿಸಿ ಹೈಡ್ರಾಮವನ್ನು ಸೃಷ್ಟಿಸಿದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+