Dam Water Level: ಧಾರಾಕಾರ ಮಳೆಗೆ ಪ್ರಮುಖ ನದಿಗಳು, ಅಣೆಕಟ್ಟುಗಳು ಭರ್ತಿ, ಇಂದಿನ ನೀರಿನ ವಿವರ
ಬೆಂಗಳೂರು, ಜುಲೈ 23: ಮುಂಗಾರು ಮಳೆ ಸಿಂಚನ ಜೋರಾಗಿದ್ದು, ಭಾರೀ ಮಳೆ ಮುಂದುವರಿದಿದೆ. ಇದರಿಂದ ರಾಜ್ಯ ಪ್ರಮುಖ ಜಲಾಶಯಗಳಲ್ಲಿ ನೀರು ಸಂಗ್ರಹ ಹೆಚ್ಚಾಗಿದೆ. ಜುಲೈ ಹೊತ್ತಿಗೆ ಬಹುತೇಕ ಡ್ಯಾಂಗಳಲ್ಲಿ ನೀರು ಭರ್ತಿಯಾಗಿದೆ. ಮಲೆನಾಡು ಹಾಗೂ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾಗಾದ್ರೆ ಜಲಾಶಯಗಳಲ್ಲಿ ಇಂದು ಜುಲೈ 23ರಂದು ನೀರಿನ ಒಳಹರಿವು ಹಾಗೂ ಹೊರ ಹರಿವು ಎಷ್ಟಿದೆ?
ರಾಜ್ಯದ ಬಾಗಮಂಡಲ, ಕೊಡಗು, ಮಡಿಕೇರಿ, ಸೋಮವಾರ ಪೇಟೆ, ಶಿವಮೊಗ್ಗ, ಕೇರಳ ಭಾಗಗಳಲ್ಲಿ ಜೂನ್ ಮೊದಲ ಭಾಗದಿಂದಲೂ ಭಾರೀ ಮಳೆ ಆಗುತ್ತಲೇ ಇದೆ. ದಾಖಲೆಯ ಮಳೆ ಆಗುತ್ತಿದೆ. ಇದರಿಂದ ಭದ್ರಾ ನದಿ, ಹಾರಂಗಿ ನದಿ, ಹೇಮಾವತಿ ನದಿ, ಕಾವೇರಿ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದ ಆಯಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯಗಳಲ್ಲಿ ಒಳ ಮತ್ತು ಹೊರ ಹರಿವು ಏರಿಕೆ ಆಗಿದೆ.

ರಾಜ್ಯದಲ್ಲಿ ಜಲಶಯಗಳ ಇಂದಿನ ಮಟ್ಟ ಎಷ್ಟಿದೆ?
ಭದ್ರಾ ಜಲಾಶಯ ಇಂದಿನ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 71.54 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 63.59 ಟಿಎಂಸಿ
* ಇಂದಿನ ಒಳಹರಿವು: 9398 ಕ್ಯೂಸೆಕ್
* ಹೊರ ಹರಿವಿನ ವಿವರ: 7118 ಕ್ಯೂಸೆಕ್
ಕೆಆರ್‌ಎಸ್ ಡ್ಯಾಂ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 49.45 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 47.90 ಟಿಎಂಸಿ
* ಇಂದಿನ ಒಳಹರಿವು: 14,549 ಕ್ಯೂಸೆಕ್
* ಹೊರ ಹರಿವಿನ ವಿವರ: 10,720 ಕ್ಯೂಸೆಕ್
ಹಾರಂಗಿ ಜಲಾಶಯದ ಇಂದಿನ ಮಟ್ಟ
* ಡ್ಯಾಂ ಒಟ್ಟು ನೀರಿನ ಮಟ್ಟ: 8.50 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 7.64 ಟಿಎಂಸಿ
* ಇಂದಿನ ಒಳಹರಿವು: 3,308 ಕ್ಯೂಸೆಕ್
* ಹೊರ ಹರಿವಿನ ವಿವರ:4850 ಕ್ಯೂಸೆಕ್
23.07.2025. ರಂತೆ ಪ್ರಮುಖ #ಜಲಾಶಯದ ಮಟ್ಟ.
— Karnataka State Natural Disaster Monitoring Centre (@KarnatakaSNDMC) July 23, 2025
Major #Reservoir Level as of 23.07.2025.
Source: WRDO & KPTCL. #KSNDMC pic.twitter.com/AsxaIGuSLZ
ಕಬಿನಿ ಅಣೆಕಟ್ಟಿನ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 19.52 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 19.28 ಟಿಎಂಸಿ
* ಇಂದಿನ ಒಳಹರಿವು: 12,122 ಕ್ಯೂಸೆಕ್
* ಹೊರ ಹರಿವಿನ ವಿವರ: 12000 ಕ್ಯೂಸೆಕ್
ಹೇಮಾವತಿ ಡ್ಯಾಂನಲ್ಲಿ ಎಷ್ಟಿದೆ ನೀರು?
* ಡ್ಯಾಂ ಒಟ್ಟು ನೀರಿನ ಮಟ್ಟ: 37.10 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 36.17 ಟಿಎಂಸಿ
* ಇಂದಿನ ಒಳಹರಿವು: 6862 ಕ್ಯೂಸೆಕ್
* ಹೊರ ಹರಿವಿನ ವಿವರ: 6799 ಕ್ಯೂಸೆಕ್
ಆಲಮಟ್ಟಿ ಡ್ಯಾಂ ಮಾಹಿತಿ
* ಡ್ಯಾಂ ಒಟ್ಟು ನೀರಿನ ಮಟ್ಟ: 123. 08 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 98.50 ಟಿಎಂಸಿ
* ಇಂದಿನ ಒಳಹರಿವು: 44050 ಕ್ಯೂಸೆಕ್
* ಹೊರ ಹರಿವಿನ ವಿವರ: 25770 ಕ್ಯೂಸೆಕ್
ಕರ್ನಾಟಕದಾದ್ಯಂತ ಮುಂದಿನ ಒಂದು ವಾರಗಳ ಕಾಲ ಕರಾವಳಿ ಮೂರು ಜಿಲ್ಲೆಗಳು, ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಆಗಲಿದೆ. ಮಳೆ ಹೀಗೆ ಮುಂದುವರಿದರೆ ಡ್ಯಾಂಗಳು, ನದಿಗಳಲ್ಲಿ ನೀರು ಮತ್ತಷ್ಟು ಸಂಗ್ರಹವಾಗಬಹುದು.












Click it and Unblock the Notifications