ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ಸುರೇಶ್ ಬಿಡುಗಡೆ ಮಾಡಿದ್ದ ಬಿಎಸ್ ವೈ ಹೆಸರಿನ ಪತ್ರ ನಕಲಿ:ಬಿಜೆಪಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಸಚಿವ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೆ ಯಾವುದೇ ಪತ್ರ ಬರೆದಿಲ್ಲ ಎಂದು ಬಿಜೆಪಿ ದಾಖಲೆ ಸಹಿತ ಸ್ಪಷ್ಟನೆ ನೀಡಿದೆ.

ಡಿಕೆಶಿ ವಿರುದ್ಧ ಷಡ್ಯಂತ್ರ: ಖುದ್ದು ಮೋದಿಗೆ ಮೊರೆ ಹೋದ ಡಿಕೆ ಸುರೇಶ್ ಡಿಕೆಶಿ ವಿರುದ್ಧ ಷಡ್ಯಂತ್ರ: ಖುದ್ದು ಮೋದಿಗೆ ಮೊರೆ ಹೋದ ಡಿಕೆ ಸುರೇಶ್

ತಮ್ಮ ಸಹೋದರ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದ್ದು, ಸಿಬಿಐ, ಇಡಿ, ಮತ್ತು ಐಟಿ ಇಲಾಖೆಗಳು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದೆ. ಹೀಗಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ದೂರು ನೀಡುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದರು.

ಬಿಜೆಪಿಗೆ ಸೇರುತ್ತಿಲ್ಲ ಎನ್ನುವ ಕೋಪಕ್ಕೆ ಬಿಎಸ್ ಯಡಿಯೂರಪ್ಪ ಅವರು ಆದಾಯ ತೆರಿಗೆ ಇಲಾಖೆಗೆ ಡಿಕೆ ಶಿವಕುಮಾರ್ ಅವರ ವಿರುದ್ಧ ಪತ್ರ ರವಾನಿಸಿದ್ದರು ಎಂದು ಒಂದು ಪತ್ರವನ್ನು ಬಿಡುಗಡೆ ಮಾಡಿದ್ದರು.

Bjp clarifies BSY never written letter to IT against DKS

ಇದಕ್ಕೆ ಸ್ಪಷ್ಟನೆ ನೀಡಿರುವ ಬಿಜೆಪಿ ಡಿಕೆ ಸುರೇಶ್ ಬಿಡುಗಡೆ ಮಾಡಿರುವ ಪತ್ರ ನಕಲಿ, ಇದೊಂದು ಕಾಂಗ್ರೆಸ್ ಕುತಂತ್ರ, ಬಲಭಾಗದಲ್ಲಿ ಬಳಸಲಾದ ಲೆಟರ್ ಹೆಡ್ ಹಾಗೂ ಎಡಭಾಗದ ನಕಲಿ ಪತ್ರಕ್ಕೆ ಬಳಸಿದ ಲೆಟರ್ ಹೆಡ್ ಗೆ ಇರುವ ವ್ಯತ್ಯಾಸ ಗಮನಿಸಿದರೆ ಕಾಂಗ್ರೆಸ್ ಕೈಚಳಕ ಗೋಚರಿಸುತ್ತದೆ.

ನೋಟು ಬದಲು ಪ್ರಕರಣ: ಬಂಧನದ ಭೀತಿಯಲ್ಲಿ ಡಿಕೆಶಿ ಆಪ್ತರು ನೋಟು ಬದಲು ಪ್ರಕರಣ: ಬಂಧನದ ಭೀತಿಯಲ್ಲಿ ಡಿಕೆಶಿ ಆಪ್ತರು

Bjp clarifies BSY never written letter to IT against DKS

ಪತ್ರದಲ್ಲಿರುವ ನಕಲಿ ಅಂಶಗಳೇನು?
1) ಬಿಎಸ್ ವೈ ಅವರ ಲೆಟರ್ ಹೆಡ್ ನಲ್ಲಿ ಬೆಂಗಳೂರು ನಿವಾಸದ ವಿಳಾಸವಿದ್ದು ಫೋನ್ ನಂಬರ್ ಶಿವಮೊಗ್ಗದ್ದಿದೆ
2) ಬಿಎಸ್ ವೈ ಅವರ ಇ ಮೇಲ್ ಐಡಿಯಲ್ಲಿ ಬಿಎಸ್ ವೈ ಮೊದಲ ಲೆಟರ್ 'ಬಿ'' B'ಕ್ಯಾಪಿಟಲ್ ನಲ್ಲಿದೆ, ನಿಜವಾದ ಲೆಟರ್ ಹೆಡ್ ನಲ್ಲಿ ಬಿಎಸ್ ವೈ ಮೊದಲ ಹೆಸರು 'ಬಿ'' b'ಸ್ಮಾಲ್ ಲೆಟರ್ ನಲ್ಲಿದೆ.
3) ಬಿಎಸ್ ವೈ ಅವರ ಸಹಿ ಯಾವಾಗಲೂ ಬಲಭಾಗದಲ್ಲಿದೆ, ಆದರೆ ನಕಲು ಮಾಡಿರುವ ಪತ್ರದಲ್ಲಿ ಸಹಿಯನ್ನು ಎಡಭಾಗಕ್ಕೆ ಮಾಡಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ಕುರಿತು ಸಚಿವ ಡಿಕೆ ಶಿವಕುಮಾರ್ ಈಗಾಗಲೇ ಕೆಲವು ಕೇಸ್ ಹಾಕಿದ್ದಾರೆ, ನ್ಯಾಯಾಂಗ ವ್ಯವಸ್ಥೆ ಗೆ ಗೌರವ ಕೊಟ್ಟು ತನಿಖೆ ಎದುರಿಸುತ್ತೇನೆ, ಈ ಪತ್ರ ನಕಲಿ ಆಗಿದ್ದರೆ ಸಂತೋಷವಾಗುತ್ತದೆ ಎಂದಿದ್ದಾರೆ.

English summary
State Bjp has clarified that state Bjp president B.S.Yeddyurappa had never written to Income Tax department against minister D.K.Shivakumar and also said letter was fake which released by MP D.K.Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X