Smartphone Zombies: ಬೆಂಗಳೂರಲ್ಲಿ 'ಸ್ಮಾರ್ಟ್‌ಫೋನ್ ಜಾಂಬೀಸ್ ನಿಂದ ಜಾಗೃತರಾಗಿರಿ' ಬೋರ್ಡ್: ವೈರಲ್
ಬೆಂಗಳೂರು, ಜನವರಿ 22: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (ಮೊಬೈಲ್) ಜೀವನದ ಅವಿಭಾಜ್ಯ ಅಂಗವೇ ಆಗಿದೆ. ದಿನನಿತ್ಯದ ಬಹುತೇಕ ಸಮಯ ನಾವು ಮೊಬೈಲ್ ಜತೆ ಕಳೆಯುತ್ತಿದ್ದೇವೆ. ಈ ಕುರಿತು ಬೆಂಗಳೂರು ನಗರ ಪೊಲೀಸರು ಮೂಡಿಸಿರುವ ಜಾಗೃತಿಯ 'ಸ್ಮಾರ್ಟ್‌ಫೋನ್ ಜೊಂಬಿ' (Beware of Smartphone Zombies) ನಾಮಫಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರಸ್ತೆ ನಡೆದು ಹೋಗುವಾಗ, ಪ್ರಯಾಣದಲ್ಲಿ ಮೊಬೈಲ್ ಬಳಕೆಯಿಂದ ಸಾಕಷ್ಟು ಅವಘಡ ನಡೆದಿವೆ. ಇಂತಹ ಅವಘಡಗಳ, ಸ್ವತಃ ಮೊಬೈಲ್ ಬಳಕೆದಾರರು ಎಷ್ಟರ ಮಟ್ಟಿಗೆ ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಗೀಳಿಗೆ ಬಿದ್ದಿದ್ದಾರೆ ಎಂಬುದನ್ನು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ಜಾಗೃತಿಯ ಫೋಟೋ ಸೂಚಿಸುತ್ತದೆ.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಕೃತಿ ಎಂಬುವವರು ಈ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಕಾಣುವಂತೆ 'ಬೆಂಗಳೂರಿನಲ್ಲಿ ರಸ್ತೆಯೊಂದರಲ್ಲಿ ಈ ಸ್ಮಾರ್ಟ್‌ಫೋನ್ ಜಾಂಬಿ ಸೈನ್‌ಬೋರ್ಡ್ ಅಳವಡಿಸಲಾಗಿದೆ. ಇದು ನಾಗರಿಕರಿಗೆ ಹೊಸ ರೀತಿಯ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತದೆ.
ಡಿಜಿಟಲ್ ವ್ಯಾಕುಲತೆಯ ಸೂಚಕದ ಬೋರ್ಡ್
'ಸ್ಮಾರ್ಟ್‌ಫೋನ್ ಸೋಮಾರಿಗಳ ಬಗ್ಗೆ ಎಚ್ಚರದಿಂದಿರಿ, ಸಮಾಜವನ್ನು ಆವರಿಸುತ್ತಿರುವ ಡಿಜಿಟಲ್ ವ್ಯಾಕುಲತೆಯ ಮಹಾಮಾರಿಯು ಪ್ರಬಲವಾಗಿ ನಿಂತಿದೆ ಎಂ ಸಂದೇಶವನ್ನು ಈ ನಾಮಫಲಕ ತಿಳಿಸುತ್ತಿದೆ.
ಈ ಜಾಗೃತಿ ಬೋರ್ಡ್ ನಮ್ಮ ಇಡೀ ಪೀಳಿಗೆಯನ್ನು ಏಕಾಂಗಿಯಾಗಿ ಆಕ್ರಮಣ ಮಾಡಿರುವ ಮೊಬೈಲ್ ವ್ಯಸನ ಕುರಿತು ತಿಳಿಸುತ್ತಿದೆ. ಈ ಬೋರ್ಡ್ ಫೋಟೋ ವೈರಲ್ ಆಗಿದೆ. ಸಾರ್ವಜನಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಸ್ಮಾರ್ಟ್‌ಫೋನ್ ಜೋಂಬಿಸ್' ಎಂಬ ಪದವು ನಾವು ಮೊಬೈಲ್ ಫೋನ್‌ಬಳಿಕೆಯಲ್ಲಿ ನಿರತವಾಗಿರುವುದನ್ನು ತೋರ್ಪಡಿಸುತ್ತದೆ. ಬಳಕೆದಾರರು ಭೌತಿಕವಾಗಿ ಪ್ರಪಂಚದಲ್ಲಿಯೇ ಇದ್ದರೂ ಸಹಿತ ಅವರು ಇಲ್ಲಿಯ ಸಂಪರ್ಕ ಕಡಿತಗೊಂಡಂತೆ ವರ್ತಿಸುತ್ತಾರೆ.
ಸುರಕ್ಷತಾ ಅಪಾಯ ಎದುರಾಗುವ ಸಾಧ್ಯತೆ
ಈ ನಡವಳಿಕೆಯಿಂದ ಅವರು ಸಾಮಾಜಿಕ ಸಂಪರ್ಕದೊಂದಿಗೆ ಕಡಿತಗೊಂಡಿರುತ್ತಾರೆ. ಆಲಸಿಗೆ ದೂಡುತ್ತದೆ. ಮುಖ್ಯವಾಗಿ ರಸ್ತೆಯಲ್ಲಿ ನಡೆಯುವಾಗಿ, ಪ್ರಯಾಣ ಇನ್ನಿತರ ಸನ್ನವೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೆ ಈ ಮೊಬೈಲ್ ಬಳಕೆ ಕಂಡು ಬರುತ್ತಿದೆ. ಇದರ ಸರಕ್ಷತಾ ಅಪಾಯ ಎದುರಾಗುವಂತೆ ಮಾಡಿದೆ.
ರಸ್ತೆಗಳಲ್ಲಿ ಸಹ ನಿರಂತರ ಮೊಬೈಲ್ ಬಳಿಕೆಯಿಂದಾಗುವ ಅಪಾಯ ಬಗ್ಗೆ ವ್ಯಂಗ್ಯಭರಿತ ಸೈನ್‌ಬೋರ್ಡ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಇದು ನಿಜವೇ? ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ಪ್ರಜ್ಞೆಯ ಕೊರತೆ
ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನನಿಬಿಡ ಜಂಕ್ಷನ್ (ಟ್ರಾಫಿಕ್) ಪಾದಾಚಾರಿಗಳು ದಾಟುವಾಗ ಫೋನ್‌ನಲ್ಲಿ ಮಾತನಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಗ್ಗೆ ಜನರಿಗೆ ಮೂಲಭೂತ ಪ್ರಜ್ಞೆಯ ಕೊರತೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸರು ರಾಕ್ಸ್ ಎಂದರೆ, ಮತ್ತೊಬ್ಬರು ಈ ಬ್ಯಾನರ್ ಮುಂಬೈನಲ್ಲಿ ಇರಬೇಕಿತ್ತು ಎಂದು ಬರೆದುಕೊಂಡಿದ್ದಾರೆ.












Click it and Unblock the Notifications