30 ಸಾವಿರ ಮೌಲ್ಯದ ಬೈಕ್ ಮಾಲೀಕನಿಗೆ 42,000 ರೂ. ದಂಡ!

ಬೆಂಗಳೂರು, ಅಕ್ಟೋಬರ್ 30 : ಬೆಂಗಳೂರು ಸಂಚಾರಿ ಪೊಲೀಸರು ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ 42,500 ರೂ. ದಂಡ ಹಾಕಿದ್ದಾರೆ. ವ್ಯಕ್ತಿಯ ಬೈಕ್ ಮೌಲ್ಯವೇ 28 ರಿಂದ 30 ಸಾವಿರ ರೂ.ಗಳು!

ಮಡಿವಾಳ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಬೈಕ್ ಸವಾರ ಅರುಣ್ ಕುಮಾರ್‌ರನ್ನು ಹಿಡಿದಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಿದಾಗ 77 ಬಾರಿ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ.

 Bike Rider Fined 42,500 For Violation Of Traffic Rules

ಎಲ್ಲಾ ಪ್ರಕರಣಗಳ ದಂಡ ಮೊತ್ತ ಸೇರಿ 42,500 ರೂ. ಆಗಿದೆ. ದಂಡದ ರಶೀದಿಯನ್ನು ಬೈಕ್ ಸವಾರ ಅರುಣ್ ಕುಮರ್‌ಗೆ ನೀಡಿದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯದಲ್ಲಿ ದಂಡ ಕಟ್ಟಿ ಬೈಕ್ ವಾಪಸ್ ಪಡೆಯಬಹುದು.

ಬೈಕ್ ಮಾಲೀಕ ಅರುಣ್ ಕುಮಾರ್ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಿದ್ದಾರೆ. ಅದರ ಮೌಲ್ಯ ಸುಮಾರು 28 ರಿಂದ 30 ಸಾವಿರ ರೂ.ಗಳು. ಆದರೆ, ಈಗ ಬೈಕ್ ಬಿಡಿಸಿಕೊಳ್ಳಲು 42,500 ರೂ. ದಂಡವನ್ನು ಪಾವತಿ ಮಾಡಬೇಕಿದೆ.

ಕೆಲವು ದಿನಗಳ ಹಿಂದೆ ಪೂರ್ವ ವಿಭಾಗದ ಸಂಚಾರಿ ಪೊಲೀಸರು 33 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ 12,500 ರೂ. ದಂಡ ಹಾಕಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಸಂಚಾರಿ ಪೊಲೀಸರು ವಾಹನ ಸವಾರರ ಮೇಲೆ ದಂಡ ಪ್ರಯೋಗ ಹೆಚ್ಚಿಸಿದ್ದಾರೆ.

5ಕ್ಕಿಂತ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರು ದಂಡ ಮೊತ್ತವನ್ನು ಪಾವತಿ ಮಾಡಿಲ್ಲದಿದ್ದರೆ ಸಂಚಾರಿ ಪೊಲೀಸರು ಮನೆಗೆ ಬಂದು ದಂಡ ಸಂಗ್ರಹ ಮಾಡುತ್ತಿದ್ದಾರೆ.

ಕೋವಿಡ್ ಪರಿಸ್ಥಿತಿಯಲ್ಲಿ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರನ್ನು ಹಿಡಿಯುತ್ತಿರಲಿಲ್ಲ. ಈಗ ಪೊಲೀಸರು ಪುನಃ ಕಾರ್ಯಾಚರಣೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+