ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶ, ವಿಶ್ವನಾಥ್‌ಗೆ ಬಿಗ್ ಶಾಕ್

|
Google Oneindia Kannada News

Recommended Video

ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶ, ವಿಶ್ವನಾಥ್‌ಗೆ ಬಿಗ್ ಶಾಕ್ | Oneindia Kannada

ಬೆಂಗಳೂರು,ಅಕ್ಟೋಬರ್ 1: ಉಪಚುನಾವಣೆಯಲ್ಲಿ ಅಪ್ಪನಿಗೆ ಮಾತ್ರ ಬಿಜೆಪಿಯಿಂದ ಟಿಕೆಟ್ ಸಿಗಲಿದ್ದು, ಅಪ್ಪನ ಹೆಸರಿನಲ್ಲಿ ಮಗನಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ನಿಯಮದ ಪ್ರಕಾರ ಮಗನನ್ನು ಹುಣುಸೂರು ಕ್ಷೇತ್ರದಲ್ಲಿ ನಿಲ್ಲಿಸಬೇಕು ಎಂದುಕೊಂಡಿದ್ದ ಅನರ್ಹ ಶಾಸಕ ಎಚ್‌ ವಿಶ್ವನಾಥ್‌ಗೆ ಆತಂಕ ಶುರುವಾಗಿದೆ.

ಹುಣಸೂರು ಕ್ಷೇತ್ರದಿಂದ ನಾನೇ ಚುನಾವಣೆ ಸ್ಪರ್ಧಿಸುತ್ತೇನೆ: ಎಚ್.ವಿಶ್ವನಾಥ್ಹುಣಸೂರು ಕ್ಷೇತ್ರದಿಂದ ನಾನೇ ಚುನಾವಣೆ ಸ್ಪರ್ಧಿಸುತ್ತೇನೆ: ಎಚ್.ವಿಶ್ವನಾಥ್

ಫಾದರ್ ಕಮ್ ಸನ್ಸ್ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಿರುವ ಬಿಜೆಪಿ ಹೈಕಮಾಂಡ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ್ದನ್ನೇ ಪ್ರಸ್ತಾಪಿಸಿ ಅನರ್ಹರಿಗೂ ಇದೇ ನಿಯಮ ಅನ್ವಯ ಆಗುತ್ತದೆ ಎಂದು ತಿಳಿಸಿದೆ.

ಅನರ್ಹರ ಪ್ರಕರಣ ಈಗ ಸುಪ್ರೀಂ ಕೋರ್ಟಿನಲ್ಲಿ, ಒಂದು ವೇಳೆ ಅನರ್ಹ ಶಾಸಕರ ಪರವಾಗಿ ತೀರ್ಪು ಬಂದರೆ ಸ್ಪರ್ಧೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿರುದ್ಧ ತೀರ್ಪು ಬಂದರೆ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಇಲ್ಲಿಗೆ ಎಲ್ಲವೂ ಮುಗಿಯಲಿ; ಸಾರಾ ಮಹೇಶ್ ಜೊತೆ ರಾಜಿಗೆ ಮುಂದಾದ ವಿಶ್ವನಾಥ್ಇಲ್ಲಿಗೆ ಎಲ್ಲವೂ ಮುಗಿಯಲಿ; ಸಾರಾ ಮಹೇಶ್ ಜೊತೆ ರಾಜಿಗೆ ಮುಂದಾದ ವಿಶ್ವನಾಥ್

ಸಿಎಂ ಯಡಿಯೂರಪ್ಪಗೆ ಅನ್ವಯವಾದ ನಿಯಮವೇ ಅನರ್ಹ ಶಾಸಕರಿಗೂ ಅನ್ವಯ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್ ಅನರ್ಹ ಶಾಸಕರಿಗೆ ಶಾಕ್ ನೀಡಿದೆ.

ಈ ವಿಚಾರವಾಗಿ ಮೈಸೂರು ದಸರಾ ಉದ್ಘಾಟನೆಗೆ ಹೋಗಿದ್ದಾಗ ವಿಶ್ವನಾಥ್ ಜತೆ ಸಿಎಂ ಬಿಎಸ್‍ವೈ ಮಾತನಾಡಿದ್ದು, ಚುನಾವಣೆಗೆ ನಿಂತರೆ ನೀವು ನಿಲ್ಲಬೇಕು ವಿಶ್ವನಾಥ್, ಇಲ್ಲದಿದ್ದರೆ ವಿಧಾನ ಪರಿಷತ್ ಸದಸ್ಯರಾಗಲು ರೆಡಿಯಾಗಿ. ಆದರೆ ಬಿಜೆಪಿಯಿಂದ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

 ಹುಣಸೂರಲ್ಲಿ ಬಿಜೆಪಿ ನಗರಾಧ್ಯಕ್ಷ ಮಂಜುನಾಥ್‌ಗೆ ಟಿಕೆಟ್?

ಹುಣಸೂರಲ್ಲಿ ಬಿಜೆಪಿ ನಗರಾಧ್ಯಕ್ಷ ಮಂಜುನಾಥ್‌ಗೆ ಟಿಕೆಟ್?

ತನ್ನ ಮಗ ಅಮಿತ್​​ಗೆ ಬಿಜೆಪಿ ಟಿಕೆಟ್​​ ನೀಡುವಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರನ್ನು ಅನರ್ಹ ಶಾಸಕ ಎಚ್​​. ವಿಶ್ವನಾಥ್​​ ಕೇಳಿದ್ದರು. ಈ ಬೆನ್ನಲ್ಲೀಗ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೈಸೂರು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್‌ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಜತೆಗೆ ಮಂಜುನಾಥ್​​ ಪರವಾಗಿ ಕೆಲಸ ಮಾಡುವಂತೆ ವಿಶ್ವನಾಥ್​​ಗೆ ಖುದ್ದು ಸಿಎಂ ಬಿ.ಎಸ್​​ ಯಡಿಯೂರಪ್ಪ ಸೂಚಿಸಿದ್ದಾರೆ.

 ಹುಣಸೂರಿನಿಂದ ಜಿಟಿ ದೇವೇಗೌಡ ಪುತ್ರ ಕಣಕ್ಕೆ?

ಹುಣಸೂರಿನಿಂದ ಜಿಟಿ ದೇವೇಗೌಡ ಪುತ್ರ ಕಣಕ್ಕೆ?

ಇತ್ತೀಚೆಗೆ ಹುಣಸೂರು ಕ್ಷೇತ್ರದಿಂದ ಜೆಡಿಎಸ್​​ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಮಾಜಿ ಸಚಿವ ಜಿ.ಟಿ ದೇವೇಗೌಡರ ಪುತ್ರನಿಗೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದರು. ಈ ವೇಳೆ ಜಿ.ಟಿ ದೇವೇಗೌಡರು, ನನ್ನ ಮಗ ಬೇಕಾದರೇ ಚಾಮುಂಡೇಶ್ವರಿ ಸ್ಪರ್ಧೆ ಮಾಡಲಿ. ಆದರೆ, ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ ಎಂದು ನಿರಾಕರಿಸಿದ್ದರು.

 ಡಿಸೆಂಬರ್ 5ಕ್ಕೆ ಉಪ ಚುನಾವಣೆ

ಡಿಸೆಂಬರ್ 5ಕ್ಕೆ ಉಪ ಚುನಾವಣೆ

ಸದ್ಯ ನಾಲ್ಕನೇ ಉಪಚುನಾವಣೆಗೆ ಹುಣಸೂರು ಕ್ಷೇತ್ರ ಸಿದ್ಧವಾಗಿದೆ. ಮೂರು ಪಕ್ಷಗಳು ಉಪಚುನಾವಣೆ ಗೆಲ್ಲುತ್ತೇವೆ ಎಂದು ಹುಮ್ಮಸ್ಸಿನಿಂದ ಬೀಗುತ್ತಿವೆ. ಅದಕ್ಕಾಗಿ ತಂತ್ರವನ್ನೂ ಹೆಣೆಯುತ್ತಿವೆ. ಈ ಮಧ್ಯೆ ಸುಪ್ರೀಂಕೋರ್ಟ್​​ ಆದೇಶದ ಮೇರೆಗೆ ಅಕ್ಟೋಬರ್​​ 21ರಂದು ನಡೆಯಬೇಕಿದ್ದ ಉಪಚುನಾವಣೆಯನ್ನು ಕೇಂದ್ರ ಚುನಾವಣೆ ಆಯೋಗ ಡಿಸೆಂಬರ್​​ 5ಕ್ಕೆ ಮುಂದೂಡಿದೆ.

 ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ವಿಶ್ವನಾಥ್ ಹೇಳಿದ್ದರು

ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ವಿಶ್ವನಾಥ್ ಹೇಳಿದ್ದರು

ಕೆಲವು ದಿನಗಳ ಹಿಂದೆ ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ಮಾಡುವುದಾಗಿ ಅನರ್ಹ ಶಾಸಕ ಎಚ್​​. ವಿಶ್ವನಾಥ್ ಹೇಳಿದ್ದರು. ನಾನು ಸ್ಪರ್ಧೆ ಮಾಡಬೇಕೋ, ಮಗನನ್ನು ಕಣಕ್ಕಿಳಿಸಬೇಕೋ ಎಂದು ಕಾದು ನೋಡೋಣ. ಬಿಜೆಪಿ ಸೇರ್ಪಡೆ ಎನ್ನುವುದು ಒಂದು ಶಾಸ್ತ್ರವಷ್ಟೇ. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಬೇಕು, ಇನ್ನೇನು ಜೆಡಿಎಸ್​​ಗೆ ಹೋಗಲಿಕ್ಕಾಗುತ್ತದೆ ಎಂದಿದ್ದರು.

English summary
BJP High Command has Given instruction. Big shock for Disqualified MLA H Vishwanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X