• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ

|

ಬೆಂಗಳೂರು, ಜುಲೈ 16 : ಕಾರು ಚಾಲನೆ ಮಾಡುವಾಗ ಹೃದಯಾಘಾತದಿಂದ ಅಸ್ವಸ್ಥಗೊಂಡವರನ್ನು ಸಕಾಲಕ್ಕೆ ಆಸ್ಪತ್ರಗೆ ಸೇರಿಸಿ ಸಂಚಾರಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಚಿಕ್ಕಪೇಟೆ ಸಂಚಾರಿ ಠಾಣೆಯ ಪೊಲೀಸರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಚಿಕ್ಕಪೇಟೆಯ ಸುಲ್ತಾನ್ ಪೇಟೆ ಅಡ್ಡರಸ್ತೆಯ ಬಳಿ ಮಂಗಳವಾರ ಈ ಘಟನೆ ನಡೆದಿದೆ. ರಾಜಾಜಿನಗರದ ರಾಮಣ್ಣ (70) ಅವರನ್ನು ರಕ್ಷಿಸಿದ ಸಂಚಾರಿ ಪೊಲೀಸರು ಅವರ ಜೀವ ಉಳಿಸಿದ್ದಾರೆ. ಪಿಎಸ್‌ಐ ರಾಮಚಂದ್ರ, ಹೆಡ್ ಕಾನ್ಸ್‌ಟೇಬಲ್ ಲಿಂಗರಾಜು, ಕಾನ್ಸ್‌ಟೇಬಲ್ ವೆಂಕಟೇಶ್ ಈ ಕಾರ್ಯಕ್ಕೆ ಸಹಾಯ ಮಾಡಿದ್ದಾರೆ. [ಇವರು ಸಿವಿ ರಾಮನ್ ನಗರದ ಸಿಂಗಂ ಭಾಸ್ಕರ್]

ಘಟನೆ ವಿವರ : ಮೊಮ್ಮಕ್ಕಳನ್ನು ಕರೆದುಕೊಂಡು ಕಾರಿನಲ್ಲಿ ರಾಮಣ್ಣ ಅವರು ತೆರಳುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಆಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್‌ಐ ರಾಮಚಂದ್ರಯ್ಯ ಅವರು ಇದನ್ನು ಗಮನಿಸಿದ್ದಾರೆ. [ಸರಗಳ್ಳನನ್ನು ಹಿಡಿದ ಸಾಹಸಿ ಸಂಚಾರಿ ಪೊಲೀಸ್ ಪೇದೆ]

ಕಾರಿನ ಬಳಿ ಹೋದಾಗ ಕಾರನ್ನು ಚಾಲನೆ ಮಾಡುತ್ತಿದ್ದ ರಾಮಣ್ಣ ಅವರು ಅಸ್ವಸ್ಥರಾಗಿರುವುದು ತಿಳಿದುಬಂದಿದೆ. ತಕ್ಷಣದ ಅವರು ಕಾನ್ಸ್‌ಟೇಬಲ್ ವೆಂಕಟೇಶ್ ಮತ್ತು ಲಿಂಗರಾಜು ಅವರ ಜೊತೆ ಸೇರಿ, ರಾಮಣ್ಣ ಅವರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ.

ಮೂವರು ಸೇರಿ ರಾಮಣ್ಣ ಅವರನ್ನು ಆಟೋದಲ್ಲಿ ಕೂರಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಆಸ್ಪತ್ರಗೆ ದಾಖಲು ಮಾಡಿದ್ದಾರೆ ಮತ್ತು ರಾಮಣ್ಣ ಅವರ ಜೀವವನ್ನು ಉಳಿಸಿದ್ದಾರೆ.

ಮತ್ತೊಬ್ಬರು ಸಿಬ್ಬಂದಿ ರಸ್ತೆ ಮಧ್ಯದಲ್ಲಿ ನಿಂತಿದ್ದ ಕಾರನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸುಗಮವಾಗಿ ವಾಹನಗಳು ಸಂಚಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Big salute for the Bengaluru Chickpet traffic police sub-inspector Ramachandraiah, head constable Lingaraju and constable Venkatesh who saved 70-year-old man life on Tuesday, July 14, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more