ಕೊರೊನಾಗೆ ಗೋಮೂತ್ರದಿಂದ ಔಷಧ ತಯಾರಿಸಿದ ಬೆಂಗಳೂರಿನ ವೈದ್ಯ ಬಳಗ
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನಲ್ಲಿ ಭಾರತಿ ಕರ್ನಾಟಕ ಆಯುರ್ವೇದ ವೈದ್ಯ ಸಮೂಹ ಕೋವಿಡ್ 19 ಚಿಕಿತ್ಸೆಗೆ ಗೋಮೂತ್ರ ಆಧಾರಿತ ಸಾರಾ ಔಷಧಿಯನ್ನು ತಯಾರಿಸಿದೆ. ಈ ಔಷಧಿಯಿಂದ ಕೊರೊನಾ ವೈರಾಣು ಪೀಡಿತ ರೋಗಿಗಳನ್ನು ಗುಣಡಿಸಿಬಹುದು ಎಂದು ತಿಳಿಸಿದೆ.
ವೈದ್ಯ ಡಾ ಡಿಪಿ ರಮೇಶ್ ನೇತೃತ್ವದಲ್ಲಿ ಔಷಧಿ ತಯಾರಿಕೆಯಾಗಿದೆ. ವೈದ್ಯ ಡಿಪಿ ರಮೇಶ್ 20 ವರ್ಷಗಳ ಚಿಕಿತ್ಸಾ ಅನುಭವ ಹೊಂದಿದ್ದಾರೆ. ವೈರಾಣು ಸಂಬಂಧಿಸಿದ ಕಾಯಿಲೆಯನ್ನು ಗುಣ ಮಾಡಿದ್ದಾರೆ. ಈ ಅನುಭವಗಳ ಮೇಲೆ ಕೊರೊನಾ ರೋಗ ಲಕ್ಷಣಗಳನ್ನು ಗಮನಿಸಿ ಗೋಮೂತ್ರ ಆಧಾರಿತ ಸಾರಾ ಔಷಧವನ್ನು ತಯಾರು ಮಾಡಿದ್ದಾರಂತೆ.
ಕೊರೊನಾ ಪೀಡಿತ ವ್ಯಕ್ತಿಯ ಗಂಟಲು ದ್ರವದ ಮಾದರಿಯ ಮೇಲೆ ಪ್ರಯೋಗ ಮಾಡಿ ಅದರ ಫಲಿತಾಂಶದ ಆಧಾರದಿಂದ ರೋಗಿಗಳ ಚಿಕಿತ್ಸೆಗೆ ಈ ಔಷಧವನ್ನು ಬಳಸುವಂತೆ ಆರೋಗ್ಯ ಕರ್ನಾಟಕ ಸರ್ಕಾರಕ್ಕೆ ಡಾ ಡಿಪಿ ರಮೇಶ್ ತಂಡ ಮನವಿ ಮಾಡಿದೆ.

ಸದ್ಯ, ಭಾರತಿ ಕರ್ನಾಟಕ ಆಯುರ್ವೇದ ವೈದ್ಯ ಸಮೂಹ ಗೋಮೂತ್ರ ಆಧಾರಿತ ಸಾರಾ ಔಷಧದ ಅನುಮೋದನೆಗೆ ಕೇಂದ್ರ ಮತ್ತು ರಾಜ್ಯ ಆರೋಗ್ಯ ಸಚಿವರಿಗೆ ಕಳುಹಿಸಲಾಗಿದೆ. ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.












Click it and Unblock the Notifications