ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾದ ಟೆಕ್ಕಿ
ಬೆಂಗಳೂರು ಫೆಬ್ರವರಿ 19: ಮಂಗಳವಾರ ನಗರದ ಎರಡು ಕಡೆ ನಡೆದ ಅಪಘಾತ ಘಟನೆಗಳಿಂದ ಟಕ್ಕಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಇಬ್ಬಲೂರು ಜಂಕ್ಷನ್ ಬಳಿ ಬಿಎಂಟಿಸಿ ವೋಲ್ವೊ ಬಸ್ಸಿನ ಚಕ್ರ ಹರಿದು ಬೈಕ್ ಸವಾರ ವಿಷ್ಣುತೀರ್ಥ (31) ಎಂಬ ಟೆಕ್ಕಿ ಮೃತಪಟ್ಟಿದ್ದಾರೆ. ಚಿಕ್ಕಜಾಲ ಹಾಗೂ ಎಚ್‌ಎಸ್‌ಆರ್ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಅಪಘಾತಗಳು ಸಂಭವಿಸಿದ್ದು, ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ಆಗಿದ್ದ ವಿಷ್ಣುತೀರ್ಥ, ಸ್ನೇಹಿತ ಸಾಯಿಕೃಷ್ಣ (26) ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಗಾಯಗೊಂಡಿರುವ ಸಾಯಿಕೃಷ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಬಿ.ಬಿ.ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಗುದ್ದಿದ್ದರಿಂದಾಗಿ ಸವಾರ ಹರೀಶ್‌ಬಾಬು (32) ಎಂಬುವರು ಮೃತಪಟ್ಟಿದ್ದಾರೆ. ದೇವನಹಳ್ಳಿ ನಿವಾಸಿ ಹರೀಶ್‌ಬಾಬು, ಸಾಫ್ಟ್‌ವೇರ್ ಎಂಜಿನಿಯರ್. ಚಾಲಕ ಪರಾರಿಯಾಗಿದ್ದಾನೆ.












Click it and Unblock the Notifications