BESCOM: ವಿದ್ಯುತ್ ಕುರಿತ ಸಮಸ್ಯೆಗಳ ಪರಿಹಾರಕ್ಕೆ 8 ಜಿಲ್ಲೆ ಸಹಾಯವಾಣಿ ಬಿಡುಗಡೆ: ವಾಟ್ಸಾಪ್ ಮಾಡಿ

ಬೆಂಗಳೂರು, ಅಕ್ಟೋಬರ್ 04: ಕರ್ನಾಟಕದಲ್ಲಿ ಒಂದು ಕಡೆ ಉಚಿತ ವಿದ್ಯುತ್ ಪೂರೈಕೆ ಯೋಜನೆ ಜಾರಿಯಲ್ಲಿದೆ. ಮತ್ತೊಂದು ಕಡೆ ಲೋಡ್ ಶೇಡ್ಡಿಂಗ್ ಆಗುತ್ತಿದೆ ಎಂಬ ಆರೋಪ ವಿದೆ. ಈ ಸಂಬಂಧ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಂತೆ ವಿದ್ಯುತ್ ಕುರಿತು ಸಮಸ್ಯೆಗಳನ್ನು ಪರಿಹರಿಸಲು ಬೆಸ್ಕಾಂ ಮುಂದಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಒಟ್ಟು ಎಂಟು ಜಿಲ್ಲೆಗಳ ಸಹಾಯವಾಣಿ ಸಂಖ್ಯೆಗಳನ್ನು ಬುಧವಾರ ಬಿಡುಗಡೆ ಮಾಡಿದೆ. ವಿದ್ಯುತ್ ಕುರಿತು ಯಾವುದೇ ಸಮಸ್ಯೆಗಳು ಇದ್ದರೆ ಆಯಾ ಜಿಲ್ಲೆಗಳ ಗ್ರಾಹಕರು ನೀಡಿರುವ ಮೊಬೈಲ್ (ಸಹಾಯವಾಣಿ) ಸಂಖ್ಯೆಗಳಿಗೆ ವಾಟ್ಸಪ್‌ ಮಾಡಬೇಕು ಎಂದು ಬೆಸ್ಕಾಂ ತಿಳಿಸಿದೆ.

bescom-released-helpline-numbers

ಬಿಡುಗಡೆಯಾದ ಸಹಾಯವಾಣಿ ಪಟ್ಟಿ

*ಬೆಂಗಳೂರು ನಗರ- 82778 84011/82778 84012/82778 84013/ 82778 84014.

*ಕೋಲಾರ-82778 84015

*ಚಿಕ್ಕಬಳ್ಳಾಪುರ-82778 84016

*ಬೆಂಗಳೂರು ಗ್ರಾಮಾಂತರ-82778 84017

*ರಾಮನಗರ-82778 84018

*ತುಮಕೂರು-82778 84019

*ಚಿತ್ರದುರ್ಗ- 82778 84020

*ದಾವಣಗೆರೆ- 82778 84021

ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಆದರೆ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣಗಳಲ್ಲಿ ಸಹ ಇತ್ತೀಚಿನ ದಿನಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸುವಲ್ಲಿ ಸಂಸ್ಥೆಗಳು ವಿಫಲವಾಗಿವೆ ಎಂದು ಆರೋಪ ಕೇಳಿ ಬಂದಿವೆ.

ವಿದ್ಯುತ್ ಕಡಿತ/ ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಾಕಷ್ಟು ಸಮಸ್ಯೆ ತೊಂದರೆ ಆಗುತ್ತಿದೆ. ಆದ್ದರಿಂದ ಇಲ್ಲಸಲ್ಲದ ಕಾರಣಗಳು ಹೇಳದೆ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಸೇರಿದಂತೆ ಎಲ್ಲ ಸಂಬಂಧಿತ ಸಂಸ್ಥೆಗಳು ಸೂಕ್ತ ವಿದ್ಯುತ್ ಸರಬರಾಜು ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+